Follow Us On

WhatsApp Group
Important
Trending

ಸೊಸೈಟಿ‌ ಪಕ್ಕವೇ ಕುಸಿದುಬಿದ್ದು ಅಡುಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಸಾವು

ಭಟ್ಕಳ: ಕೂಲಿ ಮತ್ತು ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೋರ್ವ ಕುಸಿದುಬಿದ್ದು ಮೃತಪಟ್ಡ ಘಟನೆ ಇಲ್ಲಿನ ಸೊಸೈಟಿಯೊಂದರ ಸಮೀಪ ನಡೆದಿದೆ.

ಹೌದು, ನಗರದ ನವಾಯತ್ ಕಾಲೋನಿಯ ರಾಬಿತ್ ಸೊಸೈಟಿಯ ಹತ್ತಿರದಲ್ಲಿ ಶವಪತ್ತೆಯಾಗಿದೆ. ಮೃತವ್ಯಕ್ತಿ ಮೂರ್ಛೆರೋಗದಿಂದ ನರಳುತ್ತಿದ್ದು,ಇತ್ತೀಚೆಗೆ ಮದ್ಯಪಾನದ ಚಟ ಹೊಂದಿದ್ದ ಎನ್ನಲಾಗಿದೆ. ವಿಪರೀತ ಕುಡಿತದಿಂದ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಮೃತ ಮಂಜುನಾಥ ಚಂದನ ಮೊಗವೀರ (59 ವರ್ಷ) ಕುಂದಾಪುರ ತಾಲೂಕಿನ ನಾಗೂರು ಕಿರಿಮಂಜೇಶ್ವರ ನಿವಾಸಿಯಾಗಿದ್ದು, ಕೂಲಿ ಮತ್ತು ಅಡುಗೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.ನಗರ ಪೋಲೀಸ್‍ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ಭಟ್ಕಳ

Back to top button