Important
Trending

ಚಲಿಸುತ್ತಿರುವ ಬಸ್ಸಿನಿಂದ ಕೆಳಗೆ ಬಿದ್ದ ಐಟಿಐ ವಿದ್ಯಾರ್ಥಿ: ಗಂಭೀರ ಗಾಯಗೊಂಡು ಜಿಲ್ಲಾ ಸ್ಪತ್ರೆಗೆ ದಾಖಲು

ಮನೆಯಿಂದ ಕಾಲೇಜಿಗೆ ಬರುತ್ತಿದ್ದ ವೇಳೆ ಅವಾಂತರ

ಅಂಕೋಲಾ: ಚಲಿಸುತ್ತಿರುವ ಬಸ್ಸಿನಿಂದ ಬಿದ್ದು ವಿದ್ಯಾರ್ಥಿಯೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾ.ಹೆ 66 ರ ಕಾರವಾರ -ಅಂಕೋಲಾ ದಾರಿಮಧ್ಯೆ ಬಾಳೆಗುಳಿ ಬಳಿ ಸಂಭವಿಸಿದೆ. ಹಾರವಾಡ ನಿವಾಸಿ  ಸಂತೋಷ ರಾಮಚಂದ್ರ ನಾಯ್ಕ (19 ) ಬಸ್ಸಿನಿಂದ ಬಿದ್ದು ಗಾಯಗೊಂಡವನಾಗಿದ್ದಾನೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು: ಮೂವರಿಗೆ ಗಂಭೀರ ಗಾಯ

ಅಂಕೋಲಾದ ಬೇಳಾಬಂದರ ನಲ್ಲಿರುವ ಐ ಟಿ ಐ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಮನೆಯಿಂದ ಕಾಲೇಜಿಗೆ ಬರುತ್ತಿರುವ ವೇಳೆ ಚಲಿಸುತ್ತಿರುವ ಬಸ್ಸಿನಿಂದ ಆಕಸ್ಮಿಕವಾಗಿ (ಅದೇಗೋ ನಿಯಂತ್ರಣ ತಪ್ಪಿ ) ಹೆದ್ದಾರಿಯಲ್ಲಿ ಬಿದ್ದ ಪರಿಣಾಮ ಆತನ ಮೂಗು, ಸೊಂಟ , ಕಾಲಿನ ಭಾಗಗಳಲ್ಲಿ ಗಾಯ – ನೋವುಗಳಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ:ನಿಯಂತ್ರಣ ತಪ್ಪಿ ಬಿದ್ದ ಬೈಕ್: ಕಾಲೇಜಿನ ಉಪನ್ಯಾಸಕ ನಿಧನ

ಇದನ್ನು ಗಮನಿಸಿದ ಕೆಲವರು ಕಾರಿನಲ್ಲಿ  ಗಾಯಾಳು ವಿದ್ಯಾರ್ಥಿಯನ್ನು ಕರೆತಂದು ಅಂಕೋಲಾ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅಂಕೋಲಾ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ  ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ  ಸಾಗಿಸಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.       

ಚಲಿಸುತ್ತಿದ್ದ ಲಾರಿಗೆ ಬೆಂಕಿ: ಲಾರಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ಚಾಲಕ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button