ರೈತ ಗುಂಪುಗಳ ನಿರ್ವಹಣೆ ಮತ್ತು ಅವಕಾಶಗಳ” ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

ಕೃಷಿ ಇಲಾಖೆ ಹೊನ್ನಾವರವತಿಯಿಂದ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ(ATMA)ಯೋಜನೆಯಡಿ “ರೈತ ಗುಂಪುಗಳ ನಿರ್ವಹಣೆ ಮತ್ತು ಅವಕಾಶಗಳ”  ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ನಗರಬಸ್ತಿಕೇರಿ ಗ್ರಾಮದ ಗಣಪತಿ ಮಂದಿರ ಸಭಾಭವನದಲ್ಲಿ ಹಮ್ಮಿಕೊಳಲಾಗಿತ್ತು
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು..

ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಮಾರುತಿ ನಾಯ್ಕ ಆದರ್ಶ ಸೇವಾ ಸಂಸ್ಥೆ ಹೊನ್ನಾವರರವರು ಮಾತನಾಡಿ ಕೃಷಿ ಉದ್ದೇಶಿತ ರೈತ ಗುಂಪುಗಳ ರಚನೆ ಒಂದು ಒಳ್ಳೆಯ ಕಲ್ಪನೆಯಾಗಿದೆ ಕೇವಲ ಉಳಿತಾಯ ಸಾಲ ತೆಗೆದುಕೊಳ್ಳುವುದರ ಜೊತೆಗೆ ಪ್ರತಿ ನಿತ್ಯ ನಾವು ನಮ್ಮನ್ನು ತೊಡಗಿಸಿಕೊಳ್ಳುವ ಕೃಷಿಯ ಕುರಿತು ವೈಜ್ಞಾನಿಕವಾಗಿ ವಿವಿಧ ರೀತಿಯ ಕೃಷಿ ಪದ್ಧತಿ ಅರಿಯಲು ಈ ರೈತ ಗುಂಪುಗಳು ಅನುಕೂಲವಾಗಿವೆ ಹಾಗೆಯೇ ಗುಂಪಿನ ರಚನೆಯ ಜೊತೆಗೆ ನಿರ್ವಹಣೆಯ ಕುರಿತು ಕೆಲವು ಕ್ರಮಗಳನ್ನು ಅನುಸರಿಸುವುದು ಅಷ್ಟೇ ಮುಖ್ಯವಾಗಿದೆ ಎoದರು.

ಪ್ರತಿ ತಿಂಗಳು ತಪ್ಪದೇ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಉಳಿತಾಯದ ಜೊತೆ ಸದಸ್ಯರು ಕೃಷಿ ಪದ್ಧತಿ ಮತ್ತು ತಮ್ಮ ಜಮೀನಿನ ಬೆಳೆಯಲ್ಲಿ ಕಂಡುಬರುವ ರೋಗ-ಕೀಟ ,ಬೆಳೆಗೆ ಪೋಷಕಾಂಶ ನಿರ್ವಹಣೆ ಇತರೇ ವಿಷಯದ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಮಾಹಿತಿ ಪಡೆದುಕೊಳವುದು, ಅಧ್ಯಕ್ಷರು,ಕಾರ್ಯದರ್ಶಿ,ಸದಸ್ಯರ ಜವಾಬ್ದಾರಿಗಳು ಗುಂಪಿನ ರಚನೆ ಮಾಡಿಕೊಳ್ಳುವುದರ ಜೊತೆ ಗುಂಪಿನ್ನು ಹೇಗೆ ನೆಡೆಸಿಕೊಂಡು ಹೋಗಬೇಕು ಅನ್ನುವುದರ ಸವಿಸ್ತಾರವಾಗಿ ತಿಳಿಸಿದರು ಹಾಗೆಯೇ ಅಸಂಘಟಿತ ವಲಯದ  ಇ-ಶ್ರಮ ಕಾರ್ಡ ನೋಂದಾವಣೆ ಮತ್ತು ಗುಂಪಿನ ನೋಂದಾವಣೆ ಪ್ರಯೋಜನ ಸೌಲಭ್ಯಗಳನ್ನು ತಿಳಿಸಿದರು.

ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಹಡಿನಬಾಳ ಶ್ರೀಮತಿ ಪುನೀತ ಎಸ್ ಬಿ ರವರು ರೈತರಿಗೆ ಇಲಾಖೆ ಯೋಜನೆ ಮಾಹಿತಿ ಮತ್ತು ಹೊಸದಾಗಿ ಅನುಷ್ಠಾನಕ್ಕೆ ಬಂದಿರು ರೈತ ಮಕ್ಕಳಿಗೆ ಸ್ಕಾಲರ್ಶಿಪ್,ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಕ್ಕೆ ಸಂಬಂಧಿಸಿದ ಫಾರ್ಮ್ ಮಶಿನರಿ ಬ್ಯಾಂಕ್  ಕುರಿತು ತಿಳಿಸಿದ್ದರು.ಶ್ರೀ ಪದ್ಮನಾಭ ಭಟ್ ಊರಿನ ಹಿರಿಯರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷರ ಪರವಾಗಿವಾಗಿ ಶ್ರೀ ಮಾರುತಿ ಭಟ್ ಪ್ರಗತಿ ಪರ ರೈತರು ಮಾತನಾಡಿ ಇಲಾಖೆಯು ನಮ್ಮ ಗ್ರಾಮದಲ್ಲಿ ನಾವಿರುವ ಕಡೆ ಬಂದು ಗುಂಪುಗಳನ್ನು ರಚನೆ ಮಾಡಿ ಈ ರೀತಿಯ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ತುಂಬಾ ಉಪಯುಕ್ತವಾಗಿದೆ ನಾವು ರೈತರು ಇಲಾಖೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಲ್ಲಾ ರೈತರಿಗೆ ವಿನಂತಿಸಿದರು.

ಸಿದ್ದೇಶ್ ಜಿ ಎಸ್ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು,ಹಡಿನಬಾಳ ಕಾರ್ಯಕ್ರಮದ ನಿರೂಪಣೆ ಜೊತೆ ರೈತರು ತಮ್ಮ ಮೊಬೈಲ್ ನಲ್ಲೇ ತಮ್ಮ ಜಮೀನಿನ ಬೆಳೆ ವಿವರ ಹೇಗೆ ದಾಖಲೀಕರಣ ಮಾಡಬವುದು ಎಂದು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದ್ದರು,ಗುಂಪಿನ ರೈತರು ನಿರಂತರ ಕೃಷಿ ಪೂರಕ ಮಾಹಿತಿಗೆ ಅಡಿಕೆಪತ್ರಿಕೆ,ಕೃಷಿವನ,ಕೃಷಿಕ,ಕೃಷಿ ಮುನ್ನುಡಿ ಸಂಚಿಕೆಗಳ ಚಂದಾದರಾಗುವುದು ಮತ್ತು ಮುಂದಿನ ದಿನದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕಾರ್ಯಾಗಾರ ಆಯೋಜನೆಗೆ ರೈತರಿದ ಅಭಿಪ್ರಾಯ ಸಂಗ್ರಹಿಸಿದರು ಸ್ಮಿತಾ ಹೆಚ್ ಎನ್  ಸಹಾಯಕ ತಾಂತ್ರಿಕ ವ್ಯವಸ್ಥಾಪಕರು,ಮಂಕಿರವರು ವಂದಿಸಿದ್ದರು ಗಜಾಲ ಶೇಕ್ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version