Follow Us On

Google News
Important
Trending

72ರ ವೃದ್ಧನ ಚಪಲ: ಅಪ್ರಾಪ್ತೆಗೆ ತಿಂಡಿ ನೀಡುವುದಾಗಿ ಹೇಳಿ ತೋಟಕ್ಕೆ ಕರೆದುಕೊಂಡು ಹೋಗಿ ಮಾಡಿದ್ದೇನು?

ಅಂಕೋಲಾ: 72 ವರ್ಷದ ವೃದ್ಧನೊಬ್ಬ ಅಪ್ರಾಪ್ತ ಬಾಲಕಿಯೋರ್ವಳಿಗೆ ತಿಂಡಿ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿ, ಬಳಿಕ ತೋಟಕ್ಕೆ ಕರೆದೊಯ್ದು ವ್ಯಕ್ತಿಯೋರ್ವ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬoಧಿಸಿದoತೆ, ನೊಂದ ಕುಟುಂಬದ ದೂರಿನನ್ವಯ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಗ್ಗಾರದ ಆರೋಪಿತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಪ್ರತಿಷ್ಠಿತ ಜ್ಯುವೆಲರ್ಸ್ ಮಾಲೀಕನ ಮಗ ಆತ್ಮಹತ್ಯೆಗೆ ಶರಣು

ಹೆಗ್ಗಾರದ ನಿವಾಸಿ ಕೃಷ್ಣ ಶಿವರಾಮ ಭಟ್ಟ (72) ಬಂಧಿತ ಆರೋಪಿಯಾಗಿದ್ದಾನೆ, ತನ್ನ ಮನೆಯ ಪಕ್ಕದ ವ್ಯಕ್ತಿಯೋರ್ವರ ಮನೆಗೆಲಸಕ್ಕೆಂದು ಬೇರೆಡೆಯಿಂದ ಬಂದು ಉಳಿದುಕೊಂಡಿದ್ದ ಬಡ ಕೃಷಿ ಕೂಲಿ ಕುಟುಂಬದ ಜೊತೆ ಪರಿಚಿತನಾಗಿದ್ದ ಆರೋಪಿತ , ಆ ಮನೆಯ ಮಕ್ಕಳಿಗೆ ತಿಂಡಿ ನೀಡುವುದಾಗಿ ಆಶೆ ತೋರಿಸಿ ತನ್ನ ಮನೆಗೆ ಕರೆದು ಕೊಂಡು ಹೋಗಿ, ನಂತರ ತೋಟಕ್ಕೆ ಕರೆದುಕೊಂಡು ಹೋಗಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ.

ಆರೋಪಿತನಿಂದ ಮುಂದೆಯೂ ತಮ್ಮ ಕುಟುಂಬಕ್ಕೆ ತೊಂದರೆಯಾಗಬಹುದು ಎಂದು ಅಂಜಿದ, ಮನೆಯವರು ಕೊನೆಗೂ ಧೈರ್ಯ ತಂದುಕೊoಡು, ಸಂತ್ರಸ್ಥ ಬಾಲಕಿಯ ತಂದೆ ತಾಯಿ ತಮ್ಮಲ್ಲಿಯೇ ಚರ್ಚಿಸಿ, ದೂರು ನೀಡಲು ವಿಳಂಬವಾದ ಬಗ್ಗೆ ಕಾರಣವನ್ನು ತಿಳಿಸಿದ್ದಾರೆ. ಆರೋಪಿತನು ಬಾಲಕಿಯನ್ನು ತಬ್ಬಿ , ಅಸಭ್ಯವಾಗಿ ವರ್ತಿಸಿರುವ ಬಗ್ಗೆ, ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ದಾಖಲಿಸಲಾಗಿದೆ.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪೋ-ಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ಮೊಮ್ಮಗಳ ವಯಸ್ಸಿನ ಪುಟ್ಟ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿತನ ಕುರಿತು ಕೆಲ ಸ್ಥಳೀಯರಿಂದಲೂ ಆಕ್ರೋಶದ ಮಾತುಗಳು ಕೇಳಿ ಬರುತ್ತಿದೆ. ಆತ ಎಷ್ಟೇ ಪ್ರಭಾವಿಯಾಗಿದ್ದರೂ ಕ್ಯಾರೇ ಎನ್ನದೇ ತಕ್ಷಣ ಕಾನೂನು ಕ್ರಮ ಕೈಗೊಂಡ ಪೋಲಿಸ್ ಇಲಾಖೆಯ ಬಗ್ಗೆ ಸ್ಥಳೀಯ ಕೆಲವರು, ಹಾಗೂ ತಾಲೂಕಿನ ಪ್ರಜ್ಞಾವಂತ ಜನತೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button