ಕಾರವಾರ: ಕಾರನ್ನು ಚಲಿಸುವಾಗ ಆಗುವ ಸಣ್ಣಪುಟ್ಟ ತಪ್ಪುಗಳು ದೊಡ್ಡ ಅವಾಂತರಕ್ಕೆ ಕಾರಣವಾಗುತ್ತದೆ. ಯಾವುದೊ ಒಂದು ಸಣ್ಣ ತಪ್ಪು ಕೆಲವೊಮ್ಮೆ ಜೀವಕ್ಕೆ ಆಪತ್ತು ತರಬಲ್ಲದು. ಹೌದು, ಬ್ರೇಕ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಪರಿಣಾಮದಿಂದ ಇತ್ತಿಚೆಗೆ ಖರೀದಿಸಿದ ಹೊಸ ಕಾರೊಂದು ಕೆರೆಗೆ ಬಿದ್ದು ಸಂಪೂರ್ಣ ಮುಳುಗಡೆಯಾದ ಘಟನೆ ನಡೆದಿದೆ.
ನಗರದ ಕೈಗಾ ಸಿಬ್ಬಂದಿಯೋರ್ವರು ಇತ್ತೀಚೆಗೆ ಹೊಸದಾಗಿ ಕಾರು ಖರೀದಿಸಿ ತಂದಿದ್ದರು. ಅವರ ಮಗ ಇತ್ತಿಚೆಗೆ ಕಾರು ಚಲಾಯಿಸುವುದನ್ನು ಕಲಿತಿದ್ದ. ಹೀಗೆ ಕಾರು ಚಲಾಯಿಸುತ್ತಿರುವಾಗ ಗೊಂದಲ ಉಂಟಾಗಿದ್ದು, ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ್ದಾನೆ. ಹೌದು, ಕೆರೆಯ ಬಳಿ ಬಂದಾಗ, ಬ್ರೇಕ್ ಒತ್ತುವ ಬದಲು ಚಾಲಕ ಎಕ್ಸಿಲೇಟರ್ ಒತ್ತಿದ್ದಾನೆ.
ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದ ಘಟನೆ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದುವಾಡಾದ ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆ ಬಳಿಕ ಕೆರೆಯ ಮುಳುಗಿದ್ದ ಕಾರನ್ನು ನೋಡಲು ಸಾರ್ವಜನಿಕರು ಆಗಮಿಸಿ, ಜನಜಂಗುಳಿಯೇ ಸೇರಿತ್ತು.
ಕಾರು ಕೆರೆಗೆ ಉರುಳಿದ ಪರಿಣಾಮ ಕಾರಿಗೆ ಹಾನಿಯಾಗಿದೆ. ಕಾರನ್ನು ಕ್ರೇನ್ ತಂದು ಮೇಲಕ್ಕೆತ್ತಲಾಗಿದ್ದು, ಈ ಸಂಬoಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತಿಚೆಗೆ ಶಿರಸಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಮಹಿಳೆಯೊಬ್ಬಳು ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಪರಿಣಾಮ, ಪೆಟ್ರೋಲ್ ಬಂಕ್ ಗೆ ಕಾರು ಗುದ್ದಿ ಸುದ್ದಿಯಾಗಿತ್ತು.
ಹೊಸ ಕಾರು ಖರೀದಿಯ ಭರದಲ್ಲಿ ಸರಿಯಾಗಿ ಕಾರು ಚಲಾಯಿಸಲು ಕಲಿಯದೇ ಆತುರ ಆತುರವಾಗಿ ಡ್ರೈವಿಂಗ್ ಮಾಡಿದರ ಪರಿಣಾಮವಿದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಏನೇ ಇರಲಿ, ಸರಿಯಾಗಿ ಕಾರು ಕಲಿತು, ಡ್ರೈವಿಂಗ್ ಮಾಡುವುದರ ಬಗ್ಗೆ ಗಮನಹರಿಸಬೇಕಿದೆ. ತಂದೆ ತಾಯಿಗಳು, ಮಕ್ಕಳಿಗೆ ಸರಿಯಾಗಿ ಡ್ರೈವಿಂಗ್ ಬರುತ್ತದೆಯೋ ಎಂಬುದನ್ನು ಪರಿಶೀಲಿಸಿ, ಕಾರು, ಬೈಕ್ ಗಳನ್ನು ನೀಡಬೇಕಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581