Big News
Trending

ಯಾವ ತಾಲೂಕಿನ ಎಲ್ಲೆಲ್ಲಿ ಕರೊನಾ ದೃಢ?

  • ಪಂಚಾಯತನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೂ ತಗುಲಿದ ಸೋಂಕು
  • ಕತಗಾಲಿನ ಮಾಸ್ತಿಹಳ್ಳಕ್ಕೂ ಅಂಟಿದ ನಂಜು
  • ಹೆಗಡೆ, ಮೂರುರು, ಕೊನಳ್ಳಿಗೂ ವ್ಯಾಪಿಸಿದ ಸೋಂಕು
  • ಹೊನ್ನಾವರ ಪಟ್ಟಣದಲ್ಲೇ ನಾಲ್ಕು ಪ್ರಕರಣ?

ಕುಮಟಾದಲ್ಲಿ ಗ್ರಾಮೀಣ ಭಾಗಕ್ಕೂ ಎಂಟ್ರಿಕೊಟ್ಟ ಕರೊನಾ

ಕುಮಟಾ ಗಾಂಧಿನಗರದ 23 ವರ್ಷದ ಯುವಕ, ಮಾಸ್ತಿಹಳ್ಳದ 32 ವರ್ಷದ ಪುರುಷ, ಮಾಸೂರಿನ 30 ವರ್ಷದ ಮಹಿಳೆ, ಕಾಗಲ್‌ನ 44 ವರ್ಷದ ಪುರುಷ, ಸುವರ್ಣಗದ್ದೆಯ 27 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಕುಮಟಾ ಪಟ್ಟಣದ ಗುಂದಾದಲ್ಲಿ ಏಳು ಪ್ರಕರಣ ಕಾಣಿಸಿಕೊಂಡಿದೆ. 40 ವರ್ಷದ ಪುರುಷ, 6 ವರ್ಷದ ಬಾಲಕಿ, 5 ವರ್ಷದ ಬಾಲಕಿ, 64 ವರ್ಷದ ವೃದ್ಧೆ, 40 ವರ್ಷದ ಮಹಿಳೆ, 10 ವರ್ಷದ ಬಾಲಕಿ, 9 ವರ್ಷದ ಬಾಲಕ, ಮಿರ್ಜಾನಿನ 24 ವರ್ಷದ ಯುವಕ, ಚಿತ್ರಿಗಿಯ 29 ವರ್ಷದ ಮಹಿಳೆ, ಹೆಗಡೆ ಊರಿನ 49 ವರ್ಷದ ಪುರುಷ, ಮೂರೂರಿನ 26 ವರ್ಷದ ಯುವಕ, ಕೊನಳ್ಳಿಯ 44 ವರ್ಷದ ಪುರುಷ, ಬಂಕಿಕೊಡ್ಲದ 39 ವರ್ಷದ ಪುರುಷ, 1 ವರ್ಷದ ಬಾಲಕ, 29 ವರ್ಷದ ಮಹಿಳೆ, ಹನೆಹಳ್ಳಿಯಲ್ಲಿ 49 ವರ್ಷದ ಪುರುಷ, ನಾಡುಮಾಸ್ಕೇರಿಯಲ್ಲಿ 30 ವರ್ಷದ ಪುರುಷ, ಗೋಕರ್ಣದ 70 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ

ಪಂಚಾಯತನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೂ ತಗುಲಿದ ಸೋಂಕು
ಭಟ್ಕಳ: ತಾಲೂಕಿನಲ್ಲಿ ಇಂದು ಒಂದೇ ದಿನ ಒಟ್ಟು 16 ಮಂದಿಯಲ್ಲಿ ಕರೊನಾ ಪ್ರಕರಣ ಪತ್ತೆಯಾಗಿದ್ದು, ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಜಾಲಿ ಪಟ್ಟಣ ಪಂಚಾಯತ್ ಕಛೇರಿಯನ್ನು ಬಂದ್ ಮಾಡಲಾಗಿದೆ. ತಾಲೂಕಿನ 64,65 ವರ್ಷದ ವೃದ್ಧ. 33,56,40,46,54 ವರ್ಷದ ಪುರುಷ, 53,36,48 ವರ್ಷದ ಮಹಿಳೆ, 21,23,25 ವರ್ಷದ ಯುವತಿ, 27 ವರ್ಷದ ಯುವಕ, 14 ವರ್ಷದ ಬಾಲಕಿ, 11 ವರ್ಷದ ಬಾಲಕನಿಗೆ ಸೋಂಕು ಇರುವುದು ಪತ್ತೆಯಾಗಿದೆ. ಜಾಲಿ ಪಟ್ಟಣ ಪಂಚಾಯತ ಕಛೇರಿ ಸಿಬ್ಬಂದಿ 46 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾದ ಹಿನ್ನೆಯಲ್ಲಿ ಇಂದು ಕಛೇರಿ ಯನ್ನು ಮುಚ್ಚಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಹೊನ್ನಾವರ ಪಟ್ಟಣದಲ್ಲಿ ನಾಲ್ಕು ಪ್ರಕರಣ ದಾಖಲು
ಹೊನ್ನಾವರ: ಹೊನ್ನಾವರ ಪಟ್ಟಣದ ದುರ್ಗಾಕೇರಿಯ 27 ವರ್ಷದ ಇಬ್ಬರು ಯುವಕರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ. ಮತ್ತು ಪಟ್ಟಣದ ಕಮಟೆಹಿತ್ಲದ 34 ವರ್ಷದ ಯುವಕನಲ್ಲಿ , 28 ವರ್ಷದ ಯುವತಿಯಲ್ಲಿ ಹಾಗೂ ಹಳದೀಪುರದ 36 ಯುವಕ, 24 ವರ್ಷದ ಯುವಕ ಸೇರಿದಂತೆ ಒಟ್ಟು ಆರು ಮಂದಿಯಲ್ಲಿ ಕರೊನಾ ದೃಢಪಟ್ಟಿದೆ. ಹೊನ್ನಾವರ ಪಟ್ಟಣದಲ್ಲಿ ನಾಲ್ಕು ಪ್ರಕರಣ ದೃಢಪಟ್ಟಿರುವುದರಿಂದ ತಾಲೂಕಿನ ಜನರಲ್ಲಿ ಆತಂಕ ಕಾಡತೊಡಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ಇಂದಿನ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ,

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button