ದಾಂಡೇಲಿ: ಆ ಬಾಲಕ ನದಿ ದಂಡೆಯ ಮೇಲೆ ಮೀನಿ ಹಿಡಿಯಲು ಗಾಳಹಾಕಿ ಕುಳಿತಿದ್ದ. ಮೀನನನ್ನು ಹಿಡಿಯಲು ಕಾಯುತ್ತಿದ್ದ. ಆದರೆ, ವಿಧಿಯಾಟ ಆಗಿದ್ದೆ ಬೇರೆ. ಹೌದು, ಮೀನು ಹಿಡಿಯಲು ಹೋದ ಬಾಲಕ ಮೊಸಳೆ ಬಾಯಿಗೆ ಸಿಲುಕಿದ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿ ದಡದಲ್ಲಿ ಈ ಘಟನೆ ನಡೆದಿದೆ. ಮೋಹಿನ್ ಮೆಹಬೂಬ್ (15) ಮೊಸಳೆ ಪಾಲಾದ ಬಾಲಕ ಎಂದು ತಿಳಿದುಬಂದಿದೆ. ಈತ ಮೀನು ಹಿಡಿಯಲು ದಾಂಡೇಲಿ-ಹಳಿಯಾಳ ರಸ್ತೆಯ ಕಾಳಿ ನದಿ ದಡದಲ್ಲಿ ಕುಳಿತಿದ್ದ.
ಈ ವೇಳೆ ಮೊಸಳೆ ದಾಳಿಮಾಡಿದೆ ಎನ್ನಲಾಗಿದ್ದು, ಈತನನ್ನು ಹೊತ್ತೊಯ್ದಿದೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು,ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು, ಶೋಧಕಾರ್ಯ ನಡೆಸಿದರೂ ಇನ್ನೂ ಬಾಲಕನ ಪತ್ತೆಯಾಗಿಲ್ಲ. ಸ್ಥಳೀಯರು ತೆಪ್ಪದ ಸಹಾಯದಿಂದ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈತ ನದಿ ದಂಡೆಯಲ್ಲಿ ನಿತ್ಯವೂ ಸಹೋದರನ ಜೊತೆ ಮೀನು ಹಿಡಿಯಲು ಬರುತ್ತಿದ್ದ ಎನ್ನಲಾಗಿದೆ. ಈ ಘಟನೆ ನಡೆದ ವೇಳೆ ಸಹೋದರ ದೂರ ಇದ್ದ. ಬಾಲಕ ನಿಂತು ಗಾಳ ಹಾಕುತ್ತಿದ್ದ ಸಮಯದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ, ಬಾಲಕನನನ್ನು ಹೊತ್ತೊಯ್ದಿದೆ.
ಈ ಬಾಲಕನ ಕುಟುಂಬ ತೀರಾ ಬಡಕುಟುಂಬವಾಗಿದ್ದು, ತಂದೆ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಈ ದುರ್ಘಟನೆಯಿಂದಾಗಿ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ,ಹಲವರು ಮನೆಗೆ ಭೇಟಿ ನೀಡಿ, ಸಾಂತ್ವನದ ಮಾತುಗಳನ್ನಾಡಿ, ಕುಟುಂಬಕ್ಕೆ ಧೈರ್ಯ ತುಂಬವ ಪ್ರಯತ್ನ ಮಾಡುತ್ತಿದ್ದಾರೆ.
ಸೂಪಾ ಜಲಾಶಯದಿಂದ ಹೊರ ಹರಿವು ಹೆಚ್ಚಿದ್ದ ಕಾರಣ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು.ಘಟನೆ ನಡೆದ ತಕ್ಷಣ ಇದೀಗ ಕಾರ್ಯಾಚರಣೆಗೆ ಅನುಕೂಲವಾಗುವ ಹಿನ್ನಲೆಯಲ್ಲಿ ಜಲಾಶಯದಿಂದ ನೀರಿನ ಹರಿವನ್ನು ನಿಲ್ಲಿಸಲಾಗಿದೆ. ಇದರಿಂದ ಶೋಧ ಕಾರ್ಯಕ್ಕೆ ಅನುಕೂಲವಾಗಿದೆ.
ಘಟನೆಯ ಹಿನ್ನಲೆಯಲ್ಲಿ ಕಾಳಿ ನದಿ ಸಮೀಪ ನೂರಾರು ಜನರು ನೆರೆದಿದ್ದರು. ಅಲ್ಲದೆ, ಇತ್ತಿಚೆಗೆ ಕಾಳಿ ನದಿಯಲ್ಲಿ ಮೊಸಳೆಗಳ ಸಂತತಿ ಮೀತಿ ಮೀರಿದೆ ಎನ್ನಲಾಗಿದ್ದು, ಇದರಿಂದಾಗಿ ಭಾರೀ ಸಮಸ್ಯೆ ಎದುರಾಗುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ವಿಸ್ಮಯ ನ್ಯೂಸ್, ಕಾರವಾರ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537