Important
Trending

ಮನೆಯವರು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ವೇಳೆ ಕಳ್ಳತನ: ಹಣ, ಚಿನ್ನಾಭರಣ ದೋಚಿದ ಕಳ್ಳರು

ಅಂಕೋಲಾ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲಿಗೆ ಹಾಕಿದ ಬೀಗ ಮುರಿದು ಕಪಾಟು ಒಡೆದು ಕೆಲ ಬೆಳ್ಳಿಯ ಆಭರಣ, ಕರಿಮಣಿ ಸರ ಮತ್ತು ನಗದು ಹಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಬಳಲೆ ಮಾದನಗೇರಿಯಲ್ಲಿ ನಡೆದಿದೆ. ಬಳಲೆ ನಿವಾಸಿ ಹರಿಶ್ಚಂದ್ರ ಗಣಪತಿ ಭಂಡಾರಿ ಎನ್ನುವವರ ಮನೆಯಲ್ಲಿ  ಡಿಸೆಂಬರ್ 7 ರ ಬೆಳಗ್ಗೆ 6.30 ರಿಂದ ಡಿಸೆಂಬರ್ 8 ರ ಸಂಜೆ 5.30 ರ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ.

SSC Recruitment: ಕೇಂದ್ರ ಸರ್ಕಾರಿ ಉದ್ಯೋಗ: 4,500 ಹುದ್ದೆಗಳು ಖಾಲಿ: PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು

2 ಸಾವಿರ ರೂಪಾಯಿ ಮೌಲ್ಯದ 1 ಜೊತೆ ಬೆಳ್ಳಿ ಗೆಜ್ಜೆ,  1ಸಾವಿರ ಬೆಲೆಯ ಬೆಳ್ಳಿಯ ಡಾಬು, 20 ಸಾವಿರ ಮೌಲ್ಯದ ಬಂಗಾರದ ಕರಿಮಣಿ ಸರ ಮತ್ತು 6 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು ಸುಮಾರು 30,400 ಬೆಲೆಯ ಸ್ವತ್ತುಗಳನ್ನು ಕಳ್ಳತನ ನಡೆಸಲಾಗಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ  ಮನೆ ಮಾಲಿಕ ದೂರು ದಾಖಲಿಸಿದ್ದಾರೆ. ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಮನೆಯ ಒಳಗಡೆ ರೂಂಗಳಲ್ಲಿ ಇದ್ದ ಕಪಾಟ ಮತ್ತು ಬೀರುಗಳನ್ನು ಒಡೆದು,ಅವುಗಳಲ್ಲಿ ಇದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ,ಕೆಲ ಸ್ಪತ್ತುಗಳನ್ನು ಮತ್ತು ನಗದನ್ನು ಕದ್ದೊಯ್ದಿದ್ದಾರೆ.

ಮನೆಯವರು ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ಹೋಗಿರುವುದು ಗೊತ್ತಿದ್ದೇ  ಈ ಕಳ್ಳತನ ನಡೆಸಿರುವ ಸಾಧ್ಯತೆಗಳು ಕೇಳಿಬಂದಿದ್ದು,ಸ್ಥಳೀಯರ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button