Follow Us On

WhatsApp Group
Important
Trending

ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿದ್ದ ಬೈಕ್ ಸವಾರ :ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಅಂಕೋಲಾ; ಇತ್ತೀಚೆಗೆ ಪಟ್ಟಣದ ಅಜ್ಜಿಕಟ್ಟಾ ರಸ್ತೆಯಲ್ಲಿ ನಡೆದಿದ್ದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಕಾರವಾರ ಕ್ರಿಮ್ಸ್ ನಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಗ್ಯಾರೇಜಿನ ಯುವಕನೋರ್ವ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿದ್ದಾನೆ. ಪಟ್ಟಣದ ಹೊನ್ನಿಕೇರಿ ನಿವಾಸಿ ನವೀನ ಆನಂದ ನಾಯ್ಕ (33) ಮೃತ ದುರ್ದೈವಿ.

ಪಿಎಸ್‌ಐನಿಂದ ದರ್ಪದ ವರ್ತನೆ ಆರೋಪ: ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಆಗ್ರಹ

ವೆಂಕಟರಮಣ ದೇವಸ್ಥಾನದ ರಥಬೀದಿಯ ಪ್ರವೇಶ ಕಮಾನ ಬಳಿ ಗ್ಯಾರೇಜ್ ಒಂದನ್ನು ನಡೆಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಈತ ಮೇ 8 ರಂದು ರಾತ್ರಿ 11.35 ರ ಸುಮಾರಿಗೆ ಬೈಕ್ ಮೇಲೆ ಕಾರವಾರ ಕಡೆಯಿಂದ ಅಂಕೋಲಾ ಪಟ್ಟಣದ ಕಡೆ ಬರುತ್ತಿದ್ದಾಗ ಅಜ್ಜಿಕಟ್ಟಾ ಕ್ರಿಸ್ತ ಮಿತ್ರ ಆಶ್ರಮದ ಎದುರು ಅಚಾನಕ್ ಆಗಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ, ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಬೇಳಾ ಬಂದರಿನ ನಿವಾಸಿ ಕರಣ ದೇವಿದಾಸ ನಾಯ್ಕ ಎನ್ನುವವರು ಸಹ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಗಾಯಗೊಂಡ ಬೈಕ್ ಸವಾರ ನವೀನ ನಾಯ್ಕನಿಗೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅಲ್ಲಿಂದ ಕಾರವಾರ ಕ್ರಿಮ್ಸ್ ಗೆ ಸಾಗಿಸಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕಳೆ ದಿನಗಳಿಂದ ಮಂಗಳೂರಿನಲ್ಲಿ ಚಿಕಿತ್ಸೆಗೊಳಪಟ್ಟಿದ್ದ ಗಾಯಾಳು ನವೀನ ನಾಯ್ಕ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೇ 16 ರಂದು ಮೃತ ಪಟ್ಟಿದ್ದಾನೆ. ಅಂಕೋಲಾ ಪಿ.ಎಸ್. ಐ ಸುಹಾಸ. ಆರ್ ಅವರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.

ಮನೆಗೆ ಆಸರೆಯಾಗಬೇಕಾಗಿದ್ದ ಮನೆ ಮಗ ಅಕೀಲಿಕವಾಗಿ ಮೃತಪಟ್ಟಿದ್ದು ಮೃತನ ಕುಟುಂಬದಲ್ಲಿ, ಊರಲ್ಲಿ ಮತ್ತು ಗೆಳೆಯರ ಬಳಗದಲ್ಲಿ ಶೋಕದ ವಾತಾವರಣ ಮೂಡಿಸಿದೆ. ವಿವಿಧ ಸಂಘಟನೆಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಈತನ ಅಕಾಲಿಕ ನಿಧಾನಕ್ಕೆ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button