Follow Us On

WhatsApp Group
Focus News
Trending

ಹೆಚ್ಚುತ್ತಿದೆ ಗಾಂಜಾ ಘಾಟು | ಸುಮಾರು 2 ಕೆ.ಜಿ ಗಾಂಜಾ ವಶಕ್ಕೆ | ಇಬ್ಬರ ಬಂಧನ

ಶಿರಸಿ: ಸೊರಬದಿಂದ ಶಿರಸಿಗೆ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 1 ಕೆಜಿ 910 ಗ್ರಾಮ್ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಶ್ರೀರಾಮ ಕಾಲೋನಿಯ ರಸ್ತೆಯಲ್ಲಿ ಬೈಕಿನಲ್ಲಿ ಅಂದಾಜು 25000 ರೂ. ಮೌಲ್ಯದ ಗಾಂಜಾವನ್ನು ಸೊರಬದಿಂದ ಸಾಗಾಟ ಮಾಡುತ್ತಿರುವಾಗ ದಾಳಿ ಮಾಡಿರುವ ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಜೊತೆ ವಶಪಡಿಸಿಕೊಂಡಿದ್ದಾರೆ.

ಸೊರಬ ತಾಲೂಕಿನ ದೇವನಹಳ್ಳಿ ಮಂಜುನಾಥ ನಾಯ್ಕ ಮತ್ತು ವೀರಭದ್ರಪ್ಪ ಬಂಧಿತರು ಎಂದು ತಿಳಿದುಬಂದಿದೆ. ಆರೋಪಿ ಮಂಜುನಾಥ ವಿರುದ್ಧ ಈ ಹಿಂದೆ ಸುಲಿಗೆ
ಪ್ರಕರಣವು ಬನವಾಸಿ ಠಾಣೆಯಲ್ಲಿ ದಾಖಲಾಗಿತ್ತು.

ವಿಸ್ಮಯ ನ್ಯೂಸ್ ಶಿರಸಿ

Back to top button