Important
Trending

ಸಿಲೆಂಡರ್ ಸ್ಫೋಟ: ಅಂಗಡಿ ಛಿದ್ರ ಛಿದ್ರ: ಅಪಾರ ಹಾನಿ

ಸ್ಫೋಟದ ರಭಸಕ್ಕೆ ಅಂಗಡಿ ಛಿದ್ರ ಛಿದ್ರ

ಸಿದ್ದಾಪುರ: ಅಂಗಡಿಯೊoದರಲ್ಲಿ ಸಿಲೆಂಡರ್ ಸ್ಫೋಟಗೊಂಡು ಅಂಗಡಿಯಲ್ಲಿದ್ದ ವಸ್ತುಗಳು ನಾಶವಾದ ಘಟನೆ ತಾಲೂಕಿನ ಬೇಡ್ಕಣಿ ಸಮೀಪವಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕ್ರಾಸ್ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ತಂದೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು? ಸಾವಿಗೆ ಶರಣಾದ ಮಗ

ಘಟನೆಯಲ್ಲಿ ಸುಮಾರು 40 ಸಾವಿರ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟದ ರಭಸಕ್ಕೆ ಅಂಗಡಿ ಛಿದ್ರ ಛಿದ್ರವಾಗಿದೆ. ಅಲ್ಲಿದ್ದ ತಗಡು ಮತ್ತಿತರ ವಸ್ತುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿವೆ. ಘಟನೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ , ಸಿದ್ದಾಪುರ

Back to top button