ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 36 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಕುಮಟಾದಲ್ಲಿ 5, ಹೊನ್ನಾವರ 2, ಕಾರವಾರದಲ್ಲಿ 12, ಅಂಕೋಲಾದಲ್ಲಿ 6, ಭಟ್ಕಳದಲ್ಲಿ 4, ಯಲ್ಲಾಪುರದಲ್ಲಿ 5, ಮುಂಡಗೋಡ 2 ಸೇರಿ ಒಟ್ಟು 36 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದೇ ವೇಳೆ ಇಂದು 57 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಹೊನ್ನಾವರ 6,ಕಾರವಾರ 14, ಅಂಕೋಲಾ 13, ಕುಮಟಾ 4, ಭಟ್ಕಳ 8, ಶಿರಸಿ 1, ಸಿದ್ದಾಪುರ 5, ಯಲ್ಲಾಪುರದಲ್ಲಿ 6 ಮಂದಿ ಗುಣಮುಖರಾಗಿದ್ದಾರೆ.
ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ ಲಸಿಕೆ ಲಭ್ಯ?
ಕುಮಟಾ : ಕುಮಟಾ ತಾಲೂಕಿನಲ್ಲಿ ನಾಳೆ ಒಟ್ಟು 350 ಡೋಸ್ ಕೋವೀಶೀಲ್ಡ್ ಲಸಿಕೆ ಮತ್ತು 680 ಡೋಸ್ ಕೊವಾಕ್ಸೀನ್ ಲಸಿಕೆ ಲಭ್ಯವಿದೆ. ಮೊದಲನೇ ಡೋಸ್ ಹಾಗೂ ಎರಡನೇ ಡೋಸ್ ಪಡೆಯುವವರು ಈ ಕೆಳಗಿನ ಸ್ಥಳದಲ್ಲಿ ವ್ಯಾಕ್ಸಿನ್ ಪಡೆಯಬಹುದು.
ಅಂಕೋಲಾ ಸೆ 2: ತಾಲೂಕಿನಲ್ಲಿ ಗುರುವಾರ 6 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.ಸೋಂಕು ಮುಕ್ತರಾದ 13 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 28ಕ್ಕೆ ಇಳಿಮುಖವಾಗಿದೆ.. ವಿವಿಧ ಆಸ್ಪತ್ರೆಗಳಲ್ಲಿ 8 ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 20 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.
ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3631 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು , 71 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ. ತಾಲೂಕಾಸ್ಪತ್ರೆ, ಕಂತ್ರಿ, ಗುಂಡಬಾಳ ಸೇರಿ , ಇಂದು ಒಟ್ಟೂ 517 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.
ವಿಸ್ಮಯ ನ್ಯೂಸ್ ಕಾರವಾರ