ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿನ ಕಾರ್ಯಕ್ರಮ

ಕುಮಟಾ: ಸ್ಥಳೀಯ ಹೆರವಟ್ಟಾದ ಶ್ರೀನಿವಾಸ ಚೆರಿಟೇಬಲ್ ಟ್ರಸ್ಟ್ನವರಿಂದ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ದಿ. ಸುಶೀಲಾ ಶ್ರೀನಿವಾಸ ಶ್ಯಾನಭಾಗರ ಪುಣ್ಯತಿಥಿಯ ಸ್ಮರಣಾರ್ಥ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀಮತಿ. ಮೀರಾ ಶ್ಯಾನಭಾಗ ಮತ್ತು ಅತಿಥಿಗಳಾಗಿ ನಿವೃತ್ತ ಪಿ.ಡಬ್ಲು.ಡಿ. ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ್‌ರಾದ ಶ್ರೀ. ರಾಜು ಶ್ರೀಧರ ಶ್ಯಾನಭಾಗ ಹೆರವಟ್ಟಾ ಇವರು ಆಗಮಿಸಿದ್ದರು.

ನಿವೃತ್ತ ಪ್ರಾಂಶುಪಾಲ ಶ್ರೀ. ರಮೇಶ ಎಚ್. ಕಾಮತ, ನಿವೃತ್ತ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀ. ಕೃಷ್ಣ ಗೋಪಾಲಕೃಷ್ಣ ಭಟ್ಟ ಹೆರವಟ್ಟಾ, ವೇದಮೂರ್ತಿ ಮುರಳೀಧರ ಶೇಷಗಿರಿ ಭಟ್ಟ ಕಾಗಾಲ, ನಿವೃತ್ತ ಶಿಕ್ಷಕ ಕಂತಿಮಠ ಪರಮೇಶ್ವರ್ ರಾವ್ ಬಾಡ ಮತ್ತು ಶ್ರೀ ದೇವಪ್ಪಾ ನಾಗಪ್ಪ ನಾಯ್ಕ ಗುಜರಗಲ್ಲಿ ಕುಮಟಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಲ್ಕು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಉಪಸ್ಥಿತರಿದ್ದ ಎಲ್ಲ ಹಿರಿಯ ನಾಗರಿಕರಿಗೆ ಹೂವು ನೀಡಿ ಗೌರವಿಸಲಾಯಿತು.

ಸ್ವಾಗತ ಮತ್ತು ಪರಿಚಯವನ್ನು ಟ್ರಸ್ಟಿಗಳಾದ ದಿವ್ಯಾ ಶ್ಯಾನಭಾಗ, ಪ್ರಸ್ತಾವನೆಯನ್ನು ಮೀರಾ ಶ್ಯಾನಭಾಗ, ಹಿರಿಯ ನಾಗರಿಕರ ಪರಿಚಯವನ್ನು ಅರುಣ ಕಾಮತ, ವಂದನಾರ್ಪಣೆಯನ್ನು ಮುರಳಿಧರ ಭಟ್ಟ ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಅನಂತ ಶ್ಯಾನಭಾಗರವರು ಮಾಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀಯುತ ದಿನಕರ ಕಾಮತ, ಕೃಷ್ಣಾ ಪೈ, ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ. ಸುಧಾಕರ ವಿ. ನಾಯಕ, ಪ್ರೊ. ಡಾ|| ರೇವತಿ ರಾವ್, ವಿಜಯಾನಂದ ಗೋಳಿ, ಮೋಹನ ಧಾರೇಶ್ವರ, ಎನ್. ಆರ್. ಕಾಮತ, ಸುರೇಶ ಶ್ಯಾನಭಾಗ ಮುಂತಾದವರು ಉಪಸ್ಥಿತರಿದ್ದರು.

Exit mobile version