ಉತ್ತರಕನ್ನಡದಲ್ಲೂ ನಾಳೆ ಬೃಹತ್ ಕೋವಿಡ್ ಲಸಿಕಾ ಮೇಳ: ಎಲ್ಲೆಲ್ಲಿ ಎಷ್ಟು ಲಸಿಕೆ ಲಭ್ಯವಿದೆ ನೋಡಿ?
ಹೊನ್ನಾವರ: ತಾಲ್ಲೂಕಿನಲ್ಲಿ 9256 ವ್ಯಾಕ್ಸಿನ್ ಲಭ್ಯವಿದ್ದು ತಾಲುಕಿನ 9 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೆಲವು ಕಡೆಗಲಲ್ಲಿ ಮೂರು ನಾಲ್ಕು ಕೇಂದ್ರಗಳನ್ನು ತೆರೆದು ಒಟ್ಟು 46 ವ್ಯಾಕ್ಸಿನ್ ಕೆಂದ್ರಗಳಲ್ಲಿ ವಿತರಣೆ ನಡೆಯಲು ತಯಾರಿ ನಡೆದಿದೆ.
ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದೀಪುರ, ಸಾಲಕೋಡ,ಖರ್ವಾ,ಹೊಸಾಡ, ಗೇರುಸೋಪ್ಪಾ, ಶಂಶಿ. ಬಳ್ಕೂರ, ಮಂಕಿ ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನೇಷನ್?
ಕುಮಟಾ: ತಾಲೂಕಿನಲ್ಲಿ ನಾಳೆ ಅಪಾರ ಪ್ರಮಾಣದ ವ್ಯಾಕ್ಸಿನ್ ಲಭ್ಯವಿದ್ದು, ಒಟ್ಟು 33 ಕೇಂದ್ರದಲ್ಲಿ ಲಸಿಕಾಕರಣನಡೆಯಲಿದೆ. ಈ ಕೆಳಗಿನ ಸ್ಥಳದಲ್ಲಿ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಅಂಕೋಲಾದಲ್ಲಿ ನಾಳೆ ಬರಪೂರ ಲಸಿಕೆ ಲಭ್ಯತೆ
ಅಂಕೋಲಾ: ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಕೋವಿಡ್ ಲಸಿಕಾಕರಣ ವೇಗ ಪಡೆದುಕೊಳ್ಳುತ್ತಿದೆ. ಸಪ್ಟೆಂಬರ್ 17 ರ ಶುಕ್ರವಾರ ಕೋವಿಡ್ ಲಸಿಕಾ ಮಹಾಮೇಳ ಆಯೋಜಿಸಲಾಗುತ್ತಿದ್ದು, ಒಂದೇ ದಿನದಲ್ಲಿ ಸುಮಾರು 9700 ಲಸಿಕೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಉದಯ ಕುಂಬಾರ, ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಬೇಕೆನ್ನುವ ಸರಕಾರದ ಸದುದ್ದೇಶದಂತೆ ,ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗದ ಒಟ್ಟು 24 ಕೇಂದ್ರಗಳಲ್ಲಿ ಲಸಿಕಾಕರಣಕ್ಕೆ ಪೂರಕ ವ್ಯವಸ್ಥೆ ಮಾಡಲಾಗುತ್ತಿದೆ. ಈ ವರೆಗೂ ಪ್ರಥಮ ಡೋಸ್ ಲಸಿಕೆ ಪಡೆದುಕೊಳ್ಳದ 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಗಳು, ಹಾಗೂ ಈ ಹಿಂದೆ ಮೊದಲ ಡೋಸ್ ಪಡೆದಿದ್ದು 84 ದಿನ ಮುಗಿದಿರುವವರು 2 ನೇ ಡೋಸ್ ಲಸಿಕೆ ಪ್ರಯೋಜನವನ್ನು ತಮ್ಮ ಹತ್ತಿರದ ಲಸಿಕೆ ಕೇಂದ್ರಗಳಲ್ಲಿ ಪಡೆದುಕೊಳ್ಳುವಂತೆ ಕರೆ ನೀಡಿದರು.
ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪಿ ವೈ ಸಾವಂತ ಮಾತನಾಡಿ, ತಾಲೂಕಿನ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಬಂಧಿಸಿದ ವಿವಿಧ ಗ್ರಾಪಂ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವ್ಯಾಕ್ಸಿನ್ ಕೇಂದ್ರ ಆರಂಭಿಸಲಾಗುತ್ತಿದೆ.ಆರೋಗ್ಯ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್ ಜೊತೆ ಹೆಚ್ಚುವರಿಯಾಗಿ,ಪಂಚಾಯತ್ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ.
