Follow Us On

Google News
Focus News
Trending

ವ್ಯವಸ್ಥಿತವಾಗಿ ಡ್ರ‍್ಯಾಗನ್ ಫ್ರೂಟ್ ಬೆಳೆದ ಯುವ ರೈತ : ಈ ಬಾರಿ ಮತ್ತೊಂದು ಎಕರೆ ಪ್ರದೇಶಕ್ಕೆ ವಿಸ್ತರಣೆ

ಭಟ್ಕಳ: ಡ್ರ‍್ಯಾಗನ್ ಫ್ರೂಟ್ ಒಂದು ಲೆಕ್ಕದಲ್ಲಿ ಕೊಂಚ ದುಬಾರಿ ಹಣ್ಣು ಕೂಡಾ ಹೌದು, ಅದರಲ್ಲೂ ಈ ಹಣ್ಣಿನಲ್ಲಿ ಅಡಕವಾಗಿರೋ ವಿಟಾಮಿನ ಸಿ, ಬಿ1, ಬಿ2 ಬಿ3, ಕಬ್ಬಿಣ, ಕ್ಯಾಲ್ಸಿಯಂ, ಮತ್ತು ರಂಜಕದoತಹ ಖನಿಜಾಂಶಗಳು ದೇಹದ ಆರೋಗ್ಯಕ್ಕೆ ಪೂರಕವಾಗಿರೋ ಕಾರಣಕ್ಕೆ ಈ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ವಿದೇಶಿ ಹಣ್ಣುಗಳಾದ ಇಂತಹ ಹಣ್ಣುಗಳನ್ನು ಸೇವಿಸೋದು ಒಂದು ಕಾಲದಲ್ಲಿ ಪ್ರತಿಷ್ಟೆಯ ವಿಚಾರವಾಗಿರುತ್ತಿತ್ತು ಆದರೆ ಈಗ ಈ ಹಣ್ಣುಗಳನ್ನು ನಮ್ಮ ದೇಶದಲ್ಲೂ ವಿವಿಧ ಕಡೆ ಬೆಳೆದು ಅನೇಕ ರೈತರು ಇದರ ಯಶಸ್ಸನ್ನು ಅನುಭವಿಸಿದ್ದಾರೆ. ಅದರಲ್ಲೂ ಭಟ್ಕಳ ತಾಲೂಕಿನ ಯುವ ರೈತನೊಬ್ಬ ಈ ಬೆಳೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬೆಳೆದು ಮಾದರಿ ಎನಿಸಿಕೊಂಡಿದ್ದಾರೆ ಅನ್ನುವುದು ಹೆಮ್ಮೆಯ ವಿಚಾರ.

ಶಿರಾಲಿಯ ಬಂಡಿಕಾಸುವಿನಲ್ಲಿ ಅನಿಲ್ ನಾಯ್ಕ ಎಂಬ ರೈತ ತಮ್ಮ ಜಮೀನಿಲ್ಲಿ ಬೆಳೆದ ಡ್ರ‍್ಯಾಗನ್ ತೋಟಕ್ಕೆ ಈಗ ಇಳುವರಿಯ ಪರ್ವ ಕಾಲ. ಕಳೆದ ವರ್ಷ ಒಂದು ಎಕರೆ ಪ್ರದೇಶದಲ್ಲಿ ಬೆಳೆದು ಯಶಸ್ವಿಯಾದ ರೈತ ಈ ಬಾರಿ ಮತ್ತೊಂದು ಎಕರೆಗೆ ತೊಟವನ್ನು ವಿಸ್ತರಿಸಿ ಈ ಸಲದ ಫಸಲು ತೆಗೆಯಲು ಎಲ್ಲಾ ತಯಾರಿ ಮಾಡಿಕೊಂಡು ಕುಳಿತಿದ್ದಾನೆ. ಅದಾಗಲೆ ಗಿಡದಲ್ಲಿ ಹೂ ಕಚ್ಚಿ ಆ ಹೂಗಳು ಕಾಯಿಗಳಾಗಿ ಮಾರ್ಪಟ್ಟಿದ್ದು ಇನ್ನೇನು 8- 10 ದಿನಗಳಲ್ಲಿ ಹಣ್ಣಗಳು ಕೊಯ್ಲಿಗೆ ಬರುತ್ತದೆ ಎಂದು ಹರ್ಷವನ್ನು ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಇಂತಹ ಪ್ರಯೋಗಕ್ಕೆ ಒಡ್ಡಿಕೊಳ್ಳುವುದು ಸಾಮಾನ್ಯ ವಿಚಾರವಂತೂ ಅಲ್ಲವೇ ಅಲ್ಲ. ಇಷ್ಟು ರಿಸ್ಕ್ ತಗೊಂಡು ಈ ಬೆಳೆ ಬೆಳೆದ ಯುವ ರೈತನಿಗೆ ಈ ಬಾರಿ ಉತ್ತಮ ಮಾರ್ಕೆಟ್ ದೊರೆತು ಮತ್ತಷ್ಟು ಯುವಕರು ಕೃಷಿಯ ಕಡೆ ಮುಖ ಮಾಡುವಂತಾಗಲಿ ಎನ್ನುವುದು ನಮ್ಮ ವಾಹಿನಿಯ ಹಾರೈಕೆಯಾಗಿದೆ.

ವಿಸ್ಮಯ ನ್ಯೂಸ್, ಭಟ್ಕಳ

Back to top button
Idagunji Mahaganapati Chandavar Hanuman