Important
Trending

ಖಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಅಸ್ತಮಾದಿಂದ ಬಳಲುತ್ತಿದ್ದಳು ವೃದ್ಧ ಮಹಿಳೆ

ಅಂಕೋಲಾ:ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾಸಗೋಡದ ನಡುಬೇಣದ ಪಕ್ಕದ ಗದ್ದೆ ಬಯಲ ಬಾವಿಯೊಂದರಲ್ಲಿ ಸಂಭವಿಸಿದೆ.  ಸೂರ್ವೆ ನಿವಾಸಿ ಸುಶೀಲಾ ಗಜಾನನ ಗುನಗಾ (70) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.

ತಂದೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು? ಸಾವಿಗೆ ಶರಣಾದ ಮಗ

ಸುಮಾರು 30 ವರ್ಷಗಳ ಹಿಂದೆ ಈಕೆಯ ಪತಿ ಮನೆ ಬಿಟ್ಟು ಹೋಗಿದ್ದು ಈಕೆ ಒಬ್ಬಳೇ ಮನೆಯಲ್ಲಿ ವಾಸವಾಗಿದ್ದಳು, ವರ್ಷದಿಂದೀಚೆಗೆ ತೀವ್ರ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ಈಕೆ ತನ್ನ ಮನೆಗೆ ಹತ್ತಿರವಿರುವ ಬಾಸಗೋಡದ ಲಕ್ಷ್ಮಣ ನಾಯಕ ಎನ್ನುವವರ ಗದ್ದೆಯ ಬಾವಿಯಲ್ಲಿ ಹಾರಿ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸಂಬಂಧಿ ಓರ್ವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪಿ ಎಸ್ ಐ ಮಹಾಂತೇಶ ವಾಲ್ಮೀಕಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೋಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button