ಉತ್ತರಕನ್ನಡದ ಇಂದಿನ ಕೋವಿಡ್ ವಿವರ: ಎಲ್ಲೆಲ್ಲಿ ಎಷ್ಟು ಕೇಸ್? ಹೊನ್ನಾವರ ಮತ್ತು ಅಂಕೋಲಾದಲ್ಲಿ ನಾಳೆ ಲಸಿಕೆ ಲಭ್ಯತೆಯ ವಿವರ

ಕಾರವಾರ: ಉತ್ತರಕನ್ನಡದಲ್ಲಿ ಇಂದು 36 ಕೋವಿಡ್ ಕೇಸ್ ದಾಖಲಾಗಿದೆ.‌ ಇಂದು ಯಾವುದೇ ಸಾವು ಸಂಭವಿಸಿಲ್ಲ. ಕಾರವಾರದಲ್ಲಿ 24,, ಶಿರಸಿಯಲ್ಲಿ 1, ಕುಮಟಾದಲ್ಲಿ 3, ಹೊನ್ನಾವರ 3, ಭಟ್ಕಳದಲ್ಲಿ 1 ಯಲ್ಲಾಪುರದಲ್ಲಿ 3,ಹಳಿಯಾಳದಲ್ಲಿ 1 ಮತ್ತಯ ಜೋಯಿಡಾದಲ್ಲಿ ಒಟ್ಟು 36 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ 22 ಮಂದಿ ಕೊರೋನಾ ಗೆದ್ದು ಮನೆಗೆ ಮರಳಿದ್ದಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ನಾಳೆ 1200 ಕೋವಿಶೀಲ್ಡ್ ಲಭ್ಯ.

ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದೀಪುರ, ಸಾಲಕೋಡ,‌ಖರ್ವಾ,‌ಹೊಸಾಡ, ಗೇರುಸೋಪ್ಪಾ,‌ ಶಂಶಿ. ಬಳ್ಕೂರ, ಮಂಕಿ ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನಾಳೆ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂಕೋಲಾದಲ್ಲಿ ಸೋಮವಾರ 1770 ಲಸಿಕೆ ಲಭ್ಯತೆ.

ಅಂಕೋಲಾ ಸೆ 19: ತಾಲೂಕಿನಲ್ಲಿ ರವಿವಾರ ಯಾವುದೇ ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿಲ್ಲ. ಈ ಮೂಲಕ 17 ಸಕ್ರಿಯ ಪ್ರಕರಣಗಳಿವೆ.

ಕ್ರಿಮ್ಸ್ ಕಾರವಾರದಲ್ಲಿ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 16 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3676 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.

ಸೆ 19ರ ರವಿವಾರ ತಾಲೂಕು ಆಸ್ಪತ್ರೆಯಲ್ಲಿ 60 ಡೋಸ್ ಕೋ ವಿಡ್ ಲಸಿಕೆ ನೀಡಲಾಗಿದ್ದು,ಸೆಪ್ಟೆಂಬರ್ 20 ರ ಸೋಮವಾರ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳು ಸೇರಿ ಒಟ್ಟು 1770 ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ತಾಲೂಕಾ ಆಸ್ಪತ್ರೆ (270) , ಡಾ. ಕಮಲಾ ಮತ್ತು ಆರ್. ಎನ್. ನಾಯಕ ಆಸ್ಪತ್ರೆ (200), ಅರ್ಯ ಮೆಡಿಕಲ್ ( 200), ಕಿ. ಪ್ರಾ ಶಾಲೆ ಬೋಳೆ (250), ಕಿ.ಪ್ರಾ ಶಾಲೆ ಸೊಣಗಿ ಮಕ್ಕಿ – ಬೆಳಸೆ (200), ಪ್ರಾ ಆ ಕೇಂದ್ರ ಬೆಳಸೆ (200), ಪ್ರಾ ಆ ಕೇಂದ್ರ ರಾಮನಗುಳಿ (150), ಪ್ರಾ. ಆ ಕೇಂದ್ರ ಹಿಲ್ಲೂರು (150), ಪ್ರಾ. ಆ.ಕೇಂದ್ರ ಹಾರವಾಡಾ (150), ಡೋಸ್* ಹಂಚಿಕೆ ಮಾಡಲಾಗಿದ್ದು,ಸಾರ್ವಜನಿಕರು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version