ದಾರಿಯಲ್ಲಿ ಸಿಕ್ಕಿದ್ದ ಬಂಗಾರದ ಆಭರಣ ಹಿಂತುರುಗಿಸಿ ಪ್ರಾಮಾಣಿಕತೆ ಮೆರೆದ ತರಕಾರಿ ವ್ಯಾಪಾರಿ: ಈತನ ಪ್ರಾಮಾಣಿಕತೆಗೊಂದು ಸಲಾಂ
ಸಿದ್ದಾಪುರ: ದಾರಿಯಲ್ಲಿ ಹೋಗುವಾಗ ಸಿಕ್ಕಿರುವ ಬಂಗಾರದ ಆಭರಣಗಳನ್ನು ಸಂಬಂಧಿಸಿದವರಿಗೆ ಮರಳಿಸುವ ಮೂಲಕ ತರಕಾರಿ ವ್ಯಾಪಾರಿಯೊಬ್ಬ ತನ್ನ ಪ್ರಾಮಾಣಿಕತೆ ಮೆರೆದಿದ್ದಾರೆ. ಸಂತೆ ಮಾರ್ಕೆಟ್ ಹತ್ತಿರ ಬೈಕ್ ನಲ್ಲಿ ಹೋಗುತ್ತಿರುವಾಗ ವ್ಯಕ್ತಿಯೊಬ್ಬರ 2 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳು ಬೈಕಿಂದ ಬಿದ್ದು ಕಳೆದು ಹೋಗಿತ್ತು.
ಈ ಸಂಬಂಧ ಆಭರಣ ಕಳೆದುಕೊಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತರಕಾರಿ ವ್ಯಾಪಾರಿಯಾದ ಗಣಪತಿ ಬಾಳ ನಾಯ್ಕ್ ಅವರಗುಪ್ಪ ಅವರಿಗೆ ಈ ಆಭರಣಗಳು ಸಿಕ್ಕಿದ್ದು, ಇದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಠಾಣೆಯಲ್ಲಿ ಪಿಎಸ್‌ಐ ಮಾಂತೇಶ್ ಕುಂಬಾರ ರವರ ಸಮಕ್ಷಮ ವಾರಸುದಾರರಿಗೆ ಮರಳಿಸಿದ್ದು, ಪೊಲೀಸರು ಮತ್ತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹಾಳದಕಟ್ಟಾ ನಿವಾಸಿಗಳಾಗಿದ್ದ ಮೂಲತಃ ಬನವಾಸಿಯವರಾದ ವಿದ್ಯಾಧರ ಬಾಬು ಕೊಚೆರಿ, ಸನ್ಮತಿ ವಿದ್ಯಾಧರ್ ಕೊಚೆರಿ ಇವರು ಬೈಕ್ ಮೇಲೆ ಹೋಗುತ್ತಿರುವಾಗ ಸಂತೆ ಮಾರುಕಟ್ಟೆಯಲ್ಲಿ 2 ಲಕ್ಷ ಮೌಲ್ಯದ ಆಭರಣಗಳ ಬಿದ್ದು ಹೋಗಿತ್ತು. ಅದನ್ನು ಅದನ್ನು ಪೊಲೀಸರು ಹುಡುಕುತ್ತಿರುವಾಗ ಅದು ತನಗೆ ಸಿಕ್ಕಿದೆ ಎಂದು ಪ್ರಾಮಾಣಿಕವಾಗಿ ಹೇಳಿ ಬಾಬು ನಾಯ್ಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕೊಟ್ಟ ಹಣವನ್ನೇ ಮರಳಿಸದೆ ತಲೆಮರೆಸಿಕೊಂಡು ತಿರುಗಾಡುವ ಈ ಕಾಲದಲ್ಲಿ ನಿಜವಾಗ್ಲು ಬಾಬು ನಾಯ್ಕರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಪ್ರಮಾಣಿಕತೆಯನ್ನು ನೀವು ಅಭಿನಂದಿಸಿ.
ವಿಸ್ಮಯ ನ್ಯೂಸ್, ಸಿದ್ದಾಪುರ