Follow Us On

WhatsApp Group
Big News
Trending

ಒಂದ್ ಒಳ್ಳೆ ಕೆಲ್ಸ: ಮಾನಸಿಕ ಅಸ್ವಸ್ಥರು, ನಿರ್ಗತಿಕರು, ಭಿಕ್ಷುಕರಿಗೆ ಮಾಡಿದ್ದೇನು ನೋಡಿ? ಇವರಿಗೊಂದು ಸಲಾಂ

ಕಾರವಾರ: ಗಡ್ಡ, ತಲೆ ಕೂದಲು ಬಿಟ್ಟು ಅರೆಬರೆ ಬಟ್ಟೆಯಲ್ಲಿ ನಿತ್ಯವೂ ಬೀದಿ ಬದಿ ಅಲೆದಾಡಿಕೊಂಡಿದ್ದ ಮಾನಸಿಕ ಅಸ್ವಸ್ಥರು, ನಿರ್ಗತಕರು ಸೇರಿದಂತೆ ಭಿಕ್ಷುಕರುಗಳಿಗೆ ವಿವಿಧ ಸಂಘಟನೆಗಳ ಸಮಾನ ಮನಸ್ಸುಗಳ ತಂಡವೊoದು ಕಟಿಂಗ್, ಸೇವಿಂಗ್ ಮಾಡಿ ಸ್ವಚ್ಛಗೊಳಿಸಿದ್ದಲ್ಲದೇ ಹೊಸ ಬಟ್ಟೆ ತೊಡಿಸಿ ಓರ್ವನನ್ನು ಮರಳಿ ಮನೆಗೆ ಕಳುಹಿಸುವ ಮತ್ತು ಇನ್ನು ಕೆಲವರನ್ನು ಭಿಕ್ಷುಕರ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸುವ ಪ್ರಯತ್ನ ನಡೆಸಿ ಮಾದರಿ ಕಾರ್ಯ ಮಾಡಿದೆ.

ಹೌದು, ಜನಶಕ್ತಿ ವೇದಿಕೆ ಕಾರವಾರ, ಮದರ್ ಥೆರೆಸಾ ಸಂಸ್ಥೆ ಹಾಗೂ ರೆಡ್ ಕ್ರಾಸ್ ನ ಸದಸ್ಯರು ಸೋಮವಾರ ನಗರದಲ್ಲಿ ಬೀದಿ ಬದಿ ಅಲೆದಾಡಿಕೊಂಡಿದ್ದವರಿಗೆ ಪುನಃ ಹೊಸ ಬದುಕು ಕಟ್ಟಿಕೊಳ್ಳಲೂ ನೆರವಾಗಿದ್ದಾರೆ.

ನಗರದ ವಿವಿಧೆಡೆ ವೃದ್ಧ ಭಿಕ್ಷುಕರು, ದುಡಿಮೆ ಮಾಡಲಾಗದೆ ಮನೆಯಿಂದ ನಿರ್ಲಕ್ಷ್ಯಕ್ಕೊಳಗಾಗಿ ಬೀದಿಗೆ ಬಂದವರು, ಮಾನಸಿಕ ಅಸ್ವಸ್ತರು ಕಳೆದ ಹಲವು ವರ್ಷ ಇಲ್ಲವೇ ತಿಂಗಳುಗಳಿoದ ಬೀದಿ ಬದಿ ಬದುಕುತಿದ್ದರು. ಅವರಿವರು ಕೊಟ್ಟ ಆಹಾರ ತಿಂದು ಬಿಸಿಲು, ಮಳೆ, ಎನ್ನದೆ ಎಲ್ಲಿ ಖಾಲಿ ಜಾಗ ಇದಿಯೋ ಅಲ್ಲಿ ತೆರಳಿ ದಿನ ದೂಡುತ್ತಿದ್ದರು.

ಆದರೆ ಈ ಬಗ್ಗೆ ತಿಳಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಮದರ್ ಥೆರೆಸಾ ಸಂಸ್ಥೆಯ ಸ್ಯಾಮ್ಸನ್ ಡಿಸೋಜಾ ಹಾಗೂ ರೆಡ್ ಕ್ರಾಸ್ ಸದಸ್ಯರು ಅವರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸಿ ನಗರದಲ್ಲಿದ್ದವರು ಗುರುತಿಸಿದ್ದರು. ಅದರಂತೆ ಸೋಮವಾರ ನಗರದ ಹಳೆ ಮೀನು ಮಾರುಕಟ್ಟೆ ಬಳಿಯ ಖಾಲಿ ಜಾಗದಲ್ಲಿ ನಾಲ್ವರನ್ನು ಕರೆತಂದು ಕೂದಲು ಕತ್ತರಿಸಿ, ಶೆವಿಂಗ್ ಮಾಡಿಸಿ ಸ್ನಾನ ಕೂಡ ಮಾಡಿಸಿದ್ದಾರೆ. ಕೆಲವರು ಸ್ನಾನ ಮಾಡಿ ತಿಂಗಳು, ವರ್ಷಗಳೇ ಕಳೆದಿದ್ದರಿಂದ ಮೈ, ಕೈಗಳಲ್ಲಿ ಗಾಯಗಳಾಗಿದ್ದವು. ಇಷ್ಟಾದರೂ ಅಸಹ್ಯ ಪಡದೇ ಎಲ್ಲರನ್ನು ಸ್ನಾನ ಮಾಡಿಸಿ ಅವರ ಉಗುರುಗಳನ್ನು ಸ್ವಚ್ಚಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಜನರು ಬೀದಿ ಬದಿ ಮಾನಸಿಕ ಅಸ್ವಸ್ತರಂತೆ ಓಡಾಡಿಕೊಂಡು ವಾಸ ಮಾಡುವವರು ಇದ್ದಾರೆ. ಅಂತವರನ್ನು ಗುರುತಿಸಿ ಅವರನ್ನು ಸ್ವಚ್ಚಗೊಳಿಸುವ ಬಗ್ಗೆ ಯೋಚಿಸಲಾಗಿತ್ತು. ಅಲ್ಲದೇ ಈ ಬಗ್ಗೆ ಅವರಿಗೆ ತಿಳಿಸಿ ಬರುವಂತೆಯೂ ಸೂಚಿಸಿದ್ದೇವು. ಆದರೆ ನಾಲ್ಕು ಮಂದಿ ಮಾತ್ರ ಬಂದಿದ್ದಾರೆ. ಉಳಿದವರನ್ನು ಕರೆತರಲು ಹೋದರೇ ಓಡುತ್ತಿದ್ದಾರೆ.

