Important
Trending

ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ನೌಕರಿ ಗಿಟ್ಟಿಸಿಕೊಂಡ ಭೂಪ ! ಶಿಕ್ಷಕನಿಗೆ ಕಾದಿದೆಯೇ ಶಿಕ್ಷೆ?

ಅಂಕೋಲ : ಸುಳ್ಳು ಪ್ರಮಾಣ ಪತ್ರದ ಮೂಲಕ ನೌಕರಿ ಗಿಟ್ಟಿಸಿಕೊಂಡಿದ್ದ ವ್ಯಕ್ತಿಯೋರ್ವನ ಮೇಲೆ ಬುಧವಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೇಕೇರಿಯ ಚಂದ್ರಕಾಂತ ಮಾಣಿ ನಾಯ್ಕ ಎಂಬಾತನೇ ತನ್ನ ನೌಕರಿ ಆಸೆಯಿಂದ ಅದೇಗೋ 05.03.1993ರಲ್ಲಿ ತನ್ನದಲ್ಲದ ಮೊಗೇರ ಜಾತಿಯ ಸುಳ್ಳು ಪ್ರಮಾಣ ಪತ್ರವನ್ನು ಪಡೆದು, ಅದರ ಆಧಾರದ ಮೇಲೇಯೇ ಪಕ್ಕದ ಜಿಲ್ಲೆಯ (ಉಡುಪಿ – ಕುಂದಾಪುರ ವ್ಯಾಪ್ತಿಯ ) ಸರಕಾರಿ ಅನುದಾನಿತ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕ ನೌಕರಿಗೆ ಸೇರಿಕೊಂಡಿದ್ದ ಎನ್ನಲಾಗಿದೆ.

ಸೇವೆಗೆ ಸೇರಿ ಬಹು ವರ್ಷಗಳ ನಂತರ ಈತನ ದಾಖಲಾತಿಗಳ ಅಸಲಿಯತ್ತು ಬಯಲಿಗೆ ಬಂದಂತಿದೆ. ಮಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಚ್‍ಸಿ ಗಿರೀಶಕುಮಾರ ಈ ಕುರಿತು ಅಂಕೋಲಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪಿಎಸ್‍ಐ ಪ್ರೇಮನಗೌಡ ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ವಾಮ ಮಾರ್ಗದಲ್ಲಿ ಸುಳ್ಳು ಪ್ರಮಾಣ ಪತ್ರದ ಮೂಲಕ ಶಿಕ್ಷಕ ನೌಕರಿ ಮಾಡುತ್ತ ನಿವೃತ್ತಿಗೆ ಕೆಲವೇ ವರ್ಷಗಳು ಬಾಕಿ ಇದ್ದ ಶಿಕ್ಷಕನಿಗೆ,ಕಾನೂನು ರೀತ್ಯ ಶಿಕ್ಷೆ ಆಗಲಿದೆಯೇ? ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button