ಸಾರ್ವಜನಿಕರ ಕುಂದು ಕೊರತೆ ಆಲಿಸಲು ಜಿಲ್ಲಾಧಿಕಾರಿಗಳ ಗ್ರಾಮ‌ ವಾಸ್ತವ್ಯ: ಜಿಲ್ಲೆಯಲ್ಲಿ ಎಲ್ಲೆಲ್ಲಿ‌ ನಡೆಯಲಿದೆ ಈ ಗ್ರಾಮ ವಾಸ್ತವ್ಯ ನೋಡಿ?

ಕಾರವಾರ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಕಿನ್ನರ ಹೋಬಳಿಯ ಶಿರ್ವೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಸಾರ್ವಜನಿಕರ ಕುಂದು ಕೊರತೆ ಆಲಿಸಲು ಅಕ್ಟೊಬರ್ 16 ರಂದು ಬೆಳಿಗ್ಗೆ 10 ರಿಂದ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅಂದು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಆಯಾ ತಾಲೂಕಿನಲ್ಲಿ ಆಯ್ಕೆ ಮಾಡಿದಂತಹ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಭಟ್ಕಳ ತಾಲೂಕಿನ ಕೋಣಾರ, ಕುಮಟಾ ತಾಲೂಕಿನ ಯಾಣ, ಶಿರಸಿ ತಾಲೂಕಿನ ಹಂಚರಟಾ, ಅಂಕೋಲಾ ತಾಲೂಕಿನ ಸಕಲಬೇಣ, ಹಳಿಯಾಳ ತಾಲೂಕಿನ ಸಾತನಳ್ಳಿ, ದಾಂಡೇಲಿ ತಾಲೂಕಿನ ಕೇರದಾಳ,ಹೊನ್ನಾವರ ತಾಲೂಕಿನ ಮಹಿಮೆ, ಸಿದ್ದಾಪುರ ತಾಲೂಕಿನ ಭಂಡಾರಕೇರಿ, ಯಲ್ಲಾಪುರ ತಾಲೂಕಿನ ಗುಳ್ಳಾಪುರ, ಮುಂಡಗೋಡ ತಾಲೂಕಿನ ಉಗ್ಗಿನಕೇರಿ, ಜೋಯಿಡಾ ತಾಲೂಕಿನ ಫಣಸೋಲಿ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಅಭಿಯಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕಾರ್ಯಾಲಯ ಮಾಹಿತಿ ನೀಡಿದೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version