Join Our

WhatsApp Group
Important
Trending

ಮದುವೆಯಾಗುದಾಗಿ ಪುಸಲಾಯಿಸಿ ಕರೆ ಮಾಡಿ 16 ವರ್ಷದ ಯುವತಿಯನ್ನು ಕರೆದು ಲೈಂಗಿಕ ಸಂಪರ್ಕ :‌ಮನೆಗೆ ಕರೆದು ಮಾಡಿದ್ದೇನು ನೋಡಿ?

ಯುವತಿಗೆ ಏನನ್ನು ಮಾತನಾಡಲು ಕೊಡೆದ ಮನೆಯ ಒಳಗೆ ಕರೆದುಕೊಂಡು ಹೋಗಿದ್ದಾನೆ. ಹೆದರಿಸಿ ಬಲವಂತವಾಗಿ ಆಕೆಯ ಮೇಲೆ 2 ಬಾರಿ ಲೈಂಗಿಕ ಸಂಪರ್ಕ ಹೊಂದಿ ನಿನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ.

ಭಟ್ಕಳ: 16 ವರ್ಷದ ಅಪ್ರಾಪ್ತ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ  ಬಲವಂತವಾಗಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಯುವತಿಯ ತಾಯಿ ಶನಿವಾರ ಪ್ರಕರಣ ದಾಖಲಿಸಿದ್ದಾಳೆ.

ಆರೋಪಿಯನ್ನು ನಿತೀನ್ ಅಣ್ಣಪ್ಪ ನಾಯ್ಕ ಮುರುಡೇಶ್ವರ ಹಿರೇದೋಮಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಅದೇ ಊರಿನ 16 ವರ್ಷದ ಯುವತಿಯೊಂದಿಗೆ ಸ್ನೇಹ ಸಂಬಂಧ ಬೆಳೆಸಿ ಯುವತಿಯನ್ನು ಮದುವೆಯಾಗುದಾಗಿ ಪುಸಲಾಯಿಸಿ ಸೆಪ್ಟೆಂಬರ್ 1  ರಾತ್ರಿ 11.45 ರ ಸುಮಾರಿಗೆ ಕರೆ ಮಾಡಿ ನಿನ್ನೊಂದಿಗೆ ಮಾತನಾಡಬೇಕು ಎಂದು ಹೇಳಿದ್ದಾನೆ.

ಮಾವಳ್ಳಿ-2 ರ ಕನ್ನಡ ಶಾಲೆ ಸಮೀಪದ ಹಳೆಯ ಮನೆಯ ಬಳಿ ಬರುವಂತೆ ಹೇಳಿ, ನಂತರ ಅಲ್ಲಿಗೆ ಬಂದ ಯುವತಿಗೆ ಏನನ್ನು ಮಾತನಾಡಲು ಕೊಡದೆ ಮನೆಯ ಒಳಗೆ ಕರೆದುಕೊಂಡು ಹೋಗಿ ಹೆದರಿಸಿ ಬಲವಂತವಾಗಿ ಆಕೆಯ ಮೇಲೆ 2 ಬಾರಿ ಲೈಂಗಿಕ ಸಂಪರ್ಕ ಎಸೆದು ನಿನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ.

ಅಲ್ಲಿಯವರೆಗೆ ಈ ವಿಷಯವನ್ನು ಯಾರಿಗೂ ಹೇಳ ಬೇಡ , ಹೇಳಿದರೆ ನಿನ್ನನ್ನು ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುವುದಾಗಿ  ಜೀವ ಬೆದರಿಕೆ ಹಾಕಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button