PGCIL Recruitment 2023: ಬೃಹತ್ ನೇಮಕಾತಿ: ಡಿಪ್ಲೋಮಾ ಆದವರು ಅರ್ಜಿ ಸಲ್ಲಿಸಿ: 1 ಲಕ್ಷದ ವರೆಗೆ ವೇತನ

ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಒಂದು ಶುಭಸುದ್ದಿ. ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್, ( PGCIL Recruitment 2023) 425 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಸಿವಿಲ್ ಇಂಜಿನಿಯರಿoಗ್‌ನಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದವರು ಅರ್ಜಿಯನ್ನು (ಉದ್ಯೋಗ ಅರ್ಜಿ) ಸಲ್ಲಿಸಬಹುದಾಗಿದೆ. ಪವರ್ ಗ್ರಿಡ್ ನಲ್ಲಿ ( power grid ) ಹುದ್ದೆಗಳಿಗೆ ಅನುಗುಣವಾಗಿ 25 ಸಾವಿರದಿಂದ 1 ಲಕ್ಷದ 17 ಸಾವಿರದ ವರೆಗೂ ಮಾಸಿಕ ವೇತನ ಇರಲಿದೆ.

ಇದನ್ನೂ ಓದಿ: 10ನೇ ತರಗತಿ, 12ನೇ ತರಗತಿ ಹಾಗು ಡಿಪ್ಲೋಮಾ ಪಾಸಾದವರು Apply Now

(power grid recruitment 2023) ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಸೆಪ್ಟೆಂಬರ್ 23, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆಯ ಫಲಿತಾಂಶ ಅಕ್ಟೋಬರ್ ನಲ್ಲಿ ಪ್ರಕಟವಾಗಲಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

pgcil-recruitment-2023
ಇಲಾಖೆPower Grid Corporation of India Limited
ಒಟ್ಟು ಹುದ್ದೆಗಳು425
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಸೆಪ್ಟೆಂಬರ್ 23, 2023
ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ

(PGCIL Recruitment 2023) ಡಿಪ್ಲೋಮಾ ಟ್ರೈನಿ- ಎಲೆಕ್ಟ್ರಿಕಲ್ 344 ಹುದ್ದೆಗಳು, ಡಿಪ್ಲೋಮಾ ಟ್ರೈನಿ- ಸಿವಿಲ್ 68 ಹುದ್ದೆಗಳು, ಡಿಪ್ಲೋಮಾ ಟ್ರೈನಿ- ಎಲೆಕ್ಟ್ರಾನಿಕ್ಸ್ 13 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಕೆಳಗಡೆ ಅರ್ಜಿ ಸಲ್ಲಿಸುವ ಲಿಂಕ್, ( pgcil recruitment 2023 apply online) ಅಧಿಕೃತ ನೋಟೀಫಿಕೇಷನ್ ಕುರಿತ ಮಾಹಿತಿ ನೀಡಲಾಗಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು, ಇವುಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು (ಉದ್ಯೋಗ ಅರ್ಜಿ) ಸಲ್ಲಿಸಬಹುದಾಗಿದೆ.

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version