ಜಿಲ್ಲೆಯ ತುಳಸಿ ಗೌಡ ಅವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದು ಪ್ರಶಸ್ತಿ ಸ್ವೀಕಾರಕ್ಕೆ ದೆಹಲಿಗೆ ತೆರಳುವ ವೇಳೆ ಹೊನ್ನಾವರ ಪಟ್ಟಣದ ಗೇರುಸೊಪ್ಪಾ ಸರ್ಕಲ್ ಬಳಿ ತಾಲೂಕ ಒಕ್ಕಲಿಗ ಸಂಘದವರು ಸನ್ಮಾನಿಸಿ ಬಿಳ್ಕೋಟ್ಟರು. ಇತ್ತೀಚಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಘೊಷಣೆ ಮಾಡಿತ್ತು. ಅದನ್ನು ಸ್ವೀಕರಿಸಲು ದೆಹಲಿ ತೆರಳುತ್ತಿರುವಾಗ ಹೊನ್ನಾವರ ಮಾರ್ಗದಲ್ಲಿ ಸಾಗುವಾಗ ಒಕ್ಕಲಿಗ ಸಂಘದಿಂದ ಸನ್ಮಾನಿಸಿ ಗೌರವಿಸಿದರು.
ಕುಮಟಾದಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿ, ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ವೇಳೆ ಕುಮಟಾ ಶಾಖಾಮಠದ ಶ್ರೀ ನಿಶ್ಚಲನಂದ ಸ್ವಾಮಿಜಿ, ತಾಲೂಕ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಮಹಬಲ ಗೌಡ, ಕಾರ್ಯದರ್ಶಿ ಬಾಲಚಂದ್ರ ಗೌಡ, ಮಾಜಿ.ಜಿಲ್ಲಾ ಪಂಚಾಯತಿ ಸದಸ್ಯ ಕೃಷ್ಣ ಗೌಡ, ತಾಲೂಕ ಪಂಚಾಯತಿ.ಸದಸ್ಯ ಗಣಪಯ್ಯ ಗೌಡ, ಪಟ್ಟಣಪಂಚಾಯತಿ. ಸದಸ್ಯ ಸುಬ್ರಾಯ ಗೌಡ, ಸಿಪಿಐ ಶ್ರೀಧರ ಕೆಳಗಿನೂರು ಗ್ರಾಮಪಂಚಾಯತಿ.ಅಧ್ಯಕ್ಷ ಗಂಗಾಧರ ಗೌಡ, ಕಡ್ಲೆ ಗ್ರಾಮ.ಪಂಚಾಯತಿ ಅಧ್ಯಕ್ಷ ಗೋವಿಂದ ಗೌಡ, ಟಿ.ಜೆ ಗೌಡ, ಅಣ್ಣಪ್ಪ ಗೌಡ, ಗೊವಿಂದ ಗೌಡ, ಗಣಪತಿ ಗೌಡ, ನಾರಾಯಣ ಗೌಡ, ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