Important
Trending

Uttara Kannada News: ಮನೆಗಳ್ಳತನದ ಆರೋಪಿ ಅರೆಸ್ಟ್:ಈತನ ಮೇಲಿದೆ 20ಕ್ಕೂ ಹೆಚ್ಚು ಪ್ರಕರಣ

ಕೋಳಿ ಫಾರಂ ಹಳೆ ಕಟ್ಟಡದ ಬಳಿ ಪತ್ತೆಯಾದ ಬೆಳ್ಳಿ ಸಾಮಾಗ್ರಿ

ಅಂಕೋಲಾ: ಈ ಹಿಂದೆ ಉತ್ತರಕನ್ನಡ (Uttara Kannada) ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಸೇರಿದಂತೆ ಸುಮಾರು 20 ಕ್ಕೂ ಪ್ರಕರಣಗಳಲ್ಲಿ ಆರೋಪಿಯಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆರೋಪಿತನೋರ್ವ ಈಗ ಮತ್ತೆ ಅಂಕೋಲಾ ತಾಲೂಕಿನ ಕೋಗ್ರೆ ಮನೆಗಳ್ಳತನ ಪ್ರಕರಣದಲ್ಲಿ ಜೈಲು ಸೇರುವಂತಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಅಂಕೋಲಾ ತಾಲೂಕಿನ ಕೋಗ್ರೆಯಲ್ಲಿ ಮುಖ್ಯ ರಸ್ತೆಯಂಚಿನ ನಿವೃತ್ತ ಶಿಕ್ಷರಯೋರ್ವರ ಮನೆ ಕಳ್ಳತನವಾಗಿ ಎಲ್ಲಡೆ ಸುದ್ದಿಯಾಗಿತ್ತು. ಮನೆಯಲ್ಲಿ ಯಾರೂ ಇರದ ವೇಳೆ ಒಳನುಗ್ಗಿದ್ದ ಕಳ್ಳರು , ಕಪಾಟಿನಲ್ಲಿದ್ದ ಸಾಮಾಮಗಳನ್ನು ಚೆಲ್ಲಾಪಿಲ್ಲಿ ಮಾಡಿ ರೂ 55000 ನಗದು, ಬಂಗಾರದ ಕಿವಿ ಓಲೆ ಮತ್ತು ಬೆಳ್ಳಿಯ ದೀಪದ ಸಮಯಗಳು ಮತ್ತು ಲೋಟಗಳು ಸೇರಿದಂತೆ ಅಂದಾಜು 73000 ರೂ ಸ್ವತ್ತನ್ನು ಕದ್ದು ಪರಾರಿಯಾಗಿದ್ದರು.

