ರಜಾ ಸಮಯದಲ್ಲಿ ವಾಕಿಂಗ್ ಹೋದಾಗ ನಡೆದ ಅವಘಡ ? ಸಮುದ್ರದಲ್ಲಿ ಕಣ್ಮರೆಯಾಗಿದ್ದ ನೌಕಾ ದಳದ ಸಿಬ್ಬಂದಿ ಶವವಾಗಿ ಪತ್ತೆ
ಅಂಕೋಲಾ: ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇಶನಬಾಗ್ ಸಮುದ್ರ ತೀರದಲ್ಲಿ ಮಾರ್ನಿಂಗ್ ವಾಕ್ ಗೆ ತೆರಳಿದ್ದ ವ್ಯಕ್ತಿಯೋರ್ವ ಅಚಾನಕ್ ಆಗಿ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ, ನೀರಿನಲ್ಲಿ ಕೊಚ್ಚಿ ಹೋಗಿದ್ದ. ಭಾವಿಕೇರಿಯ ಪುರಂದರ ಶಿವಾನಂದ ನಾಯ್ಕ (41), ಭಾರತೀಯ ನೌಸೇನೆಯ ಸಿಬ್ಬಂದಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದು,ಸದ್ಯ ಕಾರವಾರ ತಾಲೂಕಿನ ಅರ್ಗ ನೇವಲ್ ಬೇಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.
ರವಿವಾರದ ರಜಾ ದಿನದಂದು ಅಂಕೋಲಾ ತಾಲೂಕಿನ ಭಾವಿಕೇರಿಯ ತನ್ನ ಮನೆಯ ಹತ್ತಿರವಿರುವ ಸಮುದ್ರ ತೀರಕ್ಕೆ ವಾಕಿಂಗ್ ಹೋದವನು,ಹತ್ತಿರದಲ್ಲಿ ತನ್ನ ಗೆಳೆಯರು ಮೀನು ಹಿಡಿಯುತ್ತಿರುವ ದನ್ನು ಗಮನಿಸಿ,ಅಲ್ಲಿ ನೋಡಲು ಹೋದಾಗ ಅಕಸ್ಮಿಕ ಜಲ ಅವಘಡ ಸಂಭವಿಸಿದೆ. ಬೇಲಿಕೇರಿ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಗಸ್ತು ಬೋಟ್ ಮೂಲಕ ಸಮುದ್ರದಲ್ಲಿ ಆತನ ಪತ್ತೆ ಕಾರ್ಯಾಚರಣೆ ನಡೆಸಿದರು.
ಸ್ಥಳೀಯ ಮೀನುಗಾರರು ವಿಶೇಷವಾಗಿ ಶ್ರಮಿಸಿದರು. ಘಟನಾ ಸ್ಥಳದ ಹತ್ತಿರ ಸಮುದ್ರದಲ್ಲಿ ಪುರಂದರ ನಾಯ್ಕ ಶವವಾಗಿ ಪತ್ತೆಯಾಗಿದ್ದಾನೆ. ಪಿಎಸ್ಐ ಪ್ರವೀಣ್ ಕುಮಾರ್ ಸ್ಥಳದಲ್ಲಿ ಹಾಜರಿದ್ದರು., ಸ್ಥಳೀಯ ಮುಖಂಡರು,ಊರ ನಾಗರಿಕರು ಸಹಕರಿಸಿದರು. ಎಲ್ಲರೊಂದಿಗೆ ಆತ್ಮೀಯವಾಗಿದ್ದ ಪುರಂದರನ ಅಕಾಲಿಕ ಸಾವಿನಿಂದ ,ಕುಟುಂಬದಲ್ಲಿ ದುಃಖ ಮಡುಗಟ್ಟಿದ್ದು, ಮೃತನಿಗೆ 6 ವರ್ಷದ ಮಗಳು, 3 ವರ್ಷದ ಮಗನಿದ್ದಾರೆ.
ಈ ಸಾವಿನಿಂದ,ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಕೋಲಾ ತಾಲೂಕ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ತನ್ನ ಚಿಕ್ಕಪ್ಪನ ಸಾವಿನ ಕುರಿತು ಬಾವಿಕೇರಿಯ ಸಂಜಯ ನಾಯ್ಕ ಪೊಲೀಸ್ ದೂರು ನೀಡಿದ್ದು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571