Important
Trending

Kumta Beach ನಲ್ಲಿ ಇದೇ ಮೊದಲ ಬಾರಿಗೆ ಜಲಸಾಹಸ ಕ್ರೀಡೆ: ವಾಟರ್ ಸ್ಪೋರ್ಟ್ಸ್ ನಿಂದ ಇನ್ನಷ್ಟು ಹೆಚ್ಚಿದ ಕಡಲತೀರದ ಮೆರುಗು

ಕುಮಟಾ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕುಮಟಾ ತಾಲೂಕಿನ ವನ್ನಳ್ಳಿಯ ಹೆಡ್ ಬಂದರ್ ( Kumta Beach) ಬೀಚ್‌ನಲ್ಲಿ ಕೆರೆಯಪ್ಪ ಹರಿಕಾಂತ ಇವರ ಮಾಲಿಕತ್ವದಲ್ಲಿ ಹೆಡ್ ಬಂದರ್ ಅಡ್ವೆಂಚರ್ ಹೆಸರಿನ ವಾಟರ್ ಸ್ಪೋರ್ಟ್ಸ್ ಪ್ರಾರಂಭಗೊoಡಿದೆ. ಈ ಒಂದು ವಾಟರ್ ಸ್ಪೋಟ್ಸ್ ನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕರಾವಳಿ ಕಾವಲು ಪಡೆಯ ಪಿಎಸ್‌ಐ ಅನೂಪ್ ನಾಯಕ ಅವರು ದೀಪ ಬೆಳಗಿ ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯು ಪ್ರವಾಸೋದ್ಯಮದಲ್ಲಿ ದಿನೆ ದಿನೆ ಸಾಕಷ್ಟು ಮುಂದುವರೆಯುತ್ತಿದ್ದು, ಅದಕ್ಕೆ ಪೂರಕ ಎನ್ನುವಂತೆ ಕುಮಟಾದ ವನ್ನಳ್ಳಲ್ಲಿಯ ಹೆಡ್ ಬಂದರ್ ಬೀಚ್‌ನಲ್ಲಿ ಕೆರೆಯಪ್ಪ ಇವರ ಮಾಲೀಕತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಎಂಬoತೆ ಜಲ ಸಾಹಸ ಕ್ರೀಡೆ ಪ್ರಾರಂಭಗೊoಡಿದೆ. ಒಂದು ಬೀಚ್‌ಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯದ ವ್ಯವಸ್ಥೆಯಾದಲ್ಲಿ ಆ ಒಂದು ಬೀಚ್ ಅಂತರಾಷ್ಟಿçÃಯ ಮಾನ್ಯತೆ ಪಡೆಯಲು ಅರ್ಹವಾಗಿರುತ್ತದೆ. ಈ ನಿಟ್ಟಿನಲ್ಲಿ ಹೆಡ್ ಬಂದರ್ ಅಡ್ವೆಂಚರ್ ನ ಮೊದಲ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡಬೇಕು. ವನ್ನಳ್ಳಿಯ ಹೆಡ್ ಬಂದರ್ ಬೀಚ್ ಅತ್ಯಂತ ಹೆಸರುವಾಸಿಯಾಗಿದ್ದು, ಆದರೆ ಇಲ್ಲಿ ಜಲ ಸಾಹಸ ಕ್ರೀಡೆಯ ಕೊರತೆಯೊಂದಿತ್ತು. ಆದರೆ ಇದೀಗ ಕೆರೆಯಪ್ಪ ಇವರ ಮಾಲೀಕತ್ವದಲ್ಲಿ ಜಲಸಾಹಸ ಕ್ರೀಡೆ ಪ್ರಾರಂಭಗೊoಡಿದೆ. ಇವರ ಈ ಒಂದು ಉದ್ಯಮ ಅತ್ಯಂತ ಯಶಸ್ವಿಯಾಗಿ ಹೊರಹೊಮ್ಮಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕೊಸ್ಟಾರಿಕ ರೆಸಾರ್ಟ್ ಹೆಡ್‌ಬಂದರ್ ಇದರ ಮಾಲರ‍್ದ ಶ್ರೀನಿವಾಸ ನಾಯ್ಕ ಅವರು ಮಾತನಾಡಿ, ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಇಂದಿನ ಈ ಒಂದು ಹೆಡ್ ಬಂದರ್ ಅಡ್ವೆಂಚರ್ ಜಲಸಾಹಸ ಕ್ರೀಡೆಯು ಶುಭಾರಂಭಗೊAಡಿರುವುದು ಐತಿಹಾಸಿಕ ದಿನ. ಕುಮಟಾ ಸುತ್ತಮುತ್ತಲಿನ ಹಾಗೂ ಜಿಲ್ಲೆಯ ಹೊರ ಜಿಲ್ಲೆಯ ಪ್ರವಾಸಿಗರು ಈ ಒಂದು ಜಲಸಾಹಸ ಕ್ರೀಡೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಶುಭಹಾರೈಸಿದರು.