ಅದಾದ ಬೆನ್ನಲ್ಲೇ ಎಂ.ಎನ್ ಫಾರ್ಮನಲ್ಲಿರುವ ದೊಡ್ದ ಮನೆಯೊಂದರ ಡೋರ್ ಲಾಕ್ ಮುರಿದು ಒಳ ನುಗ್ಗಿದ್ದ ಯಾರೋ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದರಾದರೂ ಅವರಂದು ಕೊಂಡಂತೆ ಅಲ್ಲಿ ನಗದು ಹಣ ಬಂಗಾರ ಮತ್ತಿತರ ಬೆಲೆ ಬಾಳುವ ವಸ್ತುಗಳು ಸಿಗದೇ ಮರಳಿದ್ದರು. ಈ ಎರಡೂ ಘಟನೆಗಳ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದು ಸಹಜವಾಗಿಯೇ ಸ್ಥಳೀಯರಲ್ಲಿ ಆತಂಕಕ್ಕೂ ಕಾರಣವಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೋಲೀಸರು ಬೆರಳಚ್ಚು ತಜ್ಞರ ತಂಡ ಕರೆಸಿ ಮತ್ತಿತರ ರೀತಿಯಲ್ಲಿ ತನಿಖೆ ಚುರುಕುಗೊಳಿಸಿ ಕೆಲ ಮಹತ್ವದ ಸಾಕ್ಷ್ಯಾಧಾರ ಕಲೆ ಹಾಕಿದ್ದರು. ಎನ್ನಲಾಗಿದ್ದು, ಕಳ್ಳತನ ನಡೆಸಿದ್ದ ಆರೋಪಿತನನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಕಳ್ಳತನ ನಡೆಸಿದ್ದ ಎನ್ನಲಾದ ಆರೋಪಿತ ತಾನು ಕದ್ದ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಮನೆಯ ಹತ್ತಿರದಲ್ಲಿರುವ ಹಳೆಯ ಕೋಳಿ ಫಾರ್ಮ ಕಟ್ಟಡದ ನೆಲಗಟ್ಟಿನ ಮೇಲೆ ಬೆಳೆದಿದ್ದ ಹುಲ್ಲು ಗಿಡಗಂಟೆಗಳ ಮದ್ಯೆ ಅಡಗಿಸಿಟ್ಟಿದ್ದನ್ನು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟ ಎನ್ನಲಾಗಿದೆ. ಪೋಲೀಸರು ತಾವು ವಶಕ್ಕೆ ಪಡೆದ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದಾಗ ಆತ ಅಲ್ಲಿ ಅಡಗಿಸಿಟ್ಟ ಬೆಳ್ಳಿ ಸಾಮಗ್ರಿಗಳನ್ನು ಪೋಲೀಸರಿಗೆ ಒಪ್ಪಿಸಿದ್ದಾನೆ . ಕೋಗ್ರೆ ಮನೆಗಳ್ಳತನ ಯಾರು ಮಾಡಿರ ಬಹುದು. ? ಸ್ಥಳೀಯರೇ ? ಹೊರಗಿನವರೇ ಹೀಗೆ ಹತ್ತಾರು ರೀತಿಯ ಚರ್ಚೆ ಗ್ರಾಮಸ್ತರಲ್ಲಿ ನಡೆದಿದ್ದು , ಪೊಲೀಸರು ಕಳ್ಳರನ್ನು ಬಂಧಿಸಿರುವ ಸುದ್ದಿ ಇನ್ನಷ್ಟು ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ಈ ಹಿಂದೆ ಅಂಕೋಲಾ ತಾಲೂಕಿನ 12 ಕ್ಕೂ ಹೆಚ್ಚು ಕೇಸ್, ಕಾರವಾರ 2, ಗೋಕರ್ಣ 5 , ಹೊನ್ನಾವರದ 1 ಸೇರಿ ಸುಮಾರು 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿ, ಹಲವು ಬಾರಿ ಜೈಲು ಸೇರಿ , ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದಿದ್ದ ಅಂಕೋಲಾ ತಾಲೂಕಿನ ಬಬ್ರುವಾಡ ಗ್ರಾಮದ ಪ್ರಶಾಂತ ನಾಯ್ಕ ಎಂಬಾತನೇ ಮತ್ತೆ ಕೋಗ್ರೆ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿತನಾಗಿ ಜೈಲು ಸೇರುವಂತಾಗಿದೆ. ಈತನ ಜೊತೆ ಈ ಹಿಂದೆ ಬೈಕ್ ಕಳ್ಳತನ ಮತ್ತು ಈ ಬಾರಿ ಮನೆಗಳ್ಳತನ ಪ್ರಕರಣದಲ್ಲಿ ಸಾಥ ನೀಡಿದ್ದ ಎನ್ನಲಾದ ಅದೇ ಗ್ರಾಪಂ ವ್ಯಾಪ್ತಿಯ ಇನ್ನೋರ್ವ ಅಪ್ರಾಪ್ತ ವಯಸ್ಕನಾಗಿರುವುದರಿಂದ ಕಳ್ಳತನ ಪ್ರಕರಣದಲ್ಲಿ ಕಾನೂನಿನ ಕುಣಿಕೆಯಿಂದ ಬಚಾವ ಆದ ಎನ್ನಲಾಗಿದೆ.

