Follow Us On

WhatsApp Group
Important
Trending

ಬೃಹತ್ ಗಾತ್ರದ ಡಾಲ್ಫಿನ್ ಕಳೇಬರ ಕಾರವಾರದ ಸಮುದ್ರ ತೀರದಲ್ಲಿ ಪತ್ತೆ

ಕಾರವಾರ: ತಾಲೂಕಿನ ದಾಂಡೇಬಾಗ್ ಕಡಲತೀರದಲ್ಲಿ ಬೃಹತ್ ಗಾತ್ರದ ‘ಹಂಪ್ ಬ್ಯಾಕ್’ ಡಾಲ್ಫಿನ್‌ನ ಕಳೇಬರವೊಂದು ದೊರೆತಿದೆ.ಈ ಕಳೆಬರ ಸುಮಾರು 2.8 ಮೀಟರ್ ಉದ್ದ ಮತ್ತು 1.7 ಮೀಟರ್ ಇದೆ. ಮೃತಪಟ್ಟ ಡಾಲ್ಫಿನ್‌ನಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಹೃದಯ ಹಾಗೂ ಶ್ವಾಸಕೋಶದಲ್ಲಿ ರಕ್ತ ತುಂಬಿಕೊoಡಿತ್ತು. ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಡಾಲ್ಫಿನ್‌ನ ಕಳೇಬರ ತೀರಕ್ಕೆ ತೇಲಿಬಂದಿರುವ ಕುರಿತು ಮೀನುಗಾರರು ಮಾಹಿತಿ ನೀಡಿದ್ದರು. ಮಾಹಿತಿ ಬಳಿಕ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿತು.

ವಿಸ್ಮಯ ನ್ಯೂಸ್, ಕಾರವಾರ

Back to top button