ಭಟ್ಕಳ: ಶಂಕಿತ ಉಗ್ರನ ಜೊತೆ ಭಟ್ಕಳದ ಮಹಿಳೆಯೋರ್ವಳು ಹೊಂದಿರುವ ನಂಟು ಹಿನ್ನೆಲೆಯಲ್ಲಿ ಮುಂಬೈನ ಎಟಿಎಸ್ ತಂಡ ಪುರಸಭೆಯ ಆಜಾದ್ ನಗರದ ಮಹಿಳೆಯೋರ್ವಳ ಆಗಮಿಸಿದೆ. ಮಹಿಳೆಯನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಮುಂಬೈನ ನಾಸಿಕನ ಶಂಕಿತ ಉಗ್ರ ಹುಜೈಫ್ ಅಬ್ದುಲ್ ಅಜೀಜ್ ಶೇಖ್(30) ಈತನು ಭಟ್ಕಳಕ್ಕೆ ಜನವರಿ 17 ರಂದು ಜಾಲಿಯ ಆಜಾದ್ ನಗರದ ಮಹಿಳೆಯ ಜೊತೆಗೆ ಸಂಪರ್ಕದಲ್ಲಿದ್ದ ಆರೋಪ ಮೇಲೆ ಖಚಿತ ಮಾಹಿತಿ ಮೆರೆಗೆ ಭಟ್ಕಳಕ್ಕೆ ಮುಂಬೈನ ಎಟಿಎಸ್ ತಂಡವು ಪರಿಶೀಲನೆ ಆಗಮಿಸಿತ್ತು.
ಎಟಿಎಸ್ ತಂಡದ ಐದು ಅಧಿಕಾರಿಗಳು ಶಂಕಿತ ಉಗ್ರ ಅಜೀಜ್ ಶೇಜ್ ಅವರೊಂದಿಗಿನ ಸಂಬoಧ ಹಾಗೂ ಸಂಪರ್ಕದ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಪರಿಶೀಲನೆಯ ವೇಳೆ ಮಹಿಳೆಯು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾಳೆಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಶಂಕಿತ ಉಗ್ರನ ಜೊತೆಗೆ ಈಕೆಯು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ನಂತರ ಇಬ್ಬರಲ್ಲಿಯು ಸ್ನೇಹ ಬೆಳೆದು ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಪ್ರಮುಖವಾಗಿ ಮಹಿಳೆ ಉಗ್ರನಿಗೆ ತನ್ನ ಬ್ಯಾಂಕ್ ಖಾತೆಯಿಂದ ಆಗಾಗ ಹಣ ವರ್ಗಾವಣೆ ಮಾಡಿರುವ ಬಗ್ಗೆ ತಿಳಿಸಿದ್ದು , ಇವರಿಗೆ ಒಟ್ಟು 5 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ಬಗ್ಗೆ ಮಹಿಳೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಶಂಕಿತ ಉಗ್ರ ಅಜೀಜ್ ಶೇಕ್ ಭಟ್ಕಳಕ್ಕೆ ಜನವರಿಗೆ 17 ರಂದು ಬಂದಿದ್ದು, ತಾಲೂಕಿನ ಖಾಸಗಿ ಲಾಡ್ಜವೊಂದರಲ್ಲಿ ಒಂದು ದಿನ ಉಳಿದು ಹೋದ ಕುರಿತು ಮತ್ತು ಮಹಿಳೆಯು ಆತನೊಂದಿಗೆ ಉಳಿದಿದ್ದಳು ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