ಸ್ಥಳೀಯ ನಾಗರೀಕರ ನಿದ್ದೆಗೆಡಿಸಿದ್ದ ಮನೆಗಳ್ಳತನ ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ್ದ ಪೋಲಿಸ್ ಇಲಾಖೆ,ಸಿಪಿಎಸ್ ಸಂತೋಷ್ ಶೆಟ್ಟಿ ರಾತ್ರಿ ವೇಳೆ ತಾವೇ ಸ್ವತಃ ಕಳ್ಳರ ಜಾಡು ಪತ್ತೆ ಹಚ್ಚಲು ಮುಂದಾಗಿ ಸ್ಥಳೀಯರ ವಿಶ್ವಾಸಕ್ಕೆ ಕಾರಣರಾಗಿದ್ದರು. ಅಲ್ಲದೇ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ತಂಡ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ಇತ್ತೀಚೆಗೆ ಬೈಕ್ ಕಳ್ಳರನ್ನು ಹಿಡಿದಿದ್ದ ತಂಡ ಶೀಘ್ರವೇ ಕೋಗ್ರೆ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವ ವಿಶ್ವಾಸ ವ್ಯಕ್ತಪಡಿಸಿತ್ತು.

ಈ ಕುರಿತು ವಿಸ್ಮಯ ವಾಹಿನಿ ವಿಸ್ತೃತ ವರದಿ ಪ್ರಕಟಿಸಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನೂತನ ಪಿಎಸ್ಐ ಗಳಾದ ಅಶೋಕ ಧರೆಪ್ಪ ನವರ, ಸುನೀಲ ಹುಲ್ಲೊಳ್ಳಿ, ಜಯಶ್ರೀ ಪ್ರಭಾಕರ ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಹಲವು ಪ್ರಕರಣ ಭೇದಿಸಿರುವ ಶ್ರೀಕಾಂತ ಕಟಬರ್ ಮತ್ತಿತರ ಸಿಬ್ಬಂದಿಗಳು ಕಳ್ಳರ ಪತ್ತೆಯಲ್ಲಿ ವಿಶೇಷ ಆಸಕ್ತಿ ವಹಿಸಿ,ಯಶಸ್ವಿ ಕಾರ್ಯಾಚರಣೆಗೆ ಸಹಕರಿಸಿದ್ದರು.

ಕೊನೆಗೂ ಕೋಗ್ರೆ ಕಳ್ಳತನ ಪ್ರಕರಣದ ಆರೋಪಿ ಜೈಲು ಸೇರುವಂತಾಗಿದ್ದು, ಕಳ್ಳತನದ ಕೃತ್ಯದ ಕುರಿತಂತೆ ಭಾಗಿಯಾದವರು ಮತ್ತು ಆರೋಪಿತಿನಿಂದ ವಶಪಡಿಸಿಕೊಂಡ ಸ್ವತ್ತು ಮತ್ತಿತರ ನಿಖರ ಅಂಶಗಳ ಹೆಚ್ಚಿನ ಮಾಹಿತಿ ಪೊಲೀಸರಿಂದ ತಿಳಿದು ಬೇಕಿದೆ. ಕಳ್ಳ ಹೇಗೂ ಪೊಲೀಸರ ವಶದಲ್ಲಿದ್ದಾನೆ ಎಂದು ಸಾರ್ವಜನಿಕರು ನಿರ್ಲಕ್ಷ್ಯ ಮಾಡದೇ, ತಮ್ಮ ಮನೆ ಬಿಟ್ಟು ಹೊರಗೆ ಹೋಗುವಾಗ ಸ್ಥಳೀಯ ಪೊಲೀಸರಿಗೆ ತಿಳಿಸಿ ಹೋಗುವದು, ಮತ್ತಿತರ ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button