ವೃದ್ಧರು ,ಅಶಕ್ತರು,ಅಸಹಾಯಕರಿಗೆ ಅವಶ್ಯಕತೆ ಇದ್ದಲ್ಲಿ ಕೋವಿಡ್ ಲಸಿಕೆ ಕೇಂದ್ರಕ್ಕೆ ಬಂದು ಹೋಗಲು,ಉಚಿತ ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕ್ವಾಡ್ ಮಾತನಾಡಿ, ಮಹಾ ಲಸಿಕಾ ಮೇಳದ ಕುರಿತು ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಸಿ ಪ್ರಚಾರ ಮಾಡಲಾಗಿದೆ ಮತ್ತು ದೇವಸ್ಥಾನ ,ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿಪತ್ರ ಅಂಟಿಸುವುದು,ಅಧಿಕಾರಿಗಳು ಜನಪ್ರತಿನಿಧಿಗಳು,ಮತ್ತಿತರ ಸಿಬ್ಬಂದಿಗಳನ್ನೊಳಗೊಂಡ ತಂಡದೊಂದಿಗೆ ಪ್ರತಿ ವಾರ್ಡ್ ಮಟ್ಟದಲ್ಲಿ ಜನಸಾಮಾನ್ಯರಿಗೆ ಮಾಹಿತಿ ತಲುಪುವಂತೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ.ಪಟ್ಟಣ ವ್ಯಾಪ್ತಿಯ ನಾಗರಿಕರು,ಹಾಗೂ ಇತರ ಯಾವುದೇ ಸಾರ್ವಜನಿಕರು ಮಹಾಲಸಿಕಾ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ತಾಲೂಕ ಆಸ್ಪತ್ರೆ (500),ಆರ್ಯ ಮೆಡಿಕಲ್ ಸೆಂಟರ್ (500), ಡಾ. ಕಮಲಾ ಮತ್ತು ಕಮಲ ಮತ್ತು ಆರ್ ಎನ್ ನಾಯಕ ಆಸ್ಪತ್ರೆ (500), ಪ್ರಾ ಆ ಕೇಂದ್ರ ಹಾರವಾಡ (500), ಗ್ರಾಪಂ ಅವರ್ಸಾ (500), ಪ್ರಾ. ಆ. ಕೇಂದ್ರ ಬೆಳಸೆ (550), ಹಿ.ಪ್ರಾ.ಶಾಲೆ ಶಿರೂರು (335), ಗ್ರಾಪಂ ಶೆಟಗೇರಿ (335), ಹಿಪ್ರಾ ಶಾಲೆ ತೆಂಕಣಕೇರಿ (450), ವಿಸ್ಮಯ ನ್ಯೂಸ್. ಕಿ.ಪ್ರಾ ಶಾಲೆ ಬೋಳೆ, ಅಗೇರ ಕೇರಿ (330), ಹಿ.ಪ್ರಾ ಶಾಲೆ ಅಗ್ಗರಗೋಣ (330), ಹಿ.ಪ್ರಾ ಶಾಲೆ ವಾಡಿಬೊಗ್ರಿ (300), ಪ್ರಾ ಆ ಕೇಂದ್ರ ಹಟ್ಟಿಕೇರಿ (600), ಪೂರ್ಣ ಪ್ರಜ್ಞ ಶಾಲೆ ವಾಜಂತ್ರಿ ಕೇರಿ (400), ಹಟ್ಟಿಕೇರಿ ಉಪಕೇಂದ್ರ ಬೆಲೇಕೇರಿ (550), ನದಿಭಾಗ (360), ಪ್ರಾ ಆ ಕೇಂದ್ರ ಹಿಲ್ಲೂರು (430), ಗ್ರಾಪಂ ಸಭಾಭವನ ಅಚವೆ (300), ಬಳಗಾ ದೇವಿ ಸಭಾಭವನ ಬಳಲೆ (300), ಪ್ರಾ. ಆ ಕೇಂದ್ರ ರಾಮನಗುಳಿ (400), ಹಿಪ್ರಾ ಶಾಲೆ ಹಳವಳ್ಳಿ (300), ಗ್ರಾಪಂ ಸುಂಕಸಾಳ (300), ಗ್ರಾಪಂ ಅಗಸೂರ (330), ಕಿ.ಪ್ರಾ ಶಾಲೆ ಕುದ್ರಗಿ (300) ಡೋಸ್ ಲಸಿಕೆ ಹಂಚಿಕೆ ಮಾಡಲಾಗುತ್ತಿದ್ದು,ತಾಲೂಕಿನ ಸಾರ್ವಜನಿಕರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುವಂತೆ ಮತ್ತು ಸಂಬಂಧಿಸಿದವರೆಲ್ಲರೂ ಕೊವಿಡ್ ಲಸಿಕಾ ಮಹಾ ಮೇಳದ ಯಶಸ್ಸಿಗೆ ಸಹಕರಿಸುವಂತೆ ತಾಲೂಕ ಆರೋಗ್ಯಧಿಕಾರಿ ಡಾ. ನಿತಿನ್ ಹೊಸ್ಮೇಲಕರ ಆರೋಗ್ಯ ಇಲಾಖೆಯ ಪರವಾಗಿ ವಿನಂತಿಸಿದ್ದಾರೆ.
