Important
Trending

ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಕ್ಕ ತಮ್ಮನ ಸಾಧನೆ: ಎಲ್ಲೆಡೆ ಮೆಚ್ಚುಗೆ

ಹೊನ್ನಾವರ: ಮಂಗಳೂರಿನ ಮೂಡಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ `ವುಶು’ ಚಾಂಪಿಯನ್‌ಶಿಪ್‌ನಲ್ಲಿ ಹೊನ್ನಾವರ ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕುಮಾರಿ ಯಶಿಕಾ ಕಿರಣಕುಮಾರ ನಾಯ್ಕ ಮೂರನೇ ಬಾರಿಗೆ ಬಂಗಾರದ ಪದಕ, ರಾಜ್ಯಮಟ್ಟದ ವುಶು ಚಾಂಪಿಯನ್‌ಶಿಪ್ ಸಬ್ ಜೂನಿಯರ್ ವಿಭಾಗದಲ್ಲಿ ಕು. ಗಗನ ಕಿರಣಕುಮಾರ್ ನಾಯ್ಕ ಬೆಳ್ಳಿ ಪದಕ ಪಡೆದುಕೊಂಡಿದಾರೆ

ಮಂಗಳೂರಿನ ಮೂಡಬಿದಿರೆಯ ಆಳ್ವಾಸ್ ನುಡಿಶ್ರೀ ವೇದಿಕೆ' ಮೂಡಬಿದಿರೆಯಲ್ಲಿ ನಡೆದ 20ನೇ ರಾಜ್ಯಮಟ್ಟದ ಜೂನಿಯರ್ವುಶು’ ಬಾಕ್ಸಿಂಗ್ ಚಾಪಯನ್‌ಶಿಪ್ ವಿಭಾಗದಲ್ಲಿ ಹೊನ್ನಾವರ ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕು.ಯಶಿಕಾ ಕಿರಣಕುಮಾರ ನಾಯ್ಕ ಹ್ಯಾಟ್ರಿಕ್ ಚಿನ್ನದ ಪದಕ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಕು. ಗಗನ ಕಿರಣಕುಮಾರ್ ನಾಯ್ಕ ಬೆಳ್ಳಿ ಪದಕ ಪಡೆದು ಹೊನ್ನಾವರ ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕು.ಯಶಿಕಾ ಹಾಗೂ ಕು. ಗಗನ ಇವರು ಹೊನ್ನಾವರ ತಾಲೂಕಿನ ಹೊದ್ಕೆ ಶಿರೂರು-ನವೀಲಗೋಣ ಗ್ರಾಮದ ನಿವಾಸಿ ಕಿರಣಕುಮಾರ ನಾಯ್ಕ ಹಾಗೂ ಸುಜಾತಾ ನಾಯ್ಕ ದಂಪತಿಯ ಮಕ್ಕಳಾಗಿದ್ದಾರೆ. ಕು.ಯಶಿಕಾ ಈಕೆಯು ಸತತ ಮೂರನೆ ಬಾರಿಗೆ ರಾಜ್ಯಮಟ್ಟದ ವುಶು ಚಾಂಪಿಯನ್‌ಶಿಪ್ ನಲ್ಲಿ ಸ್ಪರ್ಧಿಸಿ ಪದಕ ಗಿಟ್ಟಿಸಿಕೊಂಡಿರುವುದು ವಿಶೇಷ. ಇನ್ನು ಪುತ್ರ ಕು. ಗಗನ ಕಿರಣಕುಮಾರ್ ನಾಯ್ಕ ಈತ ರಾಜ್ಯಮಟ್ಟದ ವುಶು ಚಾಂಪಿಯನ್‌ಶಿಪ್ ಸಬ್ ಜೂನಿಯರ್ ವಿಭಾಗದಲ್ಲಿ ಮೊದಲಬಾರಿಗೆ ಸ್ಪರ್ಧಿಸಿ ಬೆಳ್ಳಿಪದಕ ಪಡೆದುಕೊಂಡಿದ್ದಾನೆ.

ಈ ಇಬ್ಬರು ವಿದ್ಯಾರ್ಥಿಗಳು ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ಮತ್ತು 2 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಠ್ಯ ಮತ್ತು ಪಠ್ಯೇತರ ಚಟಿವಟಿಕೆಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಚಿನ್ನ ಮತ್ತು ಬೆಳ್ಳಿ ಪದಕ ಗಿಟ್ಟಿಸಿಕೊಂಡಿರುವ ಯಶಿಕಾ ಹಾಗೂ ಗಗನ ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ವುಶು ಅಸೋಶಿಯೇಷನ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆರ್. ಹೊನ್ನಾವರ ಅವರ ಮಾರ್ಗದರ್ಶನದಲ್ಲಿ ಹೊನ್ನಾವರ ಶಾರದಾಂಬಾ ಕಲ್ಯಾಣಮಂಟಪದಲ್ಲಿರುವ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.

ಪದಕ ಪಡೆದ ಕ್ರೀಡಾಪಟುಗಳಿಗೆ ತಂದೆ-ತಾಯಿ, ಶಾಲೆಯ ಶಿಕ್ಷಕರು ಹಾಗೂ ತಾಲೂಕಿನ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್‌ ನಾಯ್ಕ ಹೊನ್ನಾವರ

Back to top button