ಸಜ್ಜನ ರಾಜಕಾರಣಿ, ಬಹುಮುಖ ವ್ಯಕ್ತಿತ್ವದ ವೈದ್ಯ ವಿಧಿವಶ

ಅಂಕೋಲಾ : ಮಂಡಲ ಪಂಚಾಯಿತಿ ಸದಸ್ಯರಾಗಿ,ಪ್ರಧಾನ ರಾಗಿ,ತಾಲೂಕು ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಸರಳ -ಸಜ್ಜನಿಕೆಯ ಮೂಲಕ ಹೆಸರಾಗಿದ್ದ ಎಸ್ಎಂ ವೈದ್ಯ (80) ,ಡೊಂಗ್ರಿ ಗ್ರಾಮಪಂಚಾಯತ್ ವ್ಯಾಪ್ತಿಯ ವೈದ್ಯ ಹೆಗ್ಗಾರಿನ ಸ್ವಗೃಹದಲ್ಲಿ ವಿಧಿವಶರಾದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಟ್ಟಾ ಅಭಿಮಾನಿಯಾಗಿದ್ದ ಸುಬ್ರಾಯ ಮಾಬ್ಲೇಶ್ವರ ವೈದ್ಯರು,ಅಂದಿನ ಜನತಾಪಕ್ಷ ಮತ್ತು ಜನತಾದಳದಲ್ಲಿ ಗುರುತಿಸಿಕೊಂಡು,ನಂತರ ಆರ್ ವಿ ದೇಶಪಾಂಡೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿಗೆ‌ ಸೇರ್ಪಡೆಗೊಂಡಿದ್ದರು.

ತದನಂತರದದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದಲ್ಲದೇ ಅಂಕೋಲಾ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಹವ್ಯಕ ಸಂಘ, ಸೇವಾ ಸಹಕಾರಿ ಬ್ಯಾಂಕ್ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳ ಅಧ್ಯಕರಾಗಿ, ಪದಾಧಿಕಾರಿಯಾಗಿ ಸಾಮಾಜಿಕ ಧಾರ್ಮಿಕ, ಅರ್ಥಿಕ,ರಾಜಕೀಯ ಕ್ಷೇತ್ರಗಳಲ್ಲಿ ಜನಮನ್ನಣೆ ಗಳಿಸಿದ್ದರು.ಉತ್ತಮ ಕೃಷಿಕರಾಗಿದ್ದ ಇವರು ಅಪಾರ ದೈವ ಭಕ್ತರೂ ಆಗಿದ್ದರು.

ಮೃತರು, ಪತ್ನಿ ಭಾಗೀರಥೀ ವೈದ್ಯ, ಮೂವರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ತೊರೆದಿದ್ದಾರೆ.. ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಆರ್ ವಿ ದೇಶಪಾಂಡೆ,ಮಾಜಿ ಶಾಸಕರಾದ ಸತೀಶ ಸೈಲ್, ಕೆ. ಎಚ್. ಗೌಡ, ತಾ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಜಿ.ಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ , ಪ್ರಮುಖರಾದ ಬಿಡಿ ಬಿಡಿ ನಾಯ್ಕ,ವಿಲ್ಸನ್ ಡಿಕೋಸ್ತ, ಶಾಂತಿ ಆಗೇರ,ರಾಜೇಶ್ ಮಿತ್ರ ನಾಯ್ಕ,ಮಂಜುನಾಥ್ ದತ್ತ ನಾಯ್ಕ,ಪ್ರಕಾಶ್ ಗೌಡ, ಮಾದೇವ ಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರೆ ಹಿರಿ – ಕಿರಿಯ ಮುಖಂಡರು, ಡೊಂಗ್ರಿ ಗ್ರಾಮಪಂಚಾಯತ್ ವ್ಯಾಪ್ತಿಯ ಮುಖಂಡರನೇಕರು ಎಸ್ಎಂ ವೈದ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version