ಶಿರಸಿಯಲ್ಲಿ ಎಲ್ಲೆಲ್ಲಿ?
ಶಿರಸಿ: ತಾಲೂಕಿನಲ್ಲಿ ನಾಳೆ 10 ಸಾವಿರ ಡೋಸ್ ಲಸಿಕೆ ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಗಡೆಕಟ್ಟಾದಲ್ಲಿ 100, ಹನುಮಂತಿ 100, ದೇವನಳ್ಳಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್’ನಲ್ಲಿ 200, ಹುಳಗೋಳ ಸೇವಾ ಸಹಕಾರಿ ಸಂಘದಲ್ಲಿ 200, ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ 500, ಭಾಂಶಿಯಲ್ಲಿ 300, ಪ್ರಾಥಮಿಕ ಆರೋಗ್ಯ ಕೇಂದ್ರ ಬಿಸಲಕೊಪ್ಪದಲ್ಲಿ 350 ಡೋಸ್, ಇಸಳೂರಿನಲ್ಲಿ 400, ಪ್ರಾಥಮಿಕ ಆರೋಗ್ಯ ಕೇಂದ್ರ ಮೆಣಸಿ 150, ರಾಗಿಹೊಸಳ್ಳಿಯಲ್ಲಿ 300, ಮಂಜಗುಣಿ 200 ಡೋಸ್ ಲಸಿಕೆ ಲಭ್ಯವಿದೆ.
ನೀರ್ನಳ್ಳಿ ಜಿ.ಪಿ ಹಾಲ್’ನಲ್ಲಿ 400, ಕಾನಗೋಡ 300,ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲ್ಕಣಿಯಲ್ಲಿ 200, ದಾಸನಕೊಪ್ಪ ಜಿ ಪಿ ಹಾಲ್’ನಲ್ಲಿ 400, ಮಾಳಂಜಿ 400 ,ಪ್ರಾಥಮಿಕ ಆರೋಗ್ಯ ಕೇಂದ್ರ ಕಕ್ಕಳ್ಳಿ 100, ರಾಮನಬೈಲ್ ಸಭಾಭವನದಲ್ಲಿ 1 ಸಾವಿರ, ದೀವಗಿ ಫ್ಯಾಕ್ಟರಿಯಲ್ಲಿ 1 ಸಾವಿರ , ರುದ್ರದೇವರ ಮಠದಲ್ಲಿ 1 ಸಾವಿರ , ಮರಾಠಿಕೊಪ್ಪದಲ್ಲಿ 1 ಸಾವಿರ ಕಸ್ತೂರಬಾ ನಗರ ಪ್ರಾಥಮಿಕ ಶಾಲೆಯಲ್ಲಿ ಸಾವಿರ ಡೋಸ್ ಲಸಿಕೆ ಲಭ್ಯವಿದೆ.
ಇದೇ ವೇಳೆ ಜಿಲ್ಲೆಯ 366 ಆಸ್ಪತ್ರೆ ಮತ್ತು ಸಬ್ ಸೆಂಟರ್’ಗಳಲ್ಲಿ ಲಸಿಕಾಕರಣ ನಡೆಯಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಆಶಾ ಕಾರ್ಯಕರ್ತೆಯರು, ವೈದ್ಯರು, ನರ್ಸ್, ಮತ್ತು ಸಾರ್ವಜನಿಕರು ಸಹಕರಿಸಿ ಎಂದು ಸಚಿವ ಹೆಬ್ಬಾರ್ ವಿನಂತಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ, ವಿಲಾಸ ನಾಯಕ ಅಂಕೋಲಾ.