ಕುಮಟಾದ ವನ್ನಳ್ಳಿಯ ಹೆಡ್ ಬಂದರ್ ( Kumta Beach) ಬೀಚ್ ಅತ್ಯಂತ ಸುರಕ್ಷಿತವಾದ ಬೀಚ್ ಆಗಿದ್ದು, ಈ ಒಂದು ಬೀಚ್‌ನಲ್ಲಿ ತೆರೆಯ ಪ್ರಮಾಣ ಅತ್ಯಂತ ಕಡಿಮೆ ಎಂಬುದು ಇಲ್ಲಿನ ಸ್ಥಳೀಯರು ಹಾಗೂ ಮೀನುಗಾರರ ಅಭಿಪ್ರಾಯ. ತನ್ನ ನೈಸರ್ಗಿಕ ಸೌಂದರ್ಯದಿAದಲೇ ಹೆಸರುವಾಸಿಯಾಗಿರುವ ಈ ಒಂದು ಬೀಗ್‌ಗೆ ಇನ್ನಷ್ಟು ಕಳೆ ಎಂಬoತೆ ಕೆರೆಯಪ್ಪ ಹರಿಕಾಂತ ಇವರ ಮಾಲಿಕತ್ವದಲ್ಲಿ ಹೆಡ್ ಬಂದರ್ ಅಡ್ವೆಂಚರ್ ಹೆಸರಿನ ವಾಟರ್ ಸ್ಪೋರ್ಟ್ಸ್ ಪ್ರಾರಂಭಗೊoಡಿರುವುದು ಸಂತಸದ ಸಂಗತಿಯಾಗಿದೆ.

ಕಾರ್ಯಕ್ರಮದಲ್ಲಿ ಕುಮಟಾ ಪಿಎಸ್‌ಐ ಸುನೀಲ್ ಸಿ.ಬಿ, ಸಂಪತ್ ಕುಮಾರ್, ಪ್ರಮುಖರಾದ ಮಹೇಶ ನಾಯ್ಕ ವನ್ನಳ್ಳಿ, ಹುಸೇನ್ ಉರ‍್ಕರ್ ವನ್ನಳ್ಳಿ, ನಾಗರಾಜ ಹರಿಕಾಂತ, ರಮೇಶ ನಾಯ್ಕ, ಡಾ. ಸಂಜಯ ಪಟಗಾರ, ಅನಿತಾ ಮಾಪಾರಿ, ಸಹ ಮಾಲೀಕರಾದ ಜನಾರ್ಧನ ಹರಿಕಾಂತ, ಬಾಬು ಹಾರಿಕಾಂತ, ಊರಿನ ಯಜಮಾನರಾದ ಮಹಾಬಲೇಶ್ವರ ಹೊನ್ನಪ್ಪ, ಸೀ ವಂಡರ್ ಗೋಕರ್ಣ ಇದರ ಮಾಲಿಕರಾದ ಕೃಷ್ಣ ಹರಿಕಾಂತ ಸೇರಿದಂತೆ ಸ್ಥಳೀಯರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Back to top button