Important
Trending

ಪಿಎಸ್‌ಐನಿಂದ ದರ್ಪದ ವರ್ತನೆ ಆರೋಪ: ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಆಗ್ರಹ

ಹೊನ್ನಾವರ: ಇಲ್ಲಿನ ಪಿಎಸ್‌ಐ ಸಂತೋಷ ಕುಮಾರ್ ವಿರುದ್ಧ ವಿರುದ್ಧ ಕರ್ಕಿ ಗ್ರಾಮ ಪಂಚಾಯತಿಯ ಸದಸ್ಯರು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಕರ್ಕಿ ಗ್ರಾಮ ಪಂಚಾಯತಿಯ ರಾಮೇಶ್ವರಕಂಬಿ ವಾರ್ಡಿನ ಸದಸ್ಯ ಗಜಾನನ ನಾಯ್ಕ ಮತ್ತು ಅಧ್ಯಕ್ಷರು ಹಾಗೂ ಇತರ ಸದಸ್ಯರು ಈ ಕುರಿತು ದೂರು ನೀಡಿದ್ದಾರೆ.

72ರ ವೃದ್ಧನ ಚಪಲ: ಅಪ್ರಾಪ್ತೆಗೆ ತಿಂಡಿ ನೀಡುವುದಾಗಿ ಹೇಳಿ ತೋಟಕ್ಕೆ ಕರೆದುಕೊಂಡು ಹೋಗಿ ಮಾಡಿದ್ದೇನು?

ರಾಮೇಶ್ವರಕಂಬಿಯ ಶಾರದಾಗುಂಡಿ ಎಂಬಲ್ಲಿ ಅನಾದಿಕಾಲದಿಂದ ಇಡೀ ಊರಿನ ನೀರು ಮಳೆಗಾಲದಲ್ಲಿ ಹರಿದು ಹೋಗುವ ಕಾಲುವೆಯಿದೆ. ಈ ಕಾಲುವೆಯ ಹತ್ತಿರದಲ್ಲಿ ಆಸ್ತಿ ಖರೀದಿಸಿರುವ ವ್ಯಕ್ತಿಯೊಬ್ಬರು ಮಣ್ಣು ತುಂಬಿ ಕಾಲುವೆಯನ್ನು ಮುಚ್ಚಿ ಹಾಕಿರುವುದರಿಂದ ಊರಿಗೆ ನೀರು ತುಂಬಿ ತೊಂದರೆ ಉಂಟಾಗುವುದರಿoದ ಈ ಕೆಲಸವನ್ನು ಇಲ್ಲಿಗೆ ನಿಲ್ಲಿಸುವಂತೆ ಗ್ರಾಮಸ್ಥರ ಪರವಾಗಿ ಸೂಚನೆ ನೀಡಲಾಗಿತ್ತು.

ಆದರೆ ಮಾರನೇ ದಿನ ಹೊನ್ನಾವರ ಠಾಣೆಯಿಂದ ಪಿಎಸ್‌ಐ ಸಂತೋಷ ಕುಮಾರ ನನಗೆ ಠಾಣೆಗೆ ಬರುವಂತೆ ಕರೆದು, ನಂತರ ನಾನು ಠಾಣೆಗೆ ಬಂದಾಗ ಜನಪ್ರತಿನಿಧಿಯಾದ ನನ್ನ ಮೇಲೆ ಅಗೌರವದಿಂದ ನಡೆದುಕೊಂಡಿದ್ದಾರೆ. ನಾನು ವಿಷಯವನ್ನು ಸರಿಯಾಗಿ ವಿವರಿಸಲು ಮುಂದಾದಾಗ ಅವರು ನನ್ನನ್ನು ಉದ್ದೇಶಿಸಿ `ನೀನೇನು ಊರಿನ ದೊಣ್ಣೆ ನಾಯಕನೋ ನಿನ್ನನ್ನು ನೋಡಿಕೊಳ್ಳುತ್ತೇನೆ. ನಿನ್ನ ಮೇಲೆ ರೌಡಿ ಶೀಟ್ ಹಾಕುತ್ತೇನೆ. ನೀನು ಈ ವಿಚಾರದಲ್ಲಿ ತಲೆ ಹಾಕಿದರೆ ನಿನ್ನ ಮೇಲೆ ಕಠಿಣ ಸುಳ್ಳು ಪ್ರಕರಣ ದಾಖಲಿಸಿ ನಿನ್ನನ್ನು ಜೈಲಿಗಟ್ಟುತ್ತೇನೆ’ ಎಂಬುದಾಗಿ ಧಮಕಿ ಹಾಕಿರುತ್ತಾರೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ನೌಕರನಾದ ಈತನು, ತನ್ನ ಅಧಿಕಾರದ ದರ್ಪದಿಂದ ಜನಪ್ರತಿನಿಧಿಯಾದ ನನ್ನ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಕೂಡಲೇ ತನಿಖೆ ನಡೆಸಿ ಆತನ ಮೇಲೆ ಪ್ರಕರಣ ದಾಖಲಿಸಿ, ಇಲಾಖಾ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮೇಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನೀಡಿದ ದೂರಿನಲ್ಲಿ ಗ್ರಾ.ಪಂ. ಸದಸ್ಯರಾದ ಗಜಾನನ ನಾಯ್ಕ, ಶ್ರೀಕಾಂತ ಮೊಗೇರ, ನಾಗರಾಜ ನಾಯ್ಕ, ನಾಗರಾಜ ಗೌಡ, ಹರೀಶ ನಾಯ್ಕ, ಸಾಧನಾ ಶಂಕರ ನಾಯ್ಕ ಇತರರರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button