Important
Trending

ತಲ್ವಾರ್ ಹಿಡಿದು ಆರ್ಭಟ: ಮನೆಗೆ ಬಂದು ಬೆದರಿಕೆ; ದಾಖಲಾಯ್ತು ಪೊಲೀಸ್ ಠಾಣೆಯಲ್ಲಿ ದೂರು

ಹೊನ್ನಾವರ : ತಾಲೂಕಿನ ಮಾವಿನಕುರ್ವಾ ಕ್ರಿಮಿನಲ್ ಚಟುವಟಿಕೆಯಿಂದ ಮತ್ತೆ ಸುದ್ದಿಯಾಗಿದೆ.  ಕೆಲವು ತಿಂಗಳಿಂದ  ತಿಳಿಯಾದ ವಾತಾವರಣ ವಾಗಿತ್ತು ಆದರೆ ಇಗ  ಮತ್ತೆ  ಹಳೆ ಚಾಳಿ ಸುರು ಹಚ್ಚಿಕೊಂಡಿದ್ದಾರೆ. ಇತ್ತೀಚಿಗೆ ಹೊಡೆದಾಟದ ಪ್ರಕರಣ ಮತ್ತೆ ಪೊಲೀಸ್ ಠಾಣೆಯ ತನಕ ಬಂದು ತಲುಪಿದೆ. ಗುರುವಾರ ತಾಲೂಕೆ ಬೆಚ್ಚಿ ಬೀಳುವಂತೆ ತಲ್ವಾರ್ ಹಿಡಿದು ನವೀನ ರೋಡ್ರಗೀಸ್ಮನೆಯ ಹತ್ತಿರ ಗುಂಪು ಕಟ್ಟಿ ಓಡಾಡುತಿರುವ  ವಿಡಿಯೋ ಜಾಲತಾಣದಲ್ಲಿ ಓಡಾಡುತ್ತಿದೆ. ಮಚ್ಚು ಹಿಡಿದು ಕೊಲೆ ಮಾಡಲು ಬಂದಿದ್ದರು ಎಂದು ನವೀನ ರೋಡ್ರಗೀಸ್ ಪೊಲೀಸ್ ದೂರು ನೀಡಿದ್ದಾರೆ.

ಮೋಹನ ನಾರಾಯಣ ಗೌಡ ಕೇರಿಮನೆ, ಅಂಕುಶ ನಾರಾಯಣ ಗೌಡ ಮಾವಿನಕುರ್ವಾ ಇವರು ಫಿರ್ಯಾದಿ ನವೀನ ನಡುವೆ ಮೂರುವರ್ಷಗಳ ಹಿಂದೆ ಹೊಡೆ ಬಡೆ ಮಾಡಿ ಎಳೆದು ಕೊಂಡು ಹೋಗಿದ್ದರ ಬಗ್ಗೆ ನವೀನ ಹೊನ್ನಾವರ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅಂದಿನಿಂದ ನವೀನ ಮೇಲೆ ಇವರು ಸಣ್ಣ ಸಣ್ಣ ವಿಷಯಕ್ಕೆ ಜಗಳ ತೆಗೆಯುತ್ತಾ ತೊಂದರೆ ನೀಡುತ್ತಾ ಬಂದಿದ್ದಾರೆ. ನವೀನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇನ್ನೊಂದು ಬಣಕ್ಕೆ ಸಪೋರ್ಟ ಮಾಡಿರುತ್ತಾನೆ ಅಂತ ನವೀನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗುರುವಾರ ಬೆಳಗ್ಗೆ 09-30 ಗಂಟೆ ಸಮಯಕ್ಕೆ ನವೀನ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ತಮ್ಮ ನಾಯಿಗೆ ಬರ್ಹಿದೆಗೆ ಕರೆದು ಕೊಂಡು ಹೋಗಿದ್ದಾಗ, ಆವೇಳೆಗೆ ಮೋಹನ ನಾರಾಯಣ ಗೌಡ ಮೋಟಾರ ಸೈಕಲ ಮೇಲೆ ಹೊಸಾಡ ಕಡೆಯಿಂದ ಮಾವಿನಕುರ್ವಾ ಕಡೆಗೆ ಹೊರಟದ್ದವನು ನವೀನನನ್ನು ನೋಡಿ ಎಂಜಲು ಉಗಿದಾಗ, ನವೀನ ಅವನ ಕಡೆ ನೋಡಿದಾಗ ಅವನು ತನ್ನ ಮೋಟಾರ ಸೈಕಲ್‌ನ್ನು ತಿರುಗಿಸಿ ಕೊಂಡು ಬಂದು ಫಿರ್ಯಾದಿ ಸುತ್ತಲೂ ರೌಡ್ ಹೊಡೆಸಿ ನಿನಗೆ ಮುಂದೆ ಇದೆ ಮಾರಿಹಬ್ಬ ನಮ್ಮ ಹಳೆಯ ರೌಡಿಸಂನ್ನು ಮತ್ತೆ ತೋರಿಸುತ್ತೇವೆ.

