Important
Trending

ನಿಯಂತ್ರಣ ತಪ್ಪಿ ಬಿದ್ದ ಬೈಕ್: ಕಾಲೇಜಿನ ಉಪನ್ಯಾಸಕ ನಿಧನ

ಬೆಳ್ಳಂಬೆಳಿಗ್ಗೆ ನಡೆಯಿತು ಭೀಕರ ರಸ್ತೆ ಅಪಘಾತ

ಅಂಕೋಲಾ : ರಾ. ಹೆ. 66 ರ ಬೆಳಸೆ  ಪಂಚಾಯತ ಎದುರು ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ. ವಾಸರೆ ಗ್ರಾಮದ ನಿವಾಸಿ ಅರವಿಂದ ಬೀರಾ ಆಗೇರ ಮೃತ ದುರ್ದೈವಿಯಾಗಿದ್ದು,ಪಿಎಂ ಜೂನಿಯರ್ ಕಾಲೇಜಿನಲ್ಲಿ ಕಳೆದ 17 ವರ್ಷಗಳಿಂದ ಇತಿಹಾಸ ವಿಭಾಗದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇಂದು ಬೆಳಿಗ್ಗೆ ತನ್ನ ಮನೆಯಿಂದ ಕಾಲೇಜಿಗೆ ಬರುತ್ತಿರುವಾಗ ದಾರಿ ಮಧ್ಯೆ ಹೆದ್ದಾರಿಯಲ್ಲಿ ಅದಾವುದೋ ಕಾರಣದಿಂದ ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ರವಿ ಆಗೇರ,ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಸಾಮಾಜಿಕ ಕಾರ್ಯಕರ್ತ ಶಂಕರ್ ಗೌಡ ಬೆಳೆಸೆ ಇವರ  ಖಾಸಗಿ ವಾಹನದಲ್ಲಿ ತಾಲೂಕ್ ಆಸ್ಪತ್ರೆಗೆ ಕರೆತಂದರಾದರೂ ತಲೆಮತ್ತಿತರ ಭಾಗಗಳಿಗೆ ಆಗಿರಬಹುದಾದ ಗಂಭೀರ ಗಾಯಗಳಿಂದ ಅದಾಗಲೇ ಅರವಿಂದ್ ಕೊನೆಯುಸಿರೆಳದಿದ್ದರೂ ಎನ್ನಲಾಗಿದೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದೆ. ಸುದ್ದಿ ತಿಳಿದ ಪಿಎಂ ಜೂನಿಯರ್ ಕಾಲೇಜಿನ ಪ್ರಾಚಾರ್ಯ ಪಾಲ್ಗುಣ ಗೌಡ, ಬೋಧಕ – ಬೋಧಕೇತರ ಸಿಬ್ಬಂದಿಗಳು,ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ,ಎಂಸಿಸಿ ಕಮಾಂಡರ್ ಜಿ ಆರ್ ತಾಂಡೇಲ್,ಸರ್ಕಾರಿ ಪಿಯು ಕಾಲೇಜಿನ ಕೆಲ ಉಪನ್ಯಾಸಕರು,ವಾಸರೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ನಾಯಕ್, ಸ್ಥಳೀಯರಾದ ವಿಜಯ ಕುಮಾರ ಜಯಂತ ನಾಯಕ, ಮಹಾದೇವ ಆಚಾರಿ, ವಾಮನ್ ಅಗೇರ್, ಪುಟ್ಟು ಶಿರಗುಂಜಿ ಮತ್ತಿತರರು ಅಂತಿಮ ದರ್ಶನ ಪಡೆದು,ಘಟನೆಯ ಕುರಿತು ಸಂತಾಪ ಸೂಚಿಸಿದರು.

ಕಾಲೇಜಿನ ಉಪನ್ಯಾಸಕರ ನಿಧನದ ಹಿನ್ನೆಲೆಯಲ್ಲಿ ಪಿಎಂ ಜೂನಿಯರ್ ಕಾಲೇಜಿನಲ್ಲಿ ಸಂತಾಪ ಸೂಚಕ ಸಭೆ ನಡೆಸಿ,ತರಗತಿಗಳಿಗೆ ರಜೆ ಘೋಷಿಸಲಾಯಿತು. ಅಪಘಾತದ  ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.           

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

Back to top button