Follow Us On

WhatsApp Group
Trending

ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿಯ ಸೇವೆಗೆ ದುಬಾರಿ ಶುಲ್ಕ ವಿಧಿಸಲು ಚಿಂತನೆ: ಸೇವಾದರ ಎರಡು ಮೂರು ಪಟ್ಟು ಹೆಚ್ಚಳ?ಭಕ್ತರ ವಿರೋಧ

ಶಿರಸಿ: ಲಕ್ಷಾಂತರ  ಭಕ್ತರ ಆರಾಧ್ಯದೇವಿ, ಪ್ರಸಿದ್ಧ ಮಾರಿಕಾಂಬಾ ದೇವಿಯ ಸೇವೆಗೆ ದುಬಾರಿ ಶುಲ್ಕ ವಿಧಿಸಲು ಹೊರಟಿರುವ ಕ್ರಮಕ್ಕೆ ವ್ಯಾಪಕ ವಿರೋಧ ಕೇಳಿಬರುತ್ತಿದೆ.

ಕರಡು ಪ್ರತಿ ಹೊರಡಿಸಿದ ದೇವಸ್ಥಾನದ ಆಡಳಿಯ ಮಂಡಳಿ,ಸೆಪ್ಟೆಂಬರ್ 5 ರ ಒಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕೋರಿದೆ.
ಎಲ್ಲ ಸೇವೆಗಳ ದರವನ್ನು ಪ್ರಸ್ತುತಕ್ಕಿಂತ ದುಪ್ಪಟ್ಟು ಮಾಡಲಾಗಿದೆ. ಕೆಲವೊಂದು ಸೇವೆಗಳನ್ನು ಎರಡಮೂರು ಪಟ್ಟು ಹೆಚ್ಚಿಸಲಾಗಿದೆ.

ಕಾರ್ತೀಕ ದೀಪೋತ್ಸವದ ಒಂದು ದಿನದ ಸೇವೆ ಮೊತ್ತವನ್ನು 650 ರಿಂದ 5,000 ಸಾವಿರ ರೂಗೆ ಏರಿಕೆ ಮಾಡಲಾಗಿದ ರುದ್ರಾಭಿಷೇಕ ಸೇವೆಗೆ 10ರ ಬದಲು 100 ರೂ,ಸತ್ಯನಾರಾಯಣ ಕಥೆಗೆ 325ರ ಬದಲು 1500ಕ್ಕೆ ಮೃತ್ಯುಂಜಯ ಶಾಂತಿಗೆ 1001 ಬದಲು 3500 ರೂ ಗೆ ಏರಿಕೆ ಮಾಡಲಾಗಿದೆ. ಶಾಶ್ವತ ಸೇವೆಗೆ 6001ರ ಬದಲು 10,001, ಏರಿಕೆ ಮಾಡಿ, ಪ್ರಕಟಿಸಲಾಗಿದೆ.

ದೇವಸ್ಥಾನವು ವ್ಯಾಪಾರ ಕೇಂದ್ರವಲ್ಲ, ಶ್ರದ್ಧಾ ಕೇಂದ್ರ. ಹೀಗೆ ಭಕ್ತರ ನಂಬಿಕೆ ಮೇಲೆ ಹಣ ಹೊಂದಿಸುವ ಕೆಲಸ ಸರಿಯಲ್ಲ ಎಂಬ ಅಭಿಪ್ರಾಯ ಇದೀಗ ಭಕ್ತರ ವಲಯದಲ್ಲಿ ಕೇಳಿಬಂದಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂದರ್ಭದಲ್ಲಿ ಭಕ್ತರನ್ನ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಕರ್ಷಿಸಲು ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಬೇಕಿತ್ತೇ ಹೊರತು, ಸೇವಾದರ ಏರಿಕೆ ಸರಿಯಾದ ಕ್ರಮವಲ್ಲ ಎನ್ನುವುದು ಭಕ್ತರ ಅಭಿಪ್ರಾಯ.

ವಿಸ್ಮಯ ನ್ಯೂಸ್ ಶಿರಸಿ

Back to top button