ಎಟಿಎಂನಲ್ಲಿ ಸಿಕ್ಕ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕನಿಗೆ ಸಂದ ಗೌರವ: ಪ್ರಶಂಸನಾ ಪತ್ರ ನೀಡಿ ಸನ್ಮಾನ
ಭಟ್ಕಳ: ಎ.ಟಿಎಮ್ ನಲಿ ಸಿಕ್ಕ ಹಣವನ್ನು ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರದ ಯುವಕನಿಗೆ ಜಿಲ್ಲಾ ಹೆಚ್ಚುವರಿ ಪೊಲೀಸವರಿಷ್ಠಧಿಕಾರಿ ಬದ್ರಿನಾಥ ಅವರು ನಗರ ಠಾಣೆಯಲ್ಲಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ .
ಕಳೆದ ಆಗಸ್ಟ್ 31 ರಂದು ತಾಲೂಕಿನ ಬಂದರು ರಸ್ತೆಯಲ್ಲಿನ ಎಟಿಎಂಗೆ ಬಿಲಾಲ್ ತನ್ವಿರ್ ಎಂಬಾತ ತನ್ನ ತಂದೆಯ ಖಾತೆಗೆ 1,74,000 ರೂ. ಜಮಾ ಮಾಡಿ ತೆರಳಿದ್ದರು. ಆದರೆ ಎಟಿಎಂನಲ್ಲಿನ ತಾಂತ್ರಿಕ ತೊಡಕಿನಿಂದ ಹಣ ವಾಪಸ್ ಬಂದಿತ್ತು. ಇದು ತನ್ವಿರ್ ಅರಿವಿಗೆ ಬಂದಿರಲಿಲ್ಲ.
ಬಳಿಕ ಬೆಳಕೆಯ ದಿನಕರ ಗೊಂಡ ಎಂಬಾತ ಇದೇ ಎಟಿಎಂಗೆ ತೆರಳಿದ್ದಾನೆ. ಆಗ ವಾಪಸ್ ಬಂದಿದ್ದ ಹಣವನ್ನು ಕಂಡು, ನಗರ ಠಾಣೆಗೆ ಬಂದು ಪೊಲೀಸರ ವಶಕ್ಕೆ ನೀಡಿ ಘಟನೆ ಬಗ್ಗೆ ತಿಳಿಸಿದ್ದಾನೆ.
ತಕ್ಷಣಕ್ಕೆ ಎಟಿಎಂ ಬಳಿ ತೆರಳಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಆಗ ಹಣವು ಬಿಲಾಲ್ ತನ್ವಿರ್ ತಂದೆಯ ಖಾತೆಗೆ ಜಮಾ ಆಗದಿರುವುದು ತಿಳಿದುಬಂದಿದೆ. ಈ ಬಗ್ಗೆ ಖಾತ್ರಿಪಡಿಸಿಕೊಂಡು 1,74,000 ರೂ.ಗಳನ್ನು ಬಿಲಾಲ್ಗೆ ಹಸ್ತಾಂತರಿಸಿದ ಘಟನೆ ಎಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಯುವಕನ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶನಿವಾರ ಭಟ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯುವಕನನ್ನು ಭಟ್ಕಳ ನಗರ ಠಾಣೆಗೆ ಕರೆದು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ ಪಿ ಕೆ ಯು ಬೆಳ್ಳಿಯಪ್ಪ, ನಗರ ಠಾಣೆಯ ಪಿಎಸ್ ಐಗಳಾದ ಸುಮಾ ಬಿ ಹಾಗೂ ಹನುಮಂತಪ್ಪ ಕುಡಗುಂಟಿ ಉಪಸ್ಥಿತರಿದ್ದರು
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581