ಹಿರೇಗುತ್ತಿ ಹೈಸ್ಕೂಲ್ ನಲ್ಲಿ ಗಾಂಧಿ ಹಾಗೂ ಶಾಸ್ತ್ರೀ ಜನ್ಮದಿನಾಚರಣೆ ಆಚರಣೆ

ಹಿರೇಗುತ್ತಿ:  ಅಹಿಂಸೆ ಮತ್ತು ಸೋದರತೆ ಪರಿಪಾಲನೆಯೇ ನಾವು ರಾಷ್ಟ್ರಪಿತ ಗಾಂಧೀಜಿಗೆ ಸಲ್ಲಿಸುವ ಗೌರವ ಪರಿಶುದ್ಧ ಪರಿಸರವು ನಮ್ಮ ಬದುಕಿನ ಧ್ಯೇಯವಾಗಬೇಕಾಗಿದೆ. ಹಾಗೆಯೇ ಲಾಲಬಹದ್ದೂರ ಶಾಸ್ತ್ರಿಯವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು  ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ನ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಹೇಳಿದರು. ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ನಲ್ಲಿ ನಡೆದ ಗಾಂಧೀ ಹಾಗೂ ಶಾಸ್ತ್ರೀಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಾರ್ವತಿ ನಾಯಕ ಕೆಂಚನ್  ” ಗಾಂಧೀಜಿ ನಡೆದು ಬಂದ ದಾರಿ ಮತ್ತು ಜೀವನದಲ್ಲಿ ಅಳವಡಿಸಿಕೊಂಡ ಉನ್ನತ ಆದರ್ಶ ಗುಣ ಗಳಿಂದ ಮಹಾತ್ಮ ಎನಿಸಿಕೊಂಡಿದ್ದಾರೆ” ಎಂದರು. ಎನ್ ರಾಮು ಹಿರೇಗುತ್ತಿ “ಎಲ್ಲಾ ಒಳ್ಳೆಯ ಕ್ರಿಯೆಗಳು ಅಂತಿಮವಾಗಿ ಒಳ್ಳೆಯ ಫಲವನ್ನೇ ನೀಡುತ್ತವೆ ಎನ್ನುವುದು ಮಹಾತ್ಮಾ ಗಾಂಧಿಯವರ ಅಚಲ ನಂಬಿಕೆ” ಎಂದರು.  ಕಾರ್ಯಕ್ರಮದಲ್ಲಿ *ಬಾಲಚಂದ್ರ ಹೆಗಡೆಕರ್. ನಾಗರಾಜ ನಾಯಕ. ವಿಶ್ವನಾಥ ಬೇವಿನ ಕಟ್ಟಿ ಮಹಾದೇವ ಗೌಡ. ಇಂದಿರಾ ನಾಯಕ ಜಾನಕಿ ಗೊಂಡ. ಶಿಲ್ಪಾ ನಾಯಕ. ವಸಂತಾಬಾಯಿ.ಕವಿತಾ ಅಂಬಿಗ.ದೇವಾಂಗಿನಿ ನಾಯಕ. ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು

Exit mobile version