Follow Us On

WhatsApp Group
Focus News
Trending

ಲಯನ್ಸ್ ಕ್ಲಬ್ ನಿಂದ ಹಂಗರ್ ಕಾರ್ಯಕ್ರಮ:30 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಕ್ಕಿ ವಿತರಣೆ

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಜಗತ್ತಿನ ಅತೀ ದೊಡ್ಡ ಸೇವಾ ಸಂಸ್ಥೆಯಾಗಿದ್ದು ತನ್ನ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ. ಲಯನ್ಸ್ ಮೂಲಕ ನಡೆಯುವ ಸೇವಾ ಚಟುವಟಿಕೆಗಳಿಗೆ ಯಾವುದೇ ಆದಾಯದ ಮೂಲ ಇರುವುದಿಲ್ಲ. ಲಯನ್ ಸದಸ್ಯರೇ ತಮ್ಮ ಆದಾಯದ ಸ್ವಲ್ಪ ಭಾಗವನ್ನು ಸಂಗ್ರಹಿಸುವ ಮೂಲಕ ವಿವಿಧ ‌ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ವಿನೋದ ನಾಯ್ಕ ಮಾವಿನಹೊಳೆ ನುಡಿದರು

ಅವರು ಅಂತರಾಷ್ಟ್ರೀಯ ಲಯನ್ಸ್ ಅಧ್ಯಕ್ಷ ಎಮ್.ಜೆ.ಎಫ್ ಲಯನ್ ಅಲೆಗ್ಸಾಂಡರ್ ರವರ ಹುಟ್ಟು ಹಬ್ಬದ ನಿಮಿತ್ತ, ‌ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕೋಣಕಾರ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಹಂಗರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, 30 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಕ್ಕಿ ವಿತರಿಸಿ ಮಾತನಾಡಿದರು.

ಹಳದೀಪುರ ಗಾಮ ಪಂಚಾಯತದ ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಾ ನಾಯ್ಕ ಮಾತನಾಡಿ ಹೊನ್ನಾವರ ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆಗಳನ್ನು ಸ್ಮರಿಸಿ,ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯಗಳು ಲಯನ್ಸ್ ಕ್ಲಬ್ ನಿಂದ ನೇರವೇರಲೆಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಝೋನ್ ಚೇರ್ ಪರ್ಸನ್ ಎಮ್.ಜೇ.ಎಫ್ ಲಯನ್ ರಾಜೇಶ ಸಾಳೇಹಿತ್ತಲ್, ಇವೆಂಟ್ ಚೇರಮನ್ ಎಮ್.ಜೆ.ಎಫ್ ಲಯನ್ ಡಾ.ಎ.ವಿ.ಶ್ಯಾನಭಾಗ್, ಖಜಾಂಚಿ ಎಮ್.ಜೆ.ಎಫ್ ಲಯನ ಎಸ್.ಜೆ.ಕೈರನ್,ಸಹ ಕಾರ್ಯದರ್ಶಿ ಲಯನ್ ಎನ್.ಜಿ.ಭಟ್ ಮಾತನಾಡಿದರು.

ಕಾರ್ಯದರ್ಶಿ ಲಯನ್ ಉದಯ ನಾಯ್ಕ ಸ್ವಾಗತಿಸಿದರು. ಲಯನ್ ಎಮ್.ಜಿ.ನಾಯ್ಕ ನಿರೂಪಿಸಿದರು.ಲಯನ್ ಮಹೇಶ ನಾಯ್ಕ ವಂದಿಸಿದರು.ಕಾರ್ಯಕ್ರಮದಲ್ಲಿ ಲಯನ್ ಮಂಜು ಆಚಾರ್ಯ,ಲಯನ್ ಪ್ರಭಾಕರ ಮಾಸ್ತಿಕಟ್ಟೆ,ಲಯನ್ ಸಂತೋಷ ನಾಯ್ಕ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ viral ಹೊನ್ನಾವರ

Back to top button