ಅಂಕೋಲಾ :ಕೊರೊನಾ ವಿರುದ್ದದ ಹೋರಾಟದಲ್ಲಿ ಕೊರೊನಾ ವಾರಿಯರ್ಸ್ ಎಂದೇ ಗುರುತಿಸಿಕೊಂಡ ಅಂಕೋಲಾ ತಾಲೂಕಿನ ಎಲ್ಲಾ ಆಶಾ-ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಳಮಟ್ಟದಲ್ಲಿ ಜಿಲ್ಲಾಡಳಿತದ ಆಶಯಕ್ಕನುಗುಣವಾಗಿ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ವಿಶೇಷ ಅಭಿನಂದನೆ ಸಲ್ಲಿಸಿದರು.
ಪಟ್ಟಣದ ಸ್ವಾತಂತ್ರ್ಯ ಭವನದಲ್ಲಿ ಹಮ್ಮಿಕೊಂಡ ಕೊರೊನಾ ವಾರಿಯರ್ಸ್ಗಳಿಗೆ ಅಭಿನಂದನೆ ಕಾರ್ಯಕ್ರಮ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ಕುರಿತು ಸಮಾ ಲೋಚನ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೇರಳದಲ್ಲಿ ಪ್ರಥಮ ಸಕ್ರೀಯ ಪ್ರಕರಣ ದಾಖಲಾದ 15 ದಿನಗಳೊಳಗೆ ನಮ್ಮ ಜಿಲ್ಲೆಯಲ್ಲಿಯೂ ಸಾಕಷ್ಟು ಪೂರ್ವ ಸಿದ್ದತೆ ಮತ್ತು ಮುಂಜಾಗೃತೆ ಕೈಗೊಳ್ಳ ಲಾಯಿತು. ಅಂದಿನಿಂದ ಇಂದಿನವರೆಗೆ ಇತರೇ ಜಿಲ್ಲೆಗಳಿಗೆ ಹೊಲಿಸಿದರೆ ನಮ್ಮ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ನಿಯಂತ್ರಣದಲ್ಲಿದ್ದು, ಆಸ್ಪತ್ರೆಗೆ ದಾಖಲಾದ ಎಲ್ಲಾ ಸೋಂಕಿತ ವ್ಯಕ್ತಿಗಳು ಗುಣಮುಖರಾಗಿ ಅವರ ಅವರ ಮನೆಗೆ ತೆರಳಿರುವುದು ವೈದ್ಯರ ಮತ್ತು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದರು.
ಕುಮಟಾ ಉಪವಿಭಾಗಾಧಿಕಾರಿ ಎ.ಅಜೀತ ಸಹಿತ ಎಲ್ಲಾ ಅಧಿಕಾರಿಗಳ ಶ್ರಮ ಹಾಗೂ ಸೇವೆಯನ್ನು ಕೊಂಡಾಡಿದ ಜಿಲ್ಲಾಧಿಕಾರಿಗಳು ಅಂಕೋಲಾದ ಕುರಿತು ಮೆಚ್ಚುಗೆಯ ಮಾತುಗಳನಾಡುತ್ತಾ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ನೆಲದಲ್ಲಿ ಕೊರೊನಾ ವಿರುದ್ಧವೂ ಉತ್ತಮ ಹೊರಾಟ ಕಂಡುಬಂದಿದ್ದು, ಮನೆ ಮನೆಗೆ ಸಮೀಕ್ಷೆಗೆ ತೆರಳುವ ಕಾರ್ಯಕರ್ತೆಯರು ಮುಂಬರುವ ಮಳೆಗಾಲದಲ್ಲಿ ಇನ್ನಷ್ಟು ಜಾಗೃತ ರಾಗಿ ಸಮೀಕ್ಷೆ ಮಾಡುವಂತೆ ಕರೆ ನೀಡಿದರು.
ಸುಧೀರ್ಘ ಒಂದು ತಾಸಿಗೂ ಹೆಚ್ಚಿನ ಕಾಲ ಕೊರೊನಾ ಮತ್ತು ಜಾಗೃತಿ ಕುರಿತು ಜಿಲ್ಲಾಧಿಕಾರಿ ಹತ್ತಾರು ನಿಖರ ಅಂಕಿ-ಅಂಶಗಳು, ಹೋಲಿಕೆ, ಜವಬ್ದಾರಿ ಮತ್ತಿತರ ವಿಷಯಗಳ ಕುರಿತು ಸಮಾಲೋಚಿಸಿ ಮನ ಮಟ್ಟುವಂತೆ ಮಾತನಾಡಿ ತಮ್ಮ ಅಪಾರ ಅನುಭವ ಮತ್ತು ಜ್ಞಾನದ ಮೂಲಕ ಕೊರೊನಾ ವಿರುದ್ಧದ ಹೋರಾಟದ ನೇತೃತ್ವ ವಹಿಸಿ ಯಶ ಸಾಧಿಸುತ್ತಿದ್ದರೂ, ಜಿಲ್ಲೆಯ ಸಾಧನೆಯ ಹಿಂದೆ ತಳಮಟ್ಟದ ಸಮಿಕ್ಷೆ ಕಾರ್ಯ ಕೈಗೊಂಡ ಸಿಬ್ಬಂದಿಗಳು, ವಿವಿಧ ಹಂತಗಳಲ್ಲಿ ಶ್ರಮವಹಿಸುತ್ತಿರುವ ಎಲ್ಲಾ ಇಲಾಖೆ ಜನಪ್ರತಿ ನಿಧಿಗಳು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಮನದುಂಬಿ ಅಭಿನಂದಿಸಿದರು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಪೇಸ್‌ಬುಕ್ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ
ಸಭೆಯಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಅರ್ಚನಾ ನಾಯಕ, ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಲ್ಹಾದ್, ಸಿಡಿಪಿಓ ಅರುಣ ನಾಯ್ಕ, ಉಪತಹಶೀಲ್ದಾರ ಸುರೇಶ ಹರಿಕಂತ್ರ, ಶಿರಸ್ತೆದಾರರಾದ ಎನ್. ಬಿ. ಗುನಗಾ, ಅಮರ ನಾಯ್ಕ, ಕಂದಾಯ ನೀರಿಕ್ಷಕರಾದ ರಾಘವೇಂದ್ರ ಜನ್ನು, ಲಲಿತಾ ಆಗೇರ ಸೇರಿದಂತೆ ಆಶಾ-ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು, ವಿವಿಧ ಇಲಾಖೆಯ ಮುಖ್ಯಸ್ಥರು, ಸಿಬ್ಬಂದಿ ಗಳು ಹಾಜರಿದ್ದರು. ತಹಶೀಲ್ದಾರ ಉದಯ ಕುಂಬಾರ ಸ್ವಾಗತಿಸಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿ ಕಾರಿ ಪಿ.ವೈ. ಸಾವಂತ ವಂದಿಸಿದರು.
-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