ಬಾಲಕಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ: ಹೊತ್ತಿ ಉರಿದ ಪ್ರಿಡ್ಜ್ ಮತ್ತು ಸ್ಟೆಬಿಲೈಸರ್

ಅಂಕೋಲಾ : ಶಾರ್ಟ್ ಸರ್ಕೀಟನಿಂದ ಅಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಧೃತಿಗೆಡದ ಬಾಲಕಿ, ಸಮಯ ಪ್ರಜ್ಞೆ ತೋರಿ ಭಾರೀ ಅನಾಹುತವೊಂದು ತಪ್ಪಿಸಿದ ಘಟನೆ ಗುಡಿಗಾರ ಗಲ್ಲಿಯಲ್ಲಿ ನಡೆದಿದೆ.

ಪತ್ರಕರ್ತ ಮತ್ತು ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ ಬಾಂಬಳೇಕರ ಇವರ ಪುತ್ರಿ ಪಿ.ಎಂ ಪ್ರೌಢ ಶಾಲೆಯ 8ನೇ ವರ್ಗದ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ನಾಗರಾಜ ಜಾಂಬಳೇಕರ ಇವಳೇ ಸಮಯಪ್ರಜ್ಞೆ ಮೆರೆದ ಬಾಲಕಿ. ಈಕೆ ತನ್ನ ದೊಡ್ಡಮ್ಮನ ಮನೆಯಲ್ಲಿ ತಾಯಿಯ ಜೊತೆ ಇದ್ದಳು.

ಬುಧವಾರ ರಾತ್ರಿ 10 ಗಂಟೆಗೆ ಹೈ ವೋಲ್ಟೇಜ್ ಅಥವಾ ಇತರೆ ಕಾರಣದಿಂದ ಏಕಾಏಕಿ ಶಾರ್ಟ್ ಸರ್ಕೀಟ್ ಆಗಿ ರೆಫ್ರಿಜರೇಟರ ಸ್ಟ್ಯಾಬಿಲೈಸರ ಬೆಂಕಿ ಹತ್ತಿ ಉರಿಯತೊಡಗಿ ಫ್ರಿಜ್ಜಿಗೂ ಆವರಿಸಿತು. ಪಕ್ಕದಲ್ಲೇ ಎರಡು ತುಂಬಿದ ಗ್ಯಾಸ ಸಿಲಿಂಡರ ಇದ್ದವು.

ಈ ಅಚಾನಕ ಘಟನೆಯಿಂದ ಕೊಂಚ ವಿಚಲಿತರಾದ ಬಾಲಕಿಯ ತಾಯಿ, ಅಜ್ಜಿ, ಮತ್ತು ದೊಡ್ಡಮ್ಮ ಶಾರ್ಟ ಸರ್ಕಿಟ್ ಎಂದು ಅರಿಯದೇ. ಬೆಂಕಿ ನಂದಿಸಲು ನೀರು ತಂದು ಸುರಿಯಲು ಮುಂದಾದಾಗ ಬಾಲಕಿ ಅವರನ್ನು ತಡೆದು ಸಂಭವನೀಯ ಪ್ರಾಣಾಪಾಯ ತಪ್ಪಿಸಿದಂತಾಗಿದೆ.

ಅಷ್ಟೇ.ಅಲ್ಲದೇ ಕೂಡಲೇ ಮನೆಯಿಂದ ಹೊರಗೋಡಿ ಕಟ್ಟಿಗೆ ತಂದು ಖುರ್ಚಿ ಏರಿ, ಮನೆಯ ವಿದ್ಯುತ್ ಮೀಟರ್ ಪಕ್ಕ ಇರುವ ಮೇನ್ ಸ್ವಿಚ್ ಆಫ್ ಮಾಡಿ ಈ ಮೂಲಕ ಆಗಬಹುದಾದ ಹೆಚ್ಚಿನ ಅನಾಹುತ ಮತ್ತು ಹಾನಿ ತಪ್ಪಿಸಿ ತನ್ನ ಸಮಯ ಪ್ರಜ್ಞೆ ಮೆರೆದಿದ್ದಾಳೆ.

ಶಾಲಾ-ಕಾಲೇಜುಗಳು ,ಸಂಘ-ಸಂಸ್ಥೆಗಳು,ಸಂಬಂಧಿಸಿದ ಇಲಾಖೆಗಳು ಈ ಬಾಲಕಿಯನ್ನು ಗುರುತಿಸಿ , ಗೌರವಿಸುವ ಮೂಲಕ ಇತರೆ ವಿದ್ಯಾರ್ಥಿಗಳಿಗೂ ಪ್ರೇರೇಪಣೆಯಾಗಬೇಕೆಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version