ಅಂಕೋಲಾ: ತಾಲೂಕಿನಲ್ಲಿ ಆಗಾಗ ಸಣ್ಣಪುಟ್ಟ ಅಡಿಕೆ ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇದ್ದು ಸುಂಕಸಾಳ ವ್ಯಾಪ್ತಿಯಲ್ಲಿ ಅಂತಹುದೇ ಮತ್ತೊಂದು ಪ್ರಕರಣ ದಾಖಲಾಗಿದೆ. ತಮ್ಮ ಮೋಜು-ಮಸ್ತಿಗೋ ಅಥವಾ ಇತರೆ ಕಾರಣಗಳಿಂದ ಅಡಿಕೆ ಕದ್ದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ತಮ್ಮ ತೋಟದಲ್ಲಿರುವ ಅಡಿಕೆ ಕಳ್ಳತನವಾಗಿರುವ ಕುರಿತು ಸುಂಕಸಾಳದ ಶಂಕರ ಹುಲಿಯಪ್ಪ ಗೌಡ ಪೊಲೀಸ್ ದೂರು ನೀಡಿದ ಬೆನ್ನಿಗೆ,ಪ್ರಕರಣದ ಜಾಡು ಭೇದಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ,ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರೇ ಆದ ಗಣಪತಿ ಬಲೀಂದ್ರ ನಾಯ್ಕ (46), ನವೀನ ಮಂಜುನಾಥ ನಾಯ್ಕ(30) ಹಾಗೂ ಜೋಸೆಫ್ ಪಿಯಾದಾದ ವಾಸ್ (40)ಅಡಿಗೆ ಕಳ್ಳತನದ ಆರೋಪಿಗಳಾಗಿದ್ದು ,ಇವರು ತಾವು ಕದ್ದ ಅಡಿಕೆ ಹಾಗೂ ಅಡಿಕೆ ಗೊನೆಗಳನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಹುದುಗಿಸಿಟ್ಟಿದ್ದರು ಎನ್ನಲಾಗಿದೆ.
ಪಿಎಸ್ಐ ಪ್ರವೀಣ ಕುಮಾರ, ಪ್ರೊ. ಪಿ ಎ ಸೈ ಎಮ್ ಅಹಮ್ಮದ್, ಹೆಚ್ ಸಿ ಪರಮೇಶ ಎಸ್, ಚಾಲಕ ಜಗದೀಶ ನಾಯ್ಕ, ಸಿಬ್ಬಂದಿ ಶೇಖರ ಸಿದ್ದಿ, ಮಾರುತಿ ಕೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