
ಸಿದ್ದಾಪುರ: ಬಾಲಕನ ಸಮಯಪ್ರಜ್ಞೆಯಿಂದಾಗಿ ಅಗ್ನಿ ದುರಂತವೊoದು ತಪ್ಪಿದೆ. 9 ವರ್ಷದ ಬಾಲಕ ಗಾಂಧೀ ಜಯಂತಿಯoದು ಶ್ರಮದಾನವನ್ನು ಮುಗಿಸಿ, ಮನೆಗೆ ತೆರಳಿದ್ದಾನೆ. ಈ ವೇಳೆ ತಮ್ಮ ಮನೆಯ ಸುತ್ತಮುತ್ತ ಹೊಗೆಯಾಡುತ್ತಿರುವುದನ್ನು ಕಂಡು ದಂಗಾಗಿದ್ದಾನೆ. ಮನೆಗೆ ತಾಗಿಕೊಂಡಿರುವ ಕೊಟ್ಟಿಗೆ ಮನೆಗೆ ಬೆಂಕಿಬಿದ್ದಿರುವುದನ್ನು ಗಮನಿಸಿ, ಕೂಡಲೇ, ಹತ್ತಿರದಲ್ಲೇ ಇದ್ದ ನೀರನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾನೆ.
ಮನೆಯಲ್ಲಿ ತಂದೆ-ತಾಯಿಗಳಿಲ್ಲವಾಗಿದ್ದು, ಧೃತಿಗೆಡದೇ, ತಕ್ಷಣ ಕಾರ್ಯಪ್ರವರ್ತನಾಗಿ ಬೆಂಕಿ ನಂದಿಸಿದ್ದಾನೆ. ಹೌದು, ಈ ಘಟನೆ ನಡೆದಿರೋದು ತಾಲೂಕಿನ ಸೋವಿನಕೊಪ್ಪಾ ಗ್ರಾ.ಪಂ ವ್ಯಾಪ್ತಿಯ ಹಾವಿನಬೀಳು ಗ್ರಾಮದ ಹೆಮಜೆನಿಯಲ್ಲಿ. 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕ ಸಮರ್ಥ ವೆಂಕಟ್ರಮಣ ಗೌಡ , ಸಂಭಾವ್ಯ ಅನಾಹುತ ತಪ್ಪಿಸಿದ ವ್ಯಕ್ತಿ. ನಂತರ ಪಕ್ಕದ ಊರಿನಲ್ಲಿ ಅಡಿಕೆ ಸುಲಿಯಲು ಹೋಗಿದ್ದ ತನ್ನ ತಾಯಿಯ ಬಳಿ ಹೋಗಿ ನಡೆದ ಘಟನೆ ತಿಳಿಸಿದ್ದಾನೆ. ಆದಾಗಲೇ ಕೆಲ ವಸ್ತುಗಳು ಬೆಂಕಿಗೆ ಆಹುತಿಯಾಗಿತ್ತು. ಆದರೆ, ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ. ಬಾಲಕನ ಸಮಯಪ್ರಜ್ಞೆ ಹಾಗೂ ಧೈರ್ಯ ಮೆಚ್ಚುಗೆ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್, ಸಿದ್ದಾಪುರ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581
