ಕುಮಟಾ, ಹೊನ್ನಾವರ, ಅಂಕೋಲಾದಲ್ಲಿ ನಾಳೆ ಎಲ್ಲೆಲ್ಲಿ ಎಲ್ಲೆಲ್ಲಿ ವ್ಯಾಕ್ಸಿನೇಷನ್ ಇದೆ ನೋಡಿ? ಈ ಕುರಿತ ವಿವರ ಇಲ್ಲಿದೆ
ಕುಮಟಾ : ತಾಲೂಕಿನಲ್ಲಿ ನಾಳೆ 1180 ಕೋವಿಶೀಲ್ಡ್ ಮತ್ತು 750 ಕೋವ್ಯಾಕ್ಸಿನ್ ಲಭ್ಯವಿದೆ. ಕುಮಟಾ ತಾಲೂಕಾ ಆಸ್ಪತ್ರೆಯಲ್ಲಿ 190, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 190, ಹೊಸ್ಕೇರಿ 100, ಬರ್ಗಿ ನಂಬರ್ 2, 100, ಕತಗಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 20, ವನ್ನಳ್ಳಿ ಉರ್ದು ಶಾಲೆ 400, ಹಿಣಿ ಉದರ್ಗ ಶಾಲೆಯಲ್ಲಿ 180 ಕೋವಿಶೀಲ್ಡ್ ಲಭ್ಯವಿದೆ.
ಕುಮಟಾ ತಾಲೂಕಾ ಆಸ್ಪತ್ರೆಯಲ್ಲಿ 590 ಕೋವ್ಯಾಕ್ಸಿನ್ ಮತ್ತು ವನ್ನಳ್ಳಿ ಉರ್ದು ಶಾಲೆಯಲ್ಲಿ160 ಕೋವ್ಯಾಕ್ಸಿನ್ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟು 1810 ಕೋವೀಶೀಲ್ಡ್ ಹಾಗೂ 140 ಕೋವ್ಯಾಕ್ಸೀನ್ ಲಸಿಕೆ ಲಭ್ಯವಿದೆ. ಎಲ್ಲೆಲ್ಲಿ ಲಸಿಕಾಕರಣ ನಡೆಯಲಿದೆ ಎಂಬ ನೋಡಿ?
ಅಂಕೋಲಾ ಸೆ. 1: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಸಪ್ಟೆಂಬರ್ 2 ರ ಗುರುವಾರ ಒಟ್ಟೂ 490 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಹಿಪ್ರಾ ಶಾಲೆ ಗುಂಡಬಾಳ (100), ಕಂತ್ರಿ (300), ತಾಲೂಕು ಆಸ್ಪತ್ರೆ ಅಂಕೋಲಾ (90) ಡೋಸ್ ಲಸಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ.