Follow Us On

WhatsApp Group
Important
Trending

ಅರಣ್ಯಪ್ರದೇಶದಲ್ಲಿ ಸಿಕ್ಕಿದ ಬಾಂಬ್ ನಲ್ಲಿ ಏನಿತ್ತು? ಬಾಂಬ್ ಸುದ್ದಿಯ ಅಸಲಿಯತ್ತು ನೋಡಿ?


ಕುಮಟಾ: ಪಟ್ಟಣ ಸಮೀಪದ ಅರಣ್ಯ ಪ್ರದೇಶದಲ್ಲಿ ಸ್ಪೋಟಕದಂತಿರುವ ವಸ್ತು ಪತ್ತೆಯಾದ ಸುದ್ದಿ ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿತ್ತು. ಆದರೆ ಇದೀಗ, ಆತಂಕ ದೂರವಾಗಿದೆ. ಉತ್ತರಕನ್ನಡದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಂಗಳೂರಿನಿAದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ಆಗಮಿಸಿದ್ದರು.

ಬಾಂಬ್ ಮಾದರಿ ವಸ್ತುವಿನಲ್ಲಿ ಪೈಪ್ ಗಳು ಪೇಪರ್ ತುಂಡುಗಳು ,ವಯರ್ ಗಳನ್ನು ಸುತ್ತಿ ಅದಕ್ಕೆ ಷಲ್ ಗಳನ್ನು ಕನೆಕ್ಟ್ ಮಾಡಲಾಗಿತ್ತು. ಅದರ ಜೊತೆಗೆ ಸರ್ಕಿಟ್ ಬೋರ್ಡ ಅನ್ನು ಹಾಕಿ ಬಾಂಬ್ ಮಾದರಿ ತಯಾರು ಮಾಡಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಮಂಗಳೂರಿನಿAದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ಈ ಡಮ್ಮಿ ಬಾಂಬ್ ಅನ್ನು ನಿಷ್ಕಿçಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜ್ ಸಮೀಪದ ಹಿಂಭಾಗದ ಅರಣ್ಯಪ್ರದೇಶದಲ್ಲಿ ಬಾಂಬ್ ರೀತಿಯ ವಸ್ತು ನಿನ್ನೆ ರಾತ್ರಿ ಪತ್ತೆಯಾಗಿದ್ದು, ಸ್ಥಳಕ್ಕೆ ಪೋಲೀಸರು ಆಗಮಿಸಿದ್ದು, ಶೋಧ ಕಾರ್ಯ ನಡೆಸಿದ್ದರು. ವಾಯು ವಿಹಾರಕ್ಕೆ ಆಗಮಿಸಿದ ಕೆಲ ವ್ಯಕ್ತಿಗಳು ಬಾಂಬ್ ರೂಪದಲ್ಲಿರುವ ವಸ್ತುವನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಸ್ಮಯ ನ್ಯೂಸ್ ಕುಮಟಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button