Big NewsImportant
Trending

ಅನ್ನ-ಆಹಾರವಿಲ್ಲದೆ ನರಳಾಡುತ್ತಿದ್ದ ವೃದ್ಧೆಯ ನೆರವಿಗೆ ನಿಂತ ನ್ಯಾಯಾಧೀಶೆ: ರಾತ್ರೋರಾತ್ರಿ ಸ್ಥಳಕ್ಕೆ ತೆರಳಿ ರಕ್ಷಣೆ

ವರ್ಷಗಳಿಂದ ಕತ್ತಲಕೋಣೆಯಲ್ಲಿ ನರಕಯಾತನೆ

ಕಾರವಾರ: ವರ್ಷಗಳಿಂದ ಅನ್ನ-ನೀರಿಲ್ಲದೇ ಕತ್ತಲ ಕೋಣೆಯಲ್ಲಿ ನರಳಾಡುತ್ತಿದ್ದ ವೃದ್ಧೆಯೊಬ್ಬರಿಗೆ ನ್ಯಾಯಾಧೀಶರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು, ಎದ್ದು ಓಡಾಡಲೂ ಆಗದ ಪರಿಸ್ಥಿತಿಯಲ್ಲಿದ್ದಾಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಖಿನ್ನತೆಗೆ ಒಳಗಾಗಿದ್ದು, ಮಲಗಿದ್ದಲ್ಲೆ ಮಲ- ಮೂತ್ರ ವಿಸರ್ಜನೆ ಮಾಡಿಕೊಂಡು ಅದರಲ್ಲೇ ನರಕಯಾತನೆ ಅನುಭವಿಸುತ್ತಿದ್ದರೂ ಮನೆಯರು ಈಕೆಯ ಆರೈಕೆಗೆ ಮುಂದಾಗಿರಲಿಲ್ಲ. ವಿಷಯ ತಿಳಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನಾಯಾಧೀಶರಾದ ರೇಣುಕಾ ರಾಯ್ಕರ್, ರಾತ್ರೋರಾತ್ರಿ ತಮ್ಮ ತಂಡದೊoದಿಗೆ ಸ್ಥಳಕ್ಕೆ ತೆರಳಿ ವೃದ್ಧೆಯ ಪರಿಸ್ಥಿತಿಯನ್ನ ಕಣ್ಣಾರೆ ಕಂಡು ಮರುಕಪಟ್ಟಿದ್ದಾರೆ.

ಶಿವ – ಗಣಪತಿ ದೇವಸ್ಥಾನಗಳ ಸರಣಿಗಳ್ಳತನ :  ದೇವರ ಮುಖಗವಚ, ಪ್ರಭಾವಳಿ, ದೊಡ್ದ ಗಂಟೆ, ಹುಂಡಿ ಹಣ ಕಳ್ಳತನ

ಈ ವೇಳೆ ನ್ಯಾಯಾಧೀಶರು ಮನೆಯವರು, ಸಂಬoಧಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರೆ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಬೇಕಿತ್ತು.ಅಲ್ಲಿಯಾದರೂ ನೋಡಿಕೊಳ್ಳುತ್ತಿದ್ದರು. ಆದರೆ, ಈ ರೀತಿ ಮಾಡಬಾರದಿತ್ತು ಎಂದು ಪ್ರಶ್ನಿಸಿದ್ದಾರೆ. ತಕ್ಷಣ 108 ಅಂಬ್ಯುಲೆನ್ಸ್ ಮೂಲಕ ವೃದ್ಧೆಯನ್ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರೊಂದಿಗೆ ಮಾತನಾಡಿ, ವೃದ್ಧೆಗೆ ಸಮರ್ಪಕವಾಗಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಇದಲ್ಲದೆ, ನಗರಸಭೆಯ ಮೂಲಕ ವೃದ್ಧೆಯ ಮನೆ ದುರಸ್ತಿ ಮಾಡಿಸಿ ಆಕೆಗೆ ವಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ ವೃದ್ಧೆಗೆ ಅವಶ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button