Follow Us On

WhatsApp Group
Important
Trending

ಭಟ್ಕಳದಲ್ಲಿ ಮತ್ತೆ ಧ್ವಜ ದಂಗಲ್ : ಹನುಮಧ್ವಜವನ್ನು ಹಾರಿಸಿದ ಸಂಸದ ಅನಂತ್‌ಕುಮಾರ್ ಹೆಗಡೆ

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ತೆಂಗಿನಗುoಡಿ ಗ್ರಾಮದಲ್ಲಿ ಕಳೆದ ತಿಂಗಳು ಅಧಿಕಾರಿಗಳು ತೆರವು ಗೊಳಿಸಿ ವಿವಾದಕ್ಕೆ ಕಾರಣವಾಗಿದ್ದ ಸಾವರ್ಕರ್ ಧ್ವಜದ ಕಟ್ಟೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಹನುಮ ಧ್ವಜ ಹಾರಿಸಿದ್ದಾರೆ. ಅಲ್ಲದೆ, ಅಲ್ಲಿಯೇ ನಾಮಫಲಕ ಅಳವಡಿಸುವ ಮೂಲಕ ಮತ್ತೆ ಧ್ವಜ ದಂಗಲ್ ಕಿಡಿ ಹೊತ್ತಿಸಿದ್ದಾರೆ.

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಬುಗಿಲೆದ್ದ ನಡುವೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವೀರ ಸಾವರ್ಕರ್ ಹೆಸರಿನ ಧ್ವಜಕಟ್ಟೆ ವಿವಾದ ನಡೆದಿತ್ತು. ತಾಲೂಕಿನ ತೆಂಗಿನಗುoಡಿಯಲ್ಲಿ ನಿರ್ಮಿಸಿದ ವೀರ ಸಾವರ್ಕರ್ ವೃತ್ತದಲ್ಲಿರುವ ಕಟ್ಟೆಯನ್ನ ಅನುಮತಿ ಇಲ್ಲದ ಕಾರಣ ಗ್ರಾಮ ಪಂಚಾಯತ್ ತೆರವುಗೊಳಿಸಿತ್ತು.ಈ ವಿಷಯ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button