ನಿನಗೆ ಸುಮ್ಮನೆ ಬಿಡುವದಿಲ್ಲ ಬರುತ್ತೇವೆ ಅಂತ ಹೇಳಿ ಬೆದರಿಸಿ ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಿದ್ದು., ನವೀನ ತನ್ನ ತಾಯಿ ಮತ್ತು ತನ್ನ ಮಗನಾದ ಜಾಕ್ಸನ್ ರೊಂದಿಗೆ ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿ ಇದ್ದಾಗ ಮೋಹನ ನಾರಾಯಣ ಗೌಡ ಕೇರಿಮನೆ, ಮಾವಿನಕುರ್ವಾ, ಅವನ ಅಣ್ಣ ಅಂಕುಶ ನಾರಾಯಣ ಗೌಡ ಕೇರಿಮನೆ ಮಾವಿನಕುರ್ವಾ, ಮಾರುತಿ ಗಣಪಯ್ಯ ಗೌಡ,ಕೇರಿಮನೆ ಮಾವಿನಕುರ್ವಾ, ಪವನ ರಾಮ ಗೌಡ ಗದ್ದೇಮನೆ ಮಾವಿನಕುರ್ವಾ, ರಾಜೇಶ್ ರಾಮಾ ಗೌಡ ಬೇಲೆಕೇರಿ ಮಾವಿನಕುರ್ವ, ಗೋಪಾಲ ಲಕ್ಷಣ ಗೌಡ ಗದ್ದೆಮನೆ ಮಾವಿನಕುರ್ವಾ, ಹಾಗೂ ಇತರ ಕೆಲವರು ಗುಂಪು ಕಟ್ಟ ಕೊಂಡು ನವೀನ ಮನೆಯ ಅಂಗಳಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದರು.

ನವೀನ ಎಲ್ಲಿದ್ದಿಯಾ ನಿನಗೆ ಇವತ್ತು ಬಿಡುವದಿಲ್ಲ. ಅಂತ ಕೂಗುತ್ತಾ ಬಂದವರು, ಮೋಹನ ನಾರಾಯಣ ಗೌಡ, ಅಂಕುಶ ನಾರಾಯಣ ಗೌಡ ಮಾರುತಿ ಗಣಪಯ್ಯ ಗೌಡ ಇವರು ತಮ್ಮ ಕೈಯಲ್ಲಿ ಮಾರಕ ಆಯುಧವಾದ ಸುಮಾರು ಎರಡೂವರೆ ಅಡಿ ಉದ್ದದ ತಲವಾರನ್ನು ಹಿಡಿದು ಕೊಂಡು ಬಂದವರು ನವೀನ ಮನೆಯಿಂದ ಹೊರಗೆ ಬಂದು ಯಾಕೆ ಅಂಗಳಕ್ಕೆ ನುಗ್ಗುತ್ತಿದ್ದಿರಿ ಅಂತ ಕೇಳದಾಗ, ಮೋಹನ ಗೌಡ ಹಾಗೂ ಅಂಕುಶ ಗೌಡ ಮತ್ತು ಮಾರತಿ ಗೌಡ ಇವರು ಇವತ್ತು ನಿನಗೆ ಕೊಲೆ ಮಾಡದೆ ಬಿಡುವದಿಲ್ಲ.

ಸಾಯಿಸಿ ಹಾಕುತ್ತೇವೆ ಅಂತ ತಮ್ಮ ಕೈಯ್ಯಲ್ಲಿದ್ದ ತಲವಾರನ್ನು ಕೊಲೆ ಮಾಡುವ ಉದ್ದೇಶದಿಂದ ನವೀನ ಕಡೆ ಬೀಸಿ ಹೊಡೆದು ನವೀನ ತಪ್ಪಿಸಿ ಕೊಂಡು ಮನೆಯೊಗಳ ಕೂಗುತ್ತಾ ಓಡಿದಾಗ ಅವರು ನವೀನ ಹಿಂದೆ ಬರ ತೊಡಗಿದಾಗ ನವೀನ ತಾಯಿ ಮುಲ್ಲಾ ಅವರು ನನ್ನ ಮಗನಿಗೆ ಸಾಯಿಸ ಬೇಡಿ ಕೈಮುಗಿಯುತ್ತೇನೆ ಅಂತ ಕೂಗುತ್ತಾ ಅವರಿಗೆ ಅಡ್ಡವಾಗಿ ನಿಂತಾಗ ಆರೋಪಿತರಾದ ಮೋಹನ ಗೌಡ, ಅಂಕುಶ ಗೌಡ, ಮಾರುತಿ ಗೌಡ, ಪವನ ಗೌಡ, ರಾಜೇಶ ಗೌಡ, ಗೋಪಾಲ ಗೌಡ ಇವರು ನವೀನ ತಾಯಿಯವರನ್ನು ಕೈಡಿದು ಎಳೆದಾಡಿ ದೂಡಿ ಅವರಿಗೆ ಮಾನಕ್ಕೆ ಕುಂದುಂಟು ಮಾಡಿದ್ದಾರೆ.

ಊರವರಾದ ಮಾರುತಿ ಮಾದೇವ ಗೌಡ ಹಾಗೂ ಅರುಣ, ಮಂಜುನಾಥ ಗೌಡ ಹಾಗೂ ಇತರ ಜನರು ಬಂದಿದ್ದನ್ನು ನೋಡಿ ಆರೋಪಿತರು ಫಿರ್ಯಾದಿಗೆ ನಿನಗೆ ಇಷ್ಟಕ್ಕೆ ಬಿಡುವದಿಲ್ಲ ನಿನ್ನನ್ನು ಕೊಂದು ಬಿಸಾಡುತ್ತೇವೆ ಅಂತ ಜೀವ ಭೇದರಿಕೆ ಹಾಕಿ ಹೋದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button