Focus News
Trending

ಕುಮಟಾ,ಹೊನ್ನಾವರ, ಅಂಕೋಲಾದಲ್ಲಿ ನಾಳೆ ಎಲ್ಲೆಲ್ಲಿ ಲಸಿಕೆ ಲಭ್ಯ? ಎಷ್ಟು ವ್ಯಾಕ್ಸಿನ್ ಲಭ್ಯವಿದೆ ನೋಡಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟು 2110 ವ್ಯಾಕ್ಸಿನ್ ಲಭ್ಯವಿದೆ. ಕೋವಿಶೀಲ್ಡ್- 1800, ಕೋವ್ಯಾಕ್ಸಿನ್- 310 ಡೋಸ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದೀಪುರ, ಸಾಲಕೋಡ,‌ಖರ್ವಾ,‌ಹೊಸಾಡ, ಗೇರುಸೋಪ್ಪಾ,‌ ಶಂಶಿ. ಬಳ್ಕೂರ, ಮಂಕಿ ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನೇಷನ್?

ಕುಮಟಾದಲ್ಲಿ ನಾಳೆ 1690 ಕೋವಿಶೀಲ್ಡ್ ಮತ್ತು 420 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ. ಈ ಕೆಳಗಿನ ಸ್ಥಳದಲ್ಲಿ ನಾಳೆ ವ್ಯಾಕ್ಸಿನೇಷನ್ ನಡೆಯಲಿದೆ.

ಅಂಕೋಲಾದಲ್ಲಿ ನಾಳೆ 1500 ಡೋಸ್ ಲಸಿಕೆ ಲಭ್ಯ.

ಅಂಕೋಲಾ ಸೆ 13: ತಾಲೂಕಿನಲ್ಲಿ ಸೋಮವಾರ 2 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ. ಈ ಮೂಲಕ 21 ಸಕ್ರಿಯ ಪ್ರಕರಣಗಳಿವೆ. ವಿವಿಧ ಆಸ್ಪತ್ರೆಗಳಲ್ಲಿ 5 ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 16 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3661 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ತಾಲೂಕಿನಲ್ಲಿ ಒಟ್ಟೂ 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.

ಗ್ರಾಮ ಪಂಚಾಯತ ಅವರ್ಸಾ (300),ಕಿ ಪ್ರ ಶಾಲೆ ಹೊನ್ನೆಬೈಲ್ ( 300) ಪ್ರಾ ಆ ಕೇಂದ್ರ ರಾಮನಗುಳಿ (100), ಡೋಂಗ್ರಿ (100), ಹಿಪ್ರಾ ಶಾಲೆ ಗುಂಡಬಾಳ (100), ತಾಲೂಕಾ ಆಸ್ಪತ್ರೆ (200), ಡಾ.ಕಮಲಾ ಮತ್ತು ಆರ್ ಎನ್ ನಾಯಕ ಆಸ್ಪತ್ರೆ (200), ಆರ್ಯ ಮೆಡಿಕಲ್ ಸೆಂಟರ್ (200), ಸೇರಿ ತಾಲೂಕಿನಲ್ಲಿ ಒಟ್ಟೂ 1500 ಡೋಸ್ ಕೊವಿಡ್ ಲಸಿಕೆಗಳು ಸೆ.14 ರ ಮಂಗಳವಾರ ಲಭ್ಯವಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button