ಕುಮಟಾ: ತಾಲೂಕಿನಲ್ಲಿ ನಾಳೆ 1850 ಕೋವಿಶೀಲ್ಡ್ ಮತ್ತು 790 ಕೋವ್ಯಾಕ್ಸಿನ್ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕೆಳಗಿನ ಸ್ಥಳದಲ್ಲಿ ನಾಳೆ ವ್ಯಾಕ್ಸಿನೇಷನ್ ನಡೆಯಲಿದೆ.
ಹೊನ್ನಾವರದಲ್ಲಿ ಎಲ್ಲೆಲ್ಲಿ?
ಹೊನ್ನಾವರ ತಾಲೂಕಿನಲ್ಲಿ ಒಟ್ಟು 1840 ವ್ಯಾಕ್ಸಿನ್ ಲಭ್ಯವಿದ್ದು, 1200 ಕೋವಿಶೀಲ್ಡ್ ಮತ್ತು 640 ಕೋವ್ಯಾಕ್ಸಿನ್ ಲಭ್ಯವಿದೆ.
ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದೀಪುರ, ಸಾಲಕೋಡ,ಖರ್ವಾ,ಹೊಸಾಡ, ಗೇರುಸೋಪ್ಪಾ, ಶಂಶಿ. ಬಳ್ಕೂರ, ಮಂಕಿ ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಕೋಲಾದಲ್ಲಿ ನಾಳೆ 760 ಕೋವಿಡ್ ಲಸಿಕೆ ಎಲ್ಲೆಲ್ಲಿ ಲಭ್ಯವಿದೆ ನೋಡಿ?
ಅಂಕೋಲಾ ಸೆ 7: ತಾಲೂಕಿನಲ್ಲಿ ಮಂಗಳವಾರ 1 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ. ಸೋಂಕು ಮುಕ್ತರಾದ 2 ಜನರನ್ನು ಬಿಡುಗಡೆಗೊಳಿಸಲಾಗಿದ್ದು, 20 ಸಕ್ರಿಯ ಪ್ರಕರಣಗಳಿವೆ. ವಿವಿಧ ಆಸ್ಪತ್ರೆಗಳಲ್ಲಿ 7 ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 13 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.
ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3644 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು , ಈ ದಿನದ 1 ಸಾವು ಸೇರಿ, ಈ ವರೆಗೆ ತಾಲೂಕಿನಲ್ಲಿ ಒಟ್ಟು 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.
ನಾಳೆ ಸೆ 8 ಬುಧವಾರ ಒಟ್ಟೂ ಒಟ್ಟೂ 760 ಕೋವಿಡ್ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಮುಲ್ಲಾವಾಡಾ-ಶಾದಿಮಹಲ್ (200), ಹಿ ಪ್ರಾ ಶಾಲೆ ಬಡಗೇರಿ (200), ಗ್ರಾ ಪಂ ಅಚವೆ (200), ಹಿ.ಪ್ರಾ.ಶಾಲೆ ತೆಂಕನಾಡು (160) ಲಸಿಕೆ ಹಂಚಿಕೆ ಮಾಡಲಾಗಿದೆ.
ಇಂದು ಕಲಭಾಗ ಅಂಗನವಾಡಿಯಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್ ನಡೆಸಲಾಗಿತ್ತಾದರೂ, ಆ ಭಾಗದ ಪುರಸಭಾ ಸದಸ್ಯ ಹಾಗೂ ಸ್ಥಳೀಯರಿಗೆ ಈ ಕುರಿತು ಮಾಹಿತಿ ಇರದಿರುವುದಕ್ಕೆ, ಮತ್ತು ನಿನ್ನೆ ದಿನದ ಆರೋಗ್ಯ ಇಲಾಖೆಯ ಲಸಿಕೆ ಹಂಚಿಕೆ ವಿವರ ಪಟ್ಟಿಯಲ್ಲಿ ಕಾಕರಮಠ ಎಂದು ನಮೂದಿಸುವ ಮೂಲಕ ನಿಖರತೆಯಿಲ್ಲದೇ ಸ್ಥಳ ಬದಲಾವಣೆ ಗೊಂದಲ ಉಂಟು ಮಾಡಿದ, ಸಂಬಂಧಿತ ಮಹಿಳಾ ವೈದ್ಯಾಧಿಕಾರಿ ಹಾಗೂ ಇಲಾಖೆ ಕ್ರಮದ ಬಗ್ಗೆ ಆಕ್ಷೇಪದ ಮಾತುಗಳು ಕೇಳಿಬಂದಿವೆ.ಮುಂದೆ ಹೀಗಾಗದಂತೆ ಸಂಬಂಧಿಸಿದವರು ಗಮನಹರಿಸಿ,ಲಸಿಕಾಕರಣ ಪ್ರಕ್ರಿಯೆ ಪ್ರಯೋಜನ ಎಲ್ಲರಿಗೂ ಸಿಗುವಂತಾಗಬೇಕು ಎಂದು ಜಯ ಪ್ರಕಾಶ್ ನಾಯ್ಕ ಎಚ್ಚರಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