Follow Us On

WhatsApp Group
Important
Trending

ಅಕ್ರಮ ಜಾನುವಾರು ಸಾಗಾಟ ಪ್ರಕರಣ : ನಾಲ್ವರು ಆರೋಪಿಗಳ ಬಂಧನ, ಓರ್ವ ಪರಾರಿ! 17 ಕೋಣಗಳನ್ನು ಸಾಗಿಸುತ್ತಿದ್ದ ಲಾರಿ,ಬೆಂಗಾವಲು ಇನೋವಾ ಕಾರು , ಮೊಬೈಲ್ ಹಾಗೂ ನಗದು ವಶ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಭಟ್ಕಳ, ಮಂಗಳೂರು, ಕೇರಳ ಭಾಗಗಳಿಗೆ ಅಕ್ರಮ ಜಾನುವಾರುಗಳ ಸಾಗಟ ಜಾಲ ನಿರಂತರವಾಗಿ ಮುಂದುವರಿದಿದ್ದು ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಯಾವುದೇ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ 17 ಕೋಣಗಳನ್ನು ಅಂಕೋಲಾ ಪೊಲೀಸರು ರಕ್ಷಿಸಿದ್ದು  ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ್ದ ದೊಡ್ಡ ಲಾರಿ (ಕೆಎ 01, ಎ ಎಲ್ 2779 ) ಬೆಂಗಾವಲಾಗಿ ಬಂದಿದ್ದ ಇನೋವಾ ವಾಹನ ಜಪ್ಪು ಮಾಡಿ ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಬೆಳ್ತಂಗಡಿ ನಿವಾಸಿ ಲಾರಿ ಚಾಲಕ ಹೈದರ್ ರೆಹಮನ್ ಬ್ಯಾರಿ(40)ಅಂಕೋಲಾ ಶಿರಗುಂಜಿಯ ಬೊಮ್ಮಯ್ಯ ಬೀರಣ್ಣ ನಾಯಕ (80) ಹಾಸನ ಹಳೇಕೊಪ್ಪಲಿನ ಮಂಜೇಗೌಡ ಜವರೇಗೌಡ(62)ಕೇರಳ ಕಾಸರಗೋಡದ ಅಬ್ದುಲ್ ರಿಯಾಜ್ ಮಹಮ್ಮದ್ (27) ಬಂಧಿತ ಆರೋಪಿಗಳಾಗಿದ್ದು ಇನ್ನೊರ್ವ ಆರೋಪಿ ಕೇರಳದ ಅಬುಬಕರ್ ರಿಯಾಜ್ ಎಂಬಾತ ತಪ್ಪಿಸಿಕೊಂಡು  ಓಡಿ ಹೋಗಿದ್ದಾನೆ.

ಆರೋಪಿತರಿಂದ 2ಲಕ್ಷ 25 ಸಾವಿರ ಮೌಲ್ಯದ 17 ಕೋಣಗಳು, 6ಲಕ್ಷ  ಮೌಲ್ಯದ ಲಾರಿ 3 ಲಕ್ಷ ಮೌಲ್ಯದ ಇನೋವಾ ವಾಹನ, 47 ಸಾವಿರ ಮೌಲ್ಯದ ಮೂರು ಮೊಬೈಲ್ ಪೋನುಗಳು ಮತ್ತು 30 ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಇನ್ನೋವಾ ಬೆಂಗಾವಲು ಭಾರೀ ಪ್ರಮಾಣದಲ್ಲಿ ಜಾನುವಾರುಗಳ ಸಾಗಟ ನಡೆಯುವ ಸಂದರ್ಭದಲ್ಲಿ ಸಾಗಾಟ ಮಾಡುವ ವಾಹನದ ಬೆಂಗಾವಲಾಗಿ ಐಷಾರಾಮಿ ವಾಹನಗಳಲ್ಲಿ ಅಕ್ರಮ  ದಂದೆಕೋರರು ಸಾಗುವುದು ಸಹ ಈ ಘಟನೆಯಲ್ಲಿ ಸಾಬೀತಾಗಿದ್ದು ಕೇರಳ ರಾಜ್ಯದ ನೋಂದಣಿ ಸಂಖ್ಯೆ (ಕೆ ಎಲ್ 60, ಬಿ 4004) ಇರುವ ಇನೋವಾ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಅಂಕೋಲಾದಿಂದಲೇ ಅಕ್ರಮ ಸಾಗಾಟ ನಂಟು?:ಪ್ರಕರಣದಲ್ಲಿ ಅಂಕೋಲಾ ಶಿರಗುಂಜಿಯ ಆರೋಪಿಯೋರ್ವನನ್ನು ಬಂಧಿಸಲಾಗಿದ್ದು,ಇವರ ಮೇಲೆ ಈ ಹಿಂದೆಯೂ ಅಕ್ರಮ ಜಾನುವಾರು ಸಾಗಾಟದ ಆರೋಪ ಕೇಳಿಬಂದಿತ್ತು.

ಹಾಗಾಗಿ ಸ್ಥಳೀಯರೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಅಕ್ರಮ ದಂಧೆಕೋರರೊಂದಿಗೆ ನೇರ ನಂಟು ಬೆಳೆಸಿ ಅಕ್ರಮ ವ್ಯವಹಾರ  ಮತ್ತಷ್ಟು ಹೆಚ್ಚಲು ಕಾರಣರಾಗಿದ್ದಾರೆ ಎನ್ನಲಾಗಿದ್ದು,ಸ್ಥಳೀಯ ಜಾಲ ಬೇಧಿಸಿ ,ಅಕ್ರಮ ದಂಧೆಕೋರರನ್ನು ಹೆಡೆಮುರಿಕಟ್ಟಬೇಕೆನ್ನುವುದು ಗೋ ಪ್ರಿಯರ ಆಶಯವಾಗಿದೆ.

ಖಚಿತ ಮಾಹಿತಿಯ ಮೇರೆಗೆ ನಸುಕಿನ ವೇಳೆ  ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ತಮ್ಮ ಸಿಬ್ಬಂದಿಗಳೊಂದಿಗೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.    ಪಿ ಎಸೈ  ಪ್ರವೀಣ್ ಕುಮಾರ್ ಮತ್ತು,ಪ್ರೇಮನ ಗೌಡ ಪಾಟೀಲ್,ಸಿಬ್ಬಂದಿಗಳಾದ ಮಂಜುನಾಥ್ ಲಕ್ಮಾಪುರ್,ಆಸಿಫ್ ಕುಂಕೂರ್, ಭಗವಾನ್ ಗಾಂವಕರ್, ಚಾಲಕ ಸತೀಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸಬಲ್ಲದು.

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button