ಯಾವುದೋ ಒಂದು ಕಾರಣದಿಂದ ನಗರಕ್ಕೆ ಬಂದು ಈ ರಿತಿ ಬೀದಿ ಬದಿ ಸಂಕಷ್ಟದ ಬದುಕು ನಡೆಸುತ್ತಿದ್ದವರನ್ನು ನೋಡಲಾಗದೇ ನಾವೆಲ್ಲರೂ ಸೇರಿ ಸ್ವಚ್ಛಗೊಳಿಸಿ ಅವರಿಗೆ ಪುನರ್ ವಸತಿ ಕಲ್ಪಿಸುವ ಬಗ್ಗೆ ಯೋಚನೆ ಮಾಡಿದಾಗ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಅದರಂತೆ ಬಂದ ನಾಲ್ವರನ್ನು ಕೂದಲು ಕತ್ತರಿಸಿ ಸ್ವಚ್ಚವಾಗಿ ಸ್ನಾನ ಮಾಡಿಸಿ ಹೊಸ ಬಟ್ಟೆಗಳನ್ನು ತೊಡಿಸಲಾಗಿದೆ. ಅಲ್ಲದೆ ಅವರ ಮೈ ಕೈಗಳಲ್ಲಿ ಗಾಯಗಳಾದ ಕಾರಣ ಮೆಡಿಸಿನ್ ಮಾಡಿ ಆರೈಕೆ ಮಾಡಲಾಗಿದೆ ಎನ್ನುತ್ತಾರೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ.

ಇನ್ನು ಆರೈಕೆ ಮಾಡಿದ ನಾಲ್ವರ ಪೈಕಿ ಇಬ್ಬರು ಕೇರಳ ಮೂಲದವರಾಗಿದ್ದು, ಇನ್ನಿಬ್ಬರು ಗೋವಾ ಹಾಗೂ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಅದರಲ್ಲಿ ಮಹಾರಾಷ್ಟ್ರದ ನಾಸಿಕ್ ಮೂಲದ ಅನಿಶ್ ಶೆಖ್ ಎಂಬಾತ ಕೆಲ ದಿನಗಳ ಹಿಂದೆ ಚಿಕ್ಕಪ್ಪನ ಲಾರಿಗೆ ಬಂದಿದ್ದು ಕಾರವಾರದಲ್ಲಿ ನಾಪತ್ತೆಯಾಗಿದ್ದ. ಆತನ ಮನೆಯವರು ಹುಡುಕಾಟ ನಡೆಸಿದ್ದರು ಎನ್ನಲಾಗಿದೆ.

ಇಂದು ಆತನನ್ನು ವಿಚಾರಿಸಿದಾಗ ಮನೆಯವರ ನಂಬರ್ ನೀಡಿದ್ದು ತಕ್ಷಣ ಕರೆ ಮಾಡಿ ವಿಷಯ ತಿಳಿಸಿದ್ದರು. ಆತನ ಮನೆಯವರು ಸಂಜೆ ಹೊತ್ತಿಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನುಳಿದವರ ಕೊವಿಡ್ ವರದಿ ನೆಗೆಟಿವ್ ಬಂದಲ್ಲಿ ಬೆಳಗಾವಿಯಲ್ಲಿರುವ ಬೀಕ್ಷುಕರ ಪುನರ್ ವಸತಿ ಕೇಂದ್ರಕ್ಕೆ ಸೇರಿಸಲು ಜಿಲ್ಲಾಡಳಿತದೊಂದಿಗೆ ಮನವಿ ಮಾಡಿರುವುದಾಗಿ ಮಾಧವ ನಾಯಕ ತಿಳಿಸಿದ್ದಾರೆ.

ಗಡಿ ಜಿಲ್ಲೆ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕಾರಣ ಎಲ್ಲಿಂದಲೋ ಬಂದವರು ಇಲ್ಲವೇ ಮಾನಸಿಕ ಅಸ್ವಸ್ತಗೊಂಡವರನ್ನು ಇಲ್ಲಿ ಬಿಟ್ಟು ಹೋಗಲಾಗುತ್ತಿದೆ. ಇಂತವರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಭೀಕ್ಷುಕರ ಪುನರ್ ವಸತಿ ಕೇಂದ್ರ ಸ್ಥಾಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button