Important
Trending

ಸೀಮೆಎಣ್ಣೆ, ಹಗ್ಗ, ಕ್ಯಾನು ಹಿಡಿದು ಪ್ರತಿಭಟನೆ: ಸಾವೊಂದೆ ದಾರಿಯೆಂದ ಪ್ರತಿಭಟನಾಕಾರರು

ಅಂಕೋಲಾ: ಪುರಸಭೆ ವ್ಯಾಪ್ತಿಯ ಹಿಂದೂ ಸ್ಮಶಾನ ಭೂಮಿ ಅತಿಕ್ರಮಣ ತೆರವುಗೊಳಿಸುವ ಆದೇಶವನ್ನು ಖಂಡಿಸಿ ಸ್ಥಳೀಯ ಕೋಟೆವಾಡ ನಿವಾಸಿಗಳು ಶನಿವಾರ ಹಠಾತ್ ಪ್ರತಿಭಟನೆ ನಡೆಸಿ, ಮನೆ ತೆರವುಗೊಳಿಸಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಅಂಕೋಲಾ ತಾಲೂಕಿನ ಹಿಂದೂ ಸ್ಮಶಾನ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಿ ಸ್ಮಶಾನ ಭೂಮಿ ಜಾಗ ಕಾಪಾಡಬೇಕೆಂದು ಹಿಂದೂ ಸ್ಮಶಾನ ಸುರಕ್ಷಾ ಸಮಿತಿ ಅಧ್ಯಕ್ಷ ಸುರೇಶ ವರ‍್ಣೇಕರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ತಮಟೆ ಬಾರಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಹಿಂದೂ ಸ್ಮಶಾನ ಭೂಮಿಯ ಬೇಡಿಕೆಯ ಅನ್ವಯ ಕಾನೂನಿನ ಪ್ರಕಾರ ಅತಿಕ್ರಮಣ ವಾದ ಮನೆಗಳನ್ನು ತೆರವುಗೊಳಿಸಲು ಕಂದಾಯ ಇಲಾಖೆ ವರದಿ ಆಧರಿಸಿ ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ ಅಲ್ಲಿನ 40ಕ್ಕೂ ಅಧಿಕ ಕುಟುಂಬಗಳಿಗೆ ನೋಟಿಸ್ ನೀಡಿ ಅತಿಕ್ರಮಣದ ಕುರಿತು ಸ್ಪಷ್ಟನೆ ಒದಗಿಸಲು ಏಳು ದಿನಗಳ ಕಾಲಾವಕಾಶ ನೀಡಿದ್ದರು. ಇಲ್ಲವಾದಲ್ಲಿ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಸೂಚಿಸಿದ್ದರು.

ಪುರಸಭೆಯ ಮುಖ್ಯ ಅಧಿಕಾರಿಗಳ ಆದೇಶದ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ, ಕಳೆದ 5-6 ದಶಕಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ನಮ್ಮಲ್ಲಿ ಹಲವರಿಗೆ ಈಗಾಗಲೇ ಮನೆ ಹಕ್ಕು ಪತ್ರ, ಕರವಸೂಲಿ ರಸೀದಿ, ವಿದ್ಯುತ್ ಸಂರ‍್ಕ, ನೀರಿನ ಸಂರ‍್ಕ ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರೆಯುತ್ತಿವೆ. ಆದಾಗಿಯೂ ಸಮಿತಿಯ ಒತ್ತಾಯದಿಂದ ನಮ್ಮನ್ನು ಬೀದಿ ಗೆಳೆಯಲು ಪ್ರಯತ್ನಿಸಲಾಗುತ್ತಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಮ್ಮನ್ನು ಒಕ್ಕಲೆಬ್ಬಿಸಿದರೆ ಆತ್ಮಹತ್ಯೆಯೊಂದೇ ಕೊನೆಯ ದಾರಿಯಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸಾಂಕೇತಿಕವಾಗಿ ಸೀಮೆಎಣ್ಣೆ ಹಾಗೂ ಹಗ್ಗವನ್ನು ತಂದ ಸ್ಥಳೀಯ ವೃದ್ಧರು, ಮಹಿಳೆಯರು ಮಕ್ಕಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾನಿರತರ ಪರವಾಗಿ ಪೋರಿ ಸಣ್ಣ ಗೌಡ, ಮಮತಾ ಶೆಟ್ಟಿ, ಅನ್ವರ್ ಪಾಸ್ಟರ್, ಜುಬೇರ್ ಮಹಮ್ಮದ್ ಇಕ್ಬಾಲ್, ಸಚಿನ್ ನಾಯ್ಕ ಸಮಸ್ಯೆಗಳನ್ನು ಎಳೆ
ಎಳೆಯಾಗಿ ಹೇಳಿ ತಮ್ಮ ಹೇಳಿ ತಮ್ಮ ಆಕ್ರೋಶ ಹೊರಹಾಕಿದರು ಹಾಗೂ ನೋವು ಹೊರಹಾಕಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು. ಪಿಎಸ್ಐ ಪ್ರೇಮನ ಗೌಡ ಪಾಟೀಲ್ ಹಾಗೂ ಪಿಎಸ್ಐ ಪ್ರವೀಣ ಕುಮಾರ ಇಲಾಖೆಗೆ, ಮಾಹಿತಿ ನೀಡದೆ ಏಕಾಏಕಿ ಪ್ರತಿಭಟಿಸುವುದು ಸಮಂಜಸವಲ್ಲ.ಸಮಸ್ಯೆ ಪರಿಹಾರಕ್ಕೆ ಕಾನೂನಿನ ಇತಿಮಿತಿಯಲ್ಲಿ ಹಲವಾರು ದಾರಿಗಳಿವೆ.ಯಾರಿಗೂ ಮಾಹಿತಿ ನೀಡದೆ ಪ್ರತಿಭಟಿಸುವ ವೇಳೆ ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ? ಎಂದು ಕೇಳಿ,ಆವೇಶದಿಂದ ಆಪತ್ತು ಸಂಭವಿಸಬಹುದು ಎಂದು ತಿಳಿಹೇಳಿದರು.

ಪೊಲೀಸ್ ಅಧಿಕಾರಿಗಳ ಮಾತಿನಿಂದ ಸಮಾಧಾನ ತಾಳಿದ ಪ್ರತಿಭಟನಾಕಾರರು ಕಾನೂನಿನ ಚೌಕಟ್ಟಿನಲ್ಲಿ ಮುಂದೆ ತಾವು ಪ್ರತಿಭಟಿಸುವುದಾಗಿ ಹೇಳಿ ತಾತ್ಕಾಲಿಕವಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದು ಕೊಂಡರು. ಕಳೆದ ಕೆಲರ‍್ಷಗಳಿಂದ ಸ್ಮಶಾನ ಭೂಮಿ ನಾನಾ ರೀತಿಯ ಸಮಸ್ಯೆ ವಿವಾದಗಳಿಂದ ಸುದ್ದಿಯಾಗುತ್ತಲೇ ಇದ್ದು,ಸಂಬಂಧಿಸಿದ ಇಲಾಖೆ ಜನಪ್ರತಿನಿಧಿಗಳು ಹಾಗೂ ಸಮಿತಿ ಮತ್ತಿತರ ಸರ‍್ವಜನಿಕರು ಪರಸ್ಪರ ಸಹಕಾರ ಭಾವನೆಯಿಂದ ಎಲ್ಲ ಸಮಸ್ಯೆಗಳನ್ನು ಇತ್ರ‍್ಥಪಡಿಸಿಕೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸಬಲ್ಲದು.

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button